ತುಮಕೂರು: ಬಜರಂಗದಳ ಶೌರ್ಯ ಸಂಚಲನ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಭಾಷಣ ಮಾಡಿದ್ದ ವಿಎಚ್‌ಪಿ (VHP) ಮುಖಂಡ ಶರಣ್ ಪಂಪ್‌ವೆಲ್ (Sharan Pumpwell) ವಿರುದ್ಧ ತುಮಕೂರು (Tumakuru) ನಗರದ ತಿಲಕ್ ಪಾರ್ಕ್ ಪೊಲೀಸ್ (Police) ಠಾಣೆಯಲ್ಲಿ ಎಫ್‍ಐಆರ್ (FIR) ದಾಖಲಾಗಿದೆ.
Advertisement
ತುಮಕೂರು ನಗರದ ಬಾರ್ ಲೈನ್ ರೋಡ್ ನಿವಾಸಿ ಸೈಯದ್ ಬುರ್ಹಾನ್ ಉದ್ದೀನ್ ಎಂಬುವರು ಶರಣ್ ಪಂಪ್‌ವೆಲ್ ವಿರುದ್ಧ ತಿಲಕ್ ಪಾರ್ಕ್ ಠಾಣೆ ಹಾಗೂ ಎಸ್‍ಪಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ತಿಲಕ್ ಪಾರ್ಕ್ ಪೊಲೀಸರು ಶರಣ್ ಪಂಪ್ ವೆಲ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ಮದ್ಯದಂಗಡಿಗಳನ್ನು ಗೋ ಶಾಲೆಯನ್ನಾಗಿ ಪರಿವರ್ತಿಸುತ್ತೇನೆ: ಉಮಾಭಾರತಿ
Advertisement
Advertisement
ಕಳೆದ ಜ.28 ರಂದು ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಸಂಘಟನೆಗಳು ಶೌರ್ಯ ಸಂಚಲನ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶರಣ್ ಪಂಪ್‌ವೆಲ್, ಹಿಂದೂಗಳು ಶಕ್ತಿ ಹೀನರಲ್ಲ. ಏಟಿಗೆ ಎದುರೇಟು ಕೊಟ್ಟಿರುವ ಹಲವಾರು ಉದಾಹರಣೆಗಳು ಇವೆ ಎಂದಿದ್ದರು. ಅಲ್ಲದೇ 59 ಜನ ಕರಸೇವಕರು ಪ್ರಯಾಣಿಸುತಿದ್ದ ರೈಲಿಗೆ ಬೆಂಕಿಹಾಕಿ ಅವರನ್ನು ಜೀವಂತ ಸುಡಲಾಗಿತ್ತು. ಅದಕ್ಕೆ ಪ್ರತಿಕಾರ ಎಂಬಂತೆ ಗುಜರಾತ್ ಗಲಭೆ ನಡೆಯಿತು. ಇದು ಹಿಂದೂಗಳ ಶೌರ್ಯದ ಪ್ರತೀಕ ಎಂದು ವಿವಾದಾತ್ಮಕ ಭಾಷಣ ಮಾಡಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಮಂಗಳೂರನ್ನು (Mangaluru) ಹಿಂದೂತ್ವದ ಫ್ಯಾಕ್ಟರಿ ಅಂತಾರೆ, ಅದೇ ರೀತಿ ತುಮಕೂರು ಹಾಗೂ ಇಡೀ ಕರ್ನಾಟಕವನ್ನು ಹಿಂದೂತ್ವದ ಫ್ಯಾಕ್ಟರಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ದೇವರ ಮಾತು ಕೇಳಿ ಹೆಂಡತಿ ಬಿಟ್ಟ ಗಂಡ – ನ್ಯಾಯಾಲಯದಲ್ಲಿ ಮತ್ತೆ ಒಂದಾದರು
Advertisement
ಈ ಭಾಷಣದ ತುಣುಕು ಮಾಧ್ಯಮಗಳಲ್ಲಿ ಪ್ರಸಾರವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಶರಣ್ ಪಂಪ್‌ವೆಲ್ ತುಮಕೂರಿನಲ್ಲಿ ಶಾಂತಿಕದಡಲು ಯತ್ನಿಸಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೈಯದ್ ಬುರ್ಹಾನ್ ಉದ್ದೀನ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಶರಣ್ ಪಂಪ್‌ವೆಲ್ ವಿರುದ್ಧ ಕಲಾಂ 157, ಸಿಆರ್‌ಪಿಸಿ (a)(b) ಅಡಿಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k