ಬೆಳಗಾವಿ: ಹಿಂಡಲಗಾ ಜೈಲಿನಿಂದ (Hindalga Jail) ಕೇಂದ್ರ ಸಚಿವ ನಿತಿನ್ ಗಡ್ಕರಿಗೆ (Nitin Gadkari) ಜೀವ ಬೆದರಿಕೆ ಕೇಸ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ-ಮಹಾರಾಷ್ಟ್ರ ಪೊಲೀಸರು ಶಂಕಿತ ಆರೋಪಿಯಾದ ಹಿಂಡಲಗಾ ಕೈದಿಯನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಕರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ-ಮಹಾರಾಷ್ಟ್ರ ಪೊಲೀಸರು ಜೈಲಿನೊಳಗೆ ಮೊಬೈಲ್ ಫೋನ್ ತಲುಪಿದ್ದು ಹೇಗೆ ಎಂಬ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ. ಸದ್ಯ ಹಿಂಡಲಗಾ ಜೈಲಿನಲ್ಲಿ ತೀವ್ರ ಕಾರ್ಯಾಚರಣೆ ಮಾಡುತ್ತಿರುವ ಪೊಲೀಸರು ಸದ್ಯ ಜಯೇಶ್ ಪೂಜಾರಿ ಎಂಬ ಕೈದಿ ಫೋನ್ ಕರೆ ಮಾಡಿರುವ ಶಂಕೆಯಡಿ ವಿಚಾರಣೆ ನಡೆಸುತ್ತಿದ್ದಾರೆ. ನಿತಿನ್ ಗಡ್ಕರಿಗೆ ಕರೆ ಮಾಡಿದ ಮೊಬೈಲ್‌ಗಾಗಿ ಪೊಲೀಸರ ಶೋಧ ನಡೆಸಿದ್ದಾರೆ.
Advertisement
Advertisement
ಮಹಾರಾಷ್ಟ್ರದ ಕೊಲ್ಲಾಪುರದ ಎಟಿಎಸ್ ಅಧಿಕಾರಿಗಳು ತೆರಳಿದ ಬಳಿಕ ಆಗಮನ ಹಿಂಡಲಗಾ ಜೈಲಿಗೆ ಬೆಳಗಾವಿ ಗ್ರಾಮೀಣ ವಿಭಾಗದ ಎಸಿಪಿ ಎಸ್.ವಿ.ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡಸಿದ್ದಾರೆ. ಇನ್ನೂ ಹಿಂಡಲಗಾ ಜೈಲಿಗೆ ಮಹಾರಾಷ್ಟ್ರದ ನಾಗ್ಪುರದ ಧನತೋಲಿ ಠಾಣೆಯ ಪೊಲೀಸರು ಆಗಮಿಸುತ್ತಿದ್ದಾರೆ.
Advertisement
ಘಟನೆಯೇನು?: ಮಹಾರಾಷ್ಟ್ರದ (Maharashtra) ಧನತೋಲಿ ಪೊಲೀಸ್ ಠಾಣೆಗೆ (Police Station) ನಿತಿನ್ ಗಡ್ಕರಿ ಕಚೇರಿ ಸಿಬ್ಬಂದಿ ಜಿತೇಂದ್ರ ಶರ್ಮಾ ಎಂಬುವವರು ದೂರು ನೀಡಿದ್ದಾರೆ. ಶನಿವಾರ ಬೆಳಗ್ಗೆ 11:29ಕ್ಕೆ ನಿತಿನ್ ಗಡ್ಕರಿ ನಾಗ್ಪುರದ ಕಚೇರಿ ದೂರವಾಣಿ ಸಂಖ್ಯೆಗೆ ಕರೆ ಮಾಡಲಾಗಿತ್ತು. ಈ ವೇಳೆ ನಾನು ದಾವೂದ್ ಗ್ಯಾಂಗ್‌ನಿಂದ ಮಾತನಾಡುತ್ತಿದ್ದೇನೆ.
Advertisement
ಗಡ್ಕರಿಗೆ ಹೇಳಿ ನೂರು ಕೋಟಿ ರೂಪಾಯಿ ನಗದು ಕಳುಹಿಸಿ. ಇಲ್ಲವಾದ್ರೇ ಗಡ್ಕರಿ ಎಲ್ಲಿ ಸಿಗ್ತಾರೋ ಅಲ್ಲಿ ಬಾಂಬ್ ಸ್ಪೋಟಿಸಿ ಸಾಯಿಸುತ್ತೇವೆ. ನನಗೆ ಅವರ ಕಚೇರಿ ಗೊತ್ತು ಎಂದು ಹಿಂದಿ ಭಾಷೆಯಲ್ಲಿ ಮಾತನಾಡಿ ಬೆದರಿಕೆ ಕರೆ ಮಾಡಲಾಗಿತ್ತು. ಈ ವೇಳೆ ಹಣ ಎಲ್ಲಿಗೆ ಕಳುಹಿಸಬೇಕೆಂದು ವಿಚಾರಿಸಿದಾಗ ಕರ್ನಾಟಕದ (Karnataka) ಬೆಂಗಳೂರಿಗೆ (Bengaluru) ಕಳುಹಿಸಿ ಎಂದು ಫೋನ್ ಕಟ್ ಮಾಡಿದ್ದರು. ಈ ವಿಚಾರವನ್ನು ಗಡ್ಕರಿ ಗನ್ ಮ್ಯಾನ್ ದೀಪಕ್‌ಗೆ ಕಚೇರಿ ಸಿಬ್ಬಂದಿ ತಿಳಿಸಿದ್ದರು.
ಬಳಿಕ 11:37ಕ್ಕೆ ಮತ್ತೊಮ್ಮೆ ಕರೆ ಗಡ್ಕರಿಗೆ ನಾನು ಮೊಬೈಲ್ ನಂಬರ್ ಕೊಡ್ತೇನಿ ಅವರಿಗೆ ಕಾಂಟ್ಯಾಕ್ಟ್ ಮಾಡಲು ಹೇಳಿ ಎಂದು ಮೊಬೈಲ್ ನಂಬರ್ ನೀಡಿದ್ದರು. ಈ ವಿಚಾರ ಪೊಲೀಸರಿಗೆ ತಿಳಿಸಿದರೆ ನಿಮ್ಮ ಕಚೇರಿ ಸ್ಫೋಟಿಸುತ್ತೇನೆಂದು ಹೇಳಿ ಫೋನ್ ಮಾಡಿದ್ದರು. ಇದಾದ ಬಳಿಕ 12:29ಕ್ಕೆ ಮತ್ತೊಮ್ಮೆ ಕರೆ ಮಾಡಿದ್ದ ಆರೋಪಿ ನನ್ನ ಮೆಸೇಜ್ ಅನ್ನು ಗಡ್ಕರಿ ಅವರಿಗೆ ಹೇಳಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾನೆ. ಇದನ್ನೂ ಓದಿ: ಕರ್ನಾಟಕದ ಜೈಲಿನಲ್ಲಿದ್ದುಕೊಂಡೇ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕೊಲೆ ಬೆದರಿಕೆ
ಆಗ ಸಾಹೇಬರು ಬ್ಯುಸಿ ಇದ್ದಾರೆ ಅಂತಾ ಹೇಳಿದ್ದರು. ನಿನ್ನ ಹೆಸರು, ವಿಳಾಸ ತಿಳಿಸು ಎಂದಾಗ ನೀವು ಕ್ಯಾಶ್ ಕರ್ನಾಟಕಕ್ಕೆ ಕಳುಹಿಸಿ ಅಲ್ಲಿಂದ ಹೇಳುತ್ತೇವೆ ಎಂದಿದ್ದರು. ಈ ಎಲ್ಲ ವಿವರ ನಾಗ್ಪುರದ ಧನತೋಲಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದ್ದು, ಐಪಿಸಿ ಸೆಕ್ಷನ್ 1860ರ ಕಲಂ 385, 387, 506/2, 507ರಡಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಯತ್ನಾಳ್ ವಿರುದ್ಧ ಸಿಎಂ, ನಿರಾಣಿ ಗರಂ; ಯತ್ನಾಳ್‌ಗೆ ಮೂಗುದಾರ ಹಾಕುವ ಬಗ್ಗೆ ನಡ್ಡಾ ಎದುರು ಪ್ರಸ್ತಾಪಕ್ಕೆ ನಿರ್ಧಾರ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k