ನವದೆಹಲಿ: ಬಿಜೆಪಿ ಮಹಿಳಾ ಸದಸ್ಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ ಆರೋಪದ ಮೇಲೆ ಶಿವಸೇನೆಯ ಸಂಸದ ಸಂಜಯ್ ರಾವತ್ ವಿರುದ್ಧ ಕೇಸ್ ದಾಖಲಾಗಿದೆ.
ಸಂಸದರು ಟಿವಿ ಸಂದರ್ಶನವೊಂದರಲ್ಲಿ ಬಿಜೆಪಿ ಮಹಿಳಾ ಸದಸ್ಯರ ವಿರುದ್ಧ ನಿಂದನೀಯ ಪದಗಳನ್ನು ಬಳಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ರಾವತ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾದ ಕಾರ್ಯದರ್ಶಿ ಅವರು ಡಿ. 9ರಂದು ಮಂಡವಾಲಿ ಪೊಲೀಸ್ ಠಾಣೆಯಲ್ಲಿ ರಾವುತ್ ವಿರುದ್ಧ ದೂರು ನೀಡಿದ್ದರು.
Advertisement
Advertisement
ಮರಾಠಿ ಸುದ್ದಿ ವಾಹಿನಿಯೊಂದರಲ್ಲಿ ಪ್ರಸಾರವಾದ ಸಂದರ್ಶನವೊಂದರಲ್ಲಿ ರಾವುತ್ ಅವರು ಬಿಜೆಪಿ ಮಹಿಳಾ ಕಾರ್ಯಕರ್ತರನ್ನು ನಿಂದಿಸುವ ಕಾಮೆಂಟ್‌ಗಳನ್ನು ಮಾಡಿದ್ದಾರೆ. ರಾವುತ್ ಅವರು ಬಿಜೆಪಿ ಕಾರ್ಯಕರ್ತರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಜೊತೆಗೆ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕೊರೊನಾ ವ್ಯಾಕ್ಸಿನ್ ಸರ್ಟಿಫಿಕೇಟ್‍ನಿಂದ ಮೋದಿ ಫೋಟೋ ತೆಗೆಯಲು ಸೂಚನೆ
Advertisement
Advertisement
ಇದಕ್ಕೆ ಪ್ರತಿಕ್ರಿಯಿಸಿದ ರಾವತ್, ರಾಜಕೀಯ ದುರುದ್ದೇಶದಿಂದ ಮತ್ತು ನನ್ನನ್ನು ಹತ್ತಿಕ್ಕಲು ನನ್ನ ವಿರುದ್ಧ ದೂರು ದಾಖಲಿಸಲಾಗಿದೆ. ಸಿಬಿಐ, ಐಟಿ, ಇಡಿ ಪ್ರಯೋಗವನ್ನು ನನ್ನ ವಿರುದ್ಧ ಮಾಡಲಾಗುವುದಿಲ್ಲ ಎಂದು ಮಾನಹಾನಿಯ ದೂರನ್ನು ಹಾಕಲಾಗಿದೆ. ಈ ರೀತಿಯ ಸುಳ್ಳು ದೂರನ್ನು ನೀಡುವುದು ಸರಿಯಲ್ಲ ಎಂದು ಶಿವಸೇನೆ ಸಂಸದ ರಾವುತ್ ಆರೋಪಿಸಿದರು. ಇದನ್ನೂ ಓದಿ: ತಾಯಿ ಗಂಗೆ, ಕಾಶಿ ವಿಶ್ವನಾಥ ಎಲ್ಲರಿಗೂ ಸೇರಿದವರು: ಮೋದಿ