ಬೆಂಗಳೂರು: ಸಿಲಿಕಾನ್ ಸಿಟಿಯ ಶಾಲೆಯೊಂದರ ಮೆಟ್ಟಿಲು, ಕಾಂಪೌಂಡ್ ಹಾಗೂ ರಸ್ತೆಯುದ್ದಕ್ಕೂ SORRY ಎಂದು ಬರೆದಿದ್ದ ಪಾಗಲ್ ಪ್ರೇಮಿ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.
Advertisement
ಸುಂಕದಕಟ್ಟೆಯ ಶಾಂತಿಧಾಮ ಸ್ಕೂಲ್‍ನ ಕಾಂಪೌಂಡ್, ರಸ್ತೆ, ಮನೆಯ ಗೋಡೆಗಳು, ಕಾಲೇಜಿನ ಗೋಡೆ, ಮೆಟ್ಟಿಲು ಹೀಗೆ ಎಲ್ಲಾ ಕಡೆ ಇಂಗ್ಲೀಷ್‍ನಲ್ಲಿ SORRY ಎಂದು ಬರೆಯುವ ಮೂಲಕ ವ್ಯಕ್ತಿಯೋರ್ವ ಹುಚ್ಚಾಟ ಮೆರೆದಿದ್ದನು. ಇದನ್ನು ಬೆಳಗ್ಗೆ ಎದ್ದು ನೋಡಿದ ಸ್ಥಳೀಯರಿಗೆ ಶಾಕ್ ಆಗಿತ್ತು. ಯಾರು ಮತ್ತು ಯಾಕೆ ಈ ರೀತಿ SORRY ಕೇಳಿದ್ದಾರೆ ಎಂದು ಸ್ಥಳೀಯರು ಕೂಡ ತಲೆಕೆಡಿಸಿಕೊಂಡಿದ್ದರು. ಮೊದಮೊದಲು ಇವನ್ಯಾರೊ ಪಾಗಲ್ ಪ್ರೇಮಿ ಇರಬೇಕು ಅಂತ ನೆಗ್ಲೆಟ್ ಮಾಡಿದ್ದ ಪೊಲೀಸರು ಇದೀಗ ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಕಾಲೇಜು ಗೋಡೆ, ರಸ್ತೆ ಮೇಲೆ Sorry ಬರಹ ಪ್ರಕರಣ- ಕೆಟಿಎಂ ಡ್ಯೂಕ್‍ನಲ್ಲಿ ಬಂದ ಇಬ್ಬರಿಂದ ಕೃತ್ಯ?
Advertisement
Advertisement
ಕೆಪಿಓಡಿ (ಕರ್ನಾಟಕ ಓಪನ್ ಪ್ಲೇಸ್ ಡಿಸ್ಪಿಗರೇಷನ್ ಆಕ್ಟ್ ) ಅಡಿ ಕೇಸ್ ಅಡಿ ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ. ಮೇ 23ರ ರಾತ್ರಿ 11 ಗಂಟೆ ವೇಳೆಗೆ ಜೊಮ್ಯಾಟೊ ಬ್ಯಾಗ್ ನೊಂದಿಗೆ ಬಂದ ಇಬ್ಬರಿಂದ ಈ ಕೃತ್ಯ ಎಸಗಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಜೊಮ್ಯಾಟೊ ಬ್ಯಾಗ್ ತುಂಬಾ ಸ್ಪ್ರೇ ತಂದು ರೋಡಲ್ಲಿ ಸಾರಿ ಬರೆದಿದ್ದಾರೆ. ಆದರೆ ಸಾರಿ ಎಂದು ಬರೆದಿರುವ ಹಿಂದಿನ ಉದ್ದೇಶ ತಿಳಿದುಬಂದಿಲ್ಲ. ಇದನ್ನೂ ಓದಿ: ಸ್ಕೂಲ್ ಮೆಟ್ಟಿಲು, ಕಾಂಪೌಂಡ್, ರಸ್ತೆಯಲ್ಲೆಲ್ಲಾ Sorry- ವ್ಯಕ್ತಿಗಾಗಿ ಪೊಲೀಸರು ಹುಡುಕಾಟ