ಮಂಡ್ಯ: ಮಂಡ್ಯದ (Mandya) ಮದ್ದೂರು (Maddur) ಬಳಿಯ ಗೆಜ್ಜಲಗೆರೆಯ (Gejjala Gere) ಮನ್‌ಮುಲ್ (Manmul) ಮೆಗಾ ಡೈರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ (Fire) ಕಾಣಿಸಿಕೊಂಡಿದೆ.
ಕಳೆದ 5 ತಿಂಗಳ ಹಿಂದಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಉದ್ಘಾಟನೆಯಾಗಿದ್ದ ಮೆಗಾ ಡೈರಿಯಲ್ಲಿ ಭಾನುವಾರ ಬೆಳಗ್ಗೆ 7 ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
Advertisement
Advertisement
ಶಾರ್ಟ್ ಸರ್ಕ್ಯೂಟ್‌ನಿಂದ ಪ್ಯಾಕಿಂಗ್ ಮೆಟೀರಿಯಲ್ಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಲಕ್ಷಾಂತರ ರೂ. ಮೌಲ್ಯದ ಪೇಡಾ, ತುಪ್ಪದ ಪ್ಯಾಕೆಟ್ ನಾಶವಾಗಿದೆ. ಅದೃಷ್ಟವಶಾತ್ ದೊಡ್ಡ ದುರಂತದಿಂದ ಮನ್‌ಮುಲ್ ಪಾರಾಗಿದೆ. ಬೆಂಕಿ ಬಿದ್ದಿದ್ದ ಪ್ಯಾಕಿಂಗ್ ಮೆಟೀರಿಯಲ್ಸ್ ಪಕ್ಕವೇ ಮೆಗಾಡೈರಿ ಪ್ಲಾಂಟ್ ಕಂಟ್ರೋಲರ್ ಇದ್ದು, ಸದ್ಯ ಅದಕ್ಕೆ ಯಾವುದೇ ಹಾನಿ ಆಗಿಲ್ಲ. ಒಂದು ವೇಳೆ ಕಂಟ್ರೋಲರ್‌ಗೆ ಹಾನಿಯಾಗಿದ್ದರೆ ದೊಡ್ಡ ದುರಂತ ಸಂಭವಿಸುವ ಸಾಧ್ಯತೆ ಇತ್ತು. ಇದರಿಂದ ಇಡೀ ಮೆಗಾ ಡೈರಿಗೆ ಹಾನಿಯಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ. ಈಗ ಅಗ್ನಿಶಾಮಕ ಸಿಬ್ಬಂದಿ ಸಂಪೂರ್ಣ ಬೆಂಕಿ ನಂದಿಸಿರಿದ್ದಾರೆ. ನಾಶಗೊಂಡ ಪದಾರ್ಥಗಳನ್ನು ಸಿಬ್ಬಂದಿ ತೆರವು ಮಾಡುತ್ತಿದ್ದಾರೆ. ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತ- ಗೋದಾಮು ಮಾಲೀಕ ಅರೆಸ್ಟ್
Advertisement
Advertisement
ಮನ್‌ಮುಲ್‌ನಲ್ಲಿ ಅಗ್ನಿ ಅವಘಡ ಪ್ರಕರಣ ಇದೀಗ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಮನ್‌ಮುಲ್‌ನ ಮೆಗಾ ಡೈರಿ ಘಟಕದ ಪ್ಯಾಕಿಂಗ್ ವಿಭಾಗದಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, ಆಡಳಿತ ಮಂಡಳಿ ಮಾಧ್ಯಮದವರನ್ನು ಹೊರಗಿಟ್ಟು ಗೌಪ್ಯತೆ ಕಾಪಾಡುತ್ತಿದೆ. ಅಧ್ಯಕ್ಷ, ನಿರ್ದೇಶಕರು, ಎಂಡಿ ಸೂಚನೆಯಂತೆ ನಿರ್ಬಂಧ ಹೇರಲಾಗಿದೆ. ಮನ್‌ಮುಲ್ ಹೊರಗೇಟ್‌ನಲ್ಲಿಯೇ ಮಾಧ್ಯಮದವರಿಗೆ ತಡೆಯಲಾಗಿದೆ. ಕೆಲವು ನಿರ್ದೇಶಕರ ಸಮ್ಮುಖದಲ್ಲೇ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ದುರಂತದ ಬಗ್ಗೆ ಮಾಹಿತಿ ನೀಡುವಲ್ಲೂ ಆಡಳಿತ ಮಂಡಳಿ ಹಿಂದೇಟು ಹಾಕುತ್ತಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಒಂದೇ ಕುಟುಂಬದ ಮೂವರು ಸಜೀವ ದಹನ
Web Stories