– ಚುನಾವಣಾ ಬಾಂಡ್ ಹೆಸರಲ್ಲಿ 8,000 ಕೋಟಿ ರೂ.ಗಿಂತ ಹೆಚ್ಚು ವಸೂಲಿ ಆರೋಪ
ಬೆಂಗಳೂರು: ದೇಶದ ರಾಜಕಾರಣದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಕರ್ನಾಟಕ ರಾಜ್ಯದಲ್ಲೀಗ ಎಫ್‌ಐಆರ್ ಪಾಲಿಟಿಕ್ಸ್ (FIR Politics), ದ್ವೇಷ ರಾಜಕೀಯ, ಸೇಡಿಗೆ ಸೇಡು-ಮುಯ್ಯಿಗೆ ಮುಯ್ಯಿ ರಾಜಕೀಯ ನಡೀತಿದ್ಯಾ..? ಅಂತ ವ್ಯಾಪಕ ಚರ್ಚೆ ಆಗ್ತಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಚಿವ ನಾಗೇಂದ್ರ ಜೈಲು ಪಾಲಾದ ಬಳಿಕ ಮುಡಾ ನಿವೇಶನ ಹಂಚಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಈಗ ಎಫ್‌ಐಆರ್ ದಾಖಲಾಗಿದೆ. ಈ ಬೆನ್ನಲ್ಲೇ, ಚುನಾವಣಾ ಬಾಂಡ್ (Electoral Bond) ಹೆಸರಲ್ಲಿ ಸುಲಿಗೆ ಆರೋಪದಲ್ಲಿ ರಾಜ್ಯದ ಸಂಸದೆ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮೇಲೆ ಕೋರ್ಟ್ ಆದೇಶದ ಅನ್ವಯ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ನಾಲ್ವರು ವಿಕಲ ಚೇತನ ಹೆಣ್ಣು ಮಕ್ಕಳಿಗೆ ಸ್ವೀಟ್‌ನಲ್ಲಿ ವಿಷ ಕೊಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ
ಜನಾಧಿಕಾರ ಸಂಘರ್ಷ ಪರಿಷತ್ (ಜೆಎಸ್‌ಪಿ)ಯ ಆದರ್ಶ ಅಯ್ಯರ್ ಅನ್ನೋವ್ರು ದೂರು ಹಾಗೂ ಬೆಂಗಳೂರು ಜನಪ್ರತಿನಿಧಿಗಳ ಕೋರ್ಟ್ ಆದೇಶದ ಅನ್ವಯ ತಿಲಕ್‌ನಗರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಅಲ್ಲದೇ, ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಲು ತಯಾರಿಯಾಗಿದ್ದು, ತಿಲಕ ನಗರ ಪೊಲೀಸ್ ಠಾಣೆ ಮುಂದೆ ಭದ್ರತೆ ಹೆಚ್ಚಿಸಲಾಗಿದೆ. ಎಫ್‌ಐಆರ್‌ನಲ್ಲಿ ನಿರ್ಮಲಾ ಜೊತೆಗೆ ರಾಜ್ಯ, ರಾಷ್ಟ್ರ ಬಿಜೆಪಿ ನಾಯಕರ ಹೆಸರೂ ಇದೆ. ಇದನ್ನೂ ಓದಿ: ಐಎಎಸ್ ಅಧಿಕಾರಿ ಪತ್ನಿ ರೇಪ್ ಕೇಸ್; ತನಿಖೆಯಲ್ಲಿ ಲೋಪವೆಸಗಿದ ಪೊಲೀಸರ ವಿರುದ್ಧ ಕ್ರಮಕ್ಕೆ ಕೋಲ್ಕತ್ತಾ ಹೈಕೋರ್ಟ್ ಸೂಚನೆ
ಚುನಾವಣಾ ಬಾಂಡ್; ಯಾರ‍್ಯಾರ ವಿರುದ್ಧ ಎಫ್‌ಐಆರ್?
* ಎ1 ನಿರ್ಮಲಾ ಸೀತಾರಾಮನ್
* ಎ2 ಇ.ಡಿ ಅಧಿಕಾರಿಗಳು
* ಎ3 ಕೇಂದ್ರ ಬಿಜೆಪಿ ಪದಾಧಿಕಾರಿಗಳು
* ಎ4 ನಳೀನ್ ಕುಮಾರ್ ಕಟೀಲ್
* ಎ5 ವಿಜಯೇಂದ್ರ
* ಎ6 ರಾಜ್ಯ ಬಿಜೆಪಿ ಪದಾಧಿಕಾರಿಗಳು
ಯಾವೆಲ್ಲಾ ಸೆಕ್ಷನ್..?
* ಐಪಿಸಿ ಸೆಕ್ಷನ್ 384 – ಸುಲಿಗೆ
* ಐಪಿಸಿ ಸೆಕ್ಷನ್ 120ಬಿ – ಅಪರಾಧಿಕ ಒಳಸಂಚು
* ಐಪಿಸಿ ಸೆಕ್ಷನ್ 34 – ಸಮಾನ ಉದ್ದೇಶ
ಎಫ್‌ಐಆರ್ ಮುಖ್ಯಾಂಶಗಳೇನು?
* ಚುನಾವಣಾ ಬಾಂಡ್ ಹೆಸರಲ್ಲಿ 8,000 ಕೋಟಿ ರೂ.ಗಿಂತ ಹೆಚ್ಚು ವಸೂಲಿ ಆರೋಪ
* ಹಲವಾರು ಕಾರ್ಪೊರೇಟ್ ಕಂಪನಿಗಳ ಮೇಲೆ ರೇಡ್ & ಸೀಜ್ ಬೆದರಿಕೆ ಆರೋಪ
* 2019-2023ರವರೆಗೆ ಹಲವು ಕಂಪನಿಗಳಿಂದ 230.15 ಕೋಟಿ ಸುಲಿಗೆ ಆರೋಪ
* ಒಂದು ಕಂಪನಿಯಿಂದಲೇ 49.5 ಕೋಟಿ ರಹ್ಯಸವಾಗಿ ವಸೂಲಿ ಆರೋಪ
* ಮೇ 2ರಂದು ದೂರು, 5 ತಿಂಗಳ ಬಳಿಕ ಎಫ್‌ಐಆರ್
ಮಾತಿನ ವರಸೆ:
ಚುನಾವಣಾ ಬಾಂಡ್ ವಿಚಾರವಾಗಿ ಕಾಂಗ್ರೆಸ್-ಬಿಜೆಪಿ ಮಧ್ಯೆ ರಾಜಕೀಯ ಕೆಸರೆರಚಾಟ ಶುರುವಾಗಿದೆ. ಸೋನಿಯಾ, ರಾಹುಲ್, ಖರ್ಗೆ ಮೇಲೂ ಎಫ್‌ಐಆರ್ ಹಾಕ್ಬೇಕು. ಸೋನಿಯಾ, ರಾಹುಲ್ ಅರೆಸ್ಟ್ ಆಗ್ತಾರೆ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ರೆ, ನಿರ್ಮಲಾ ಸೀತಾರಾಮನ್ ತಮ್ಮ ಕುಟುಂಬಕ್ಕೆ ಬಾಂಡ್ ಪಡೆದಿಲ್ಲ ಅಂತ ಆರ್.ಅಶೋಕ್ ನಿರ್ಮಲಾ ಪರ ಬ್ಯಾಟ್ ಬೀಸಿದ್ದಾರೆ. ಆದ್ರೆ ಈ ಬಗ್ಗೆ ಹೆಚ್ಚು ಮಾಹಿತಿ ಇಲ್ಲ ತಿಳಿದುಕೊಂಡು ಮಾತಾಡ್ತೇನೆ ಅಂತ ಖರ್ಗೆ, ಡಿಕೆ ಜಾಣ ನಡೆ ಪ್ರದರ್ಶಿಸಿದ್ದಾರೆ. ಮೋದಿ, ನಿರ್ಮಲಾ ರಾಜೀನಾಮೆಗೆ ಹೆಚ್‌ಡಿಕೆ ಒತ್ತಾಯಿಸಲಿ ಅಂತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ ಹೆಚ್ಚು ರೈತರ ಸಾವು: ಪ್ರಧಾನಿ ಮೋದಿ ಆರೋಪ