ಮೈಸೂರು: ಇಲ್ಲಿನ ಅರಮನೆಯ ಟಿಕೆಟ್ ಕೌಂಟರ್ ಪಕ್ಕದ ಎಟಿಎಂ ಕೇಂದ್ರದಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡ ಪರಿಣಾಮ ಎಟಿಎಂ ಕೇಂದ್ರ, ಟಿಕೆಟ್ ಕೌಂಟರ್ ಹಾಗೂ ಪೊಲೀಸ್ ವಿಶ್ರಾಂತಿ ಗೃಹ ಬೆಂಕಿಗೆ ಅಹುತಿಯಾಗಿವೆ.
ಅರಮನೆಯ ವರಾಹ ಗೇಟ್ ಬಳಿಯ ಎಟಿಎಂ ಯಂತ್ರವನ್ನು ದುರಸ್ಥಿಗಾಗಿ ಗುರುವಾರ ಬ್ಯಾಂಕ್ ಸಿಬ್ಬಂದಿ ತೆಗೆದುಕೊಂಡು ಹೋಗಿದ್ದರು. ಇದರಿಂದ ಎಟಿಎಂ ಯಂತ್ರ ಸುಟ್ಟು ಹೋಗುವುದು ತಪ್ಪಿದಂತಾಗಿದೆ.
ಬೆಂಕಿಯ ಪರಿಣಾಮ ಅರಮನೆಯ ಗೋಡೆಗಳು ಕೂಡ ಹಾಳಾಗಿವೆ. ಆದರೆ ಅಚ್ಚರಿ ಎಂಬಂತೆ ಎಟಿಎಂ ಪಕ್ಕದ ಗಣಪತಿ ದೇವಸ್ಥಾನಕ್ಕೆ ಯಾವುದೇ ಹಾನಿ ಆಗಿಲ್ಲ. ಬಹು ವರ್ಷಗಳ ಹಿಂದೆ ಮರದ ಅರಮನೆಗೆ ಬೆಂಕಿ ಬಿದ್ದಿದ್ದ ಸಂದರ್ಭದಲ್ಲೂ ಈ ಆತ್ಮವಿಲಾಸ ಗಣಪತಿ ದೇಗುಲಕ್ಕೆ ಹಾನಿಯಾಗಿರಲಿಲ್ಲ. ಹೀಗಾಗಿ, ಅವತ್ತು ದೇಗುಲವನ್ನು ಸೇರಿಸಿಕೊಂಡೆ ಅರಮನೆ ನಿರ್ಮಿಸಲಾಗಿತ್ತು. ಇಂದು ಕೂಡ ಬೆಂಕಿ ಅವಘಡ ಸಂಭವಿಸಿದ್ದು, ದೇಗುಲಕ್ಕೆ ಯಾವ ಧಕ್ಕೆ ಆಗದಿರುವುದು ಆಸ್ತಿಕರಲ್ಲಿ ಅಚ್ಚರಿ ಮೂಡಿಸಿದೆ.