ಮುಂಬೈ: ಡಿಎಂಕೆ ನಾಯಕ ಮತ್ತು ತಮಿಳುನಾಡು (Tamil Nadu) ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರ ಸನಾತನ ಧರ್ಮದ (Sanatana Dharma) ಹೇಳಿಕೆ ಎಲ್ಲೆಡೆ ಆಕ್ರೋಶಕ್ಕೆ ಗುರಿಯಾಗಿರುವ ಬೆನ್ನಲ್ಲೇ ಅವರ ವಿರುದ್ಧ ಮಹಾರಾಷ್ಟ್ರದಲ್ಲಿ (Maharashtra) ಎಫ್‌ಐಆರ್ (FIR) ದಾಖಲಿಸಲಾಗಿದೆ.
ಮುಂಬೈನ (Mumbai) ಮೀರಾ ರೋಡ್ ಪೊಲೀಸರು ಐಪಿಸಿ ಸೆಕ್ಷನ್ 153 (ಎ) ಮತ್ತು 295 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಉದಯನಿಧಿ ವಿರುದ್ಧ ವಿಶ್ವ ಹಿಂದೂ ಪರಿಷತ್ (VHP) ಮೀರಾ ರೋಡ್ ಠಾಣೆಗೆ ದೂರು ನೀಡಿದ ಹಿನ್ನೆಲೆ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಕೋಝಿಕ್ಕೋಡ್‌ನಲ್ಲಿ ಮೃತಪಟ್ಟ ವ್ಯಕ್ತಿಗೆ ನಿಫಾ ವೈರಸ್ ದೃಢ
ಮಂಗಳವಾರ ಮುಂಜಾನೆ ತಮಿಳುನಾಡಿನ ಬಿಜೆಪಿ ನಿಯೋಗವು ಸನಾತನ ಧರ್ಮದ ವಿರುದ್ಧ ಸ್ಟಾಲಿನ್ ಹೇಳಿಕೆ ಕುರಿತು ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿ ರಾಜ್ಯ ಪೊಲೀಸರಿಗೆ ಮನವಿ ಪತ್ರ ನೀಡಿದೆ. ಇದನ್ನೂ ಓದಿ: ಇನ್ಮುಂದೆ ಚುನಾವಣಾ ಸಿಬ್ಬಂದಿಗೆ ಬೂತಲ್ಲೇ ಅಂಚೆ ಮತದಾನ ಕಡ್ಡಾಯ
ಸೆಪ್ಟೆಂಬರ್ 2ರಂದು ಚೆನ್ನೈನಲ್ಲಿ ತಮಿಳುನಾಡು ಪ್ರಗತಿಪರ ಲೇಖಕರು ಮತ್ತು ಕಲಾವಿದರ ಸಂಘವನ್ನು ಉದ್ದೇಶಿಸಿ ಮಾತನಾಡುವ ಸಂದರ್ಭ ಸ್ಟಾಲಿನ್ ಸನಾತನ ಧರ್ಮವನ್ನು ಕೊರೊನಾ ವೈರಸ್, ಮಲೇರಿಯಾ ಹಾಗೂ ಡೆಂಗ್ಯೂ ರೋಗಕ್ಕೆ ಹೋಲಿಸಿ ಮಾತನಾಡಿದ್ದರು. ಇವರ ಈ ವಿವಾದಾತ್ಮಕ ಹೇಳಿಕೆಗೆ ದೇಶವ್ಯಾಪಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: One Nation One Election: ಸಂವಿಧಾನದ 5 ಆರ್ಟಿಕಲ್‌ಗಳಿಗೆ ಮಾಡಬೇಕಾಗುತ್ತೆ ತಿದ್ದುಪಡಿ
Web Stories