ಬೆಂಗಳೂರು: ಸುಳ್ಳು ದೂರು ಸಲ್ಲಿಸಿ ವಂಚನೆ (Cheating) ಎಸಗಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ (Prashanth Sambargi) ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸಾಲಕ್ಕೆ ಹೆಚ್ಚಿನ ಬಡ್ಡಿ ನೀಡುವಂತೆ ಒತ್ತಾಯಿಸಿ ಆಸ್ತಿ (Property) ಕಬಳಿಸಲು ಯತ್ನಿಸುತ್ತಿರುವ ಆರೋಪ ಹೊರಿಸಿ ಬನಶಂಕರಿ 3ನೇ ಹಂತದ ನಿವಾಸಿ ವೈ.ಕೆ. ದೇವನಾಥ್ ದೂರು ನೀಡಿದ್ದಾರೆ. ಇದನ್ನೂ ಓದಿ: ಯುವಕರ ಮೈಂಡ್‍ವಾಶ್ ಮಾಡಿ ಭಯೋತ್ಪಾದನೆಗೆ ನೂಕುತಿದ್ದ ಪಿಎಫ್‍ಐ ಮುಖಂಡ ಬಳ್ಳಾರಿಯಲ್ಲಿ ಅರೆಸ್ಟ್
Advertisement
Advertisement
ದೂರಿನಲ್ಲಿ ಏನಿದೆ?
ಉತ್ತರಹಳ್ಳಿ ಮುಖ್ಯರಸ್ತೆಯ ಸಿಂಹಾದ್ರಿ ಬಡಾವಣೆಯಲ್ಲಿ ನನ್ನ ನಿವಾಸವಿದೆ. ಆರ್ಥಿಕ ಕಷ್ಟದಲ್ಲಿದ್ದ ಸಮಯದಲ್ಲಿ ನಾನು ಪ್ರಶಾಂತ್ ಸಂಬರಗಿ ಅವರಿಂದ 2017ರ ಜುಲೈನಲ್ಲಿ 7.25 ಲಕ್ಷ ರೂ. ಸಾಲ (Loan) ಪಡೆದಿದ್ದೆ. ಸಾಲ ಪಡೆಯುವ ಸಮಯದಲ್ಲಿ ನಾನು ಮನೆಯ ದಾಖಲಾತಿಗಳು ಹಾಗೂ ಖಾಲಿ ಚೆಕ್‌ಗಳನ್ನು ನೀಡಿದ್ದೆ.
Advertisement
2017ರ ಡಿಸೆಂಬರ್‌ನಲ್ಲಿ 1.25 ಲಕ್ಷ ರೂ. ಹಣವನ್ನು ನಾನು ವಾಪಸ್ ನೀಡಿದ್ದೇನೆ. ಆದರೆ ಸಾಲಕ್ಕೆ ಹೆಚ್ಚಿನ ಬಡ್ಡಿ ನೀಡುವಂತೆ ಪ್ರಶಾಂತ್ ಒತ್ತಾಯಿಸಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಆಸ್ತಿ ಕಬಳಿಸಲು ಯತ್ನಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.
Advertisement
ಕಳೆದ ಎಪ್ರಿಲ್ ನಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರ ಕುರಿತು ಅವಹೇಳನಕಾರಿ ಪೋಸ್ಟ್ ವಿವಾದ ಸಂಬಂಧ ಸಂಬರಗಿ ಉತ್ತರ ವಿಭಾಗದ ಡಿಸಿಪಿ ಮುಂದೆ 2 ಲಕ್ಷ ರು.ಬಾಂಡ್ ಹಾಗೂ ಮುಚ್ಚಳಿಕೆ ಬರೆದುಕೊಟ್ಟು ವಿವಾದಕ್ಕೆ ಅಂತ್ಯ ಹಾಡಿದ್ದರು.