– ಜಾತಿ ಗಣತಿ ನಕಲಿ ಎಂದ ರಾಗಾ ವಿರುದ್ಧ ಮುಗಿಬಿದ್ದ ಎನ್‌ಡಿಎ
ನವದೆಹಲಿ: ʻಕಾಂಗ್ರೆಸ್ ಪಕ್ಷವು ಈಗ ಆರ್‌ಎಸ್‌ಎಸ್, ಬಿಜೆಪಿ ಮತ್ತು ಭಾರತ ಸರ್ಕಾರದ (ಇಂಡಿಯನ್ ಸ್ಟೇಟ್) ವಿರುದ್ಧ ಹೋರಅಡುತ್ತಿದೆʼ ಎಂದು ಹೇಳಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಗುವಾಹಟಿಯ ಗಾಂಧಿ ಬಸ್ತಿ ಪದೇಶದ ನಿವಾಸಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ರಾಹುಲ್ ಗಾಂಧಿ ಅವರ ಹೇಳಿಕೆಯು ದೇಶದ ಭದ್ರತೆಗೆ ಮತ್ತು ಸಾರ್ವಜನಿಕ ವ್ಯವಸ್ಥೆಗೆ ಗಂಭೀರ ಬೆದರಿಕೆ ಒಡ್ಡುತ್ತದೆ ಎಂದು ಆರೋಪಿಸಲಾಗಿದೆ.
ಅಲ್ಲದೇ ರಾಹುಲ್ ಗಾಂಧಿಯ ಹೇಳಿಕೆ ವಾಕ್ ಸ್ವಾತಂತ್ರ್ಯದ ಮಿತಿ ಮೀರಿದೆ. ಅವರ ಹೇಳಿಕೆ ರಾಷ್ಟ್ರೀಯ ಭದ್ರತೆಗೆ ಕಂಟಕ ತರುವಂತಿವೆ. ಅಶಾಂತಿ, ಪ್ರತ್ಯೇಕತಾವಾದದ ಭಾವನೆ ಮೂಡಿಸ್ತಿವೆ. ಕೂಡಲೇ ರಾಹುಲ್ ಗಾಂಧಿಯ ಹೇಳಿಕೆಗಳಿಗೆ ಕಡಿವಾಣ ಹಾಕಿ. ಅವರ ವಿರುದ್ಧ ಕ್ರಮ ತಗೋಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 152ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಮಧ್ಯೆ ರಾಹುಲ್ ಗಾಂಧಿಗೆ ಚರಿತ್ರೆಯ ಬಗ್ಗೆ ಏನು ಗೊತ್ತಿಲ್ಲ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ವಾಗ್ದಾಳಿ ನಡೆಸಿದ್ದಾರೆ. ವಿಷಯಗಳನ್ನು ಅರ್ಥ ಮಾಡಿಕೊಳ್ಳದ ರಾಹುಲ್, ಯಾರೋ ಬರೆದುಕೊಟ್ಟ ಚೀಟಿಯನ್ನು ಹಿಡಿದು ಓದುತ್ತಿದ್ದಾರೆ ಎಂದು ಹೀಗಳೆದಿದ್ದಾರೆ.
ಜಾತಿ ಗಣತಿ ನಕಲಿ ಎಂದ ರಾಗಾ ವಿರುದ್ಧ ಮುಗಿಬಿದ್ದ ಎನ್‌ಡಿಎ
ಬಿಹಾರದಲ್ಲಿ ನಿತೀಶ್ ಕುಮಾರ್ ಸರ್ಕಾರ ನಡೆಸಿದ್ದ ಜಾತಿ ಗಣತಿಯನ್ನು ನಕಲಿ ಎಂದ ರಾಹುಲ್ ಗಾಂಧಿ ವಿರುದ್ಧ ಎನ್‌ಡಿಎ ಮುಗಿಬಿದ್ದಿದೆ. ಮೊನ್ನೆವರೆಗೂ ಬಿಹಾರ ಜಾತಿಗಣತಿಯನ್ನು ಮೆಚ್ಚಿದ್ದ ರಾಹುಲ್ ಗಾಂಧಿ ಈಗ ಅದನ್ನು ನಕಲಿ ಎನ್ನುತ್ತಿರುವುದು ಅಚ್ಚರಿ ಮೂಡಿಸಿದೆ ಎಂದಿದೆ.
ನಿತೀಶ್ ಈ ಹಿಂದೆ ಇಂಡಿ ಕೂಟದಲ್ಲಿ ಜಾತಿಗಣತಿ ಬಗ್ಗೆ ಪ್ರಸ್ತಾಪಿಸ್ತಿದೆ ರಾಹುಲ್ ಮೌನ ವಹಿಸ್ತಿದ್ರು ಎಂದು ಜೆಡಿಯು ಆರೋಪಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಏಕೆ ಜಾತಿ ಗಣತಿ ವರದಿಯನ್ನು ಬಹಿರಂಗ ಮಾಡ್ತಿಲ್ಲ. ಈ ಬಗ್ಗೆ ರಾಹುಲ್ ಏಕೆ ಮಾತಾಡಲ್ಲ. ಇದು ಅವರ ದ್ವಂದ್ವ ನಿಲುವಲ್ಲವೇ ಎಂದು ಕೇಳಿದೆ. ಇನ್ನು, ಬಿಹಾರದಲ್ಲಿ ಜಾತಿಗಣತಿಗೆ ಕಾಂಗ್ರೆಸ್ ಬೆಂಬಲ ನೀಡಿತ್ತು ಎಂಬುದನ್ನು ಸಚಿವ ವಿಜಯ್ ಕುಮಾರ್ ಚೌಧರಿ ನೆನಪಿಸಿದ್ದಾರೆ. ಸಮೀಕ್ಷೆಯ ಲೋಪಗಳನ್ನು ಸ್ಪಷ್ಟವಾದ ಆಧಾರಗಳೊಂದಿಗೆ ತೋರಿಸಿದ್ರೆ ಅದನ್ನು ಸರಿಪಡಿಸಿಕೊಳ್ಳಲು ಸಿದ್ಧ ಎಂದಿದ್ದಾರೆ.