CinemaCrimeKarnatakaLatestLeading NewsMain PostSandalwood

‘ಸೂಪರ್ ಸ್ಟಾರ್’ ಚಿತ್ರದ ನಿರ್ದೇಶಕನ ಮೇಲೆ ಎಫ್ಐಆರ್ : ಉಪೇಂದ್ರ ಸಹೋದರ ಪುತ್ರನ ಚಿತ್ರ

ಟ ಉಪೇಂದ್ರ ಅವರ ಸಹೋದರನ ಪುತ್ರ ನಿರಂಜನ್ ಸುಧೀಂದ್ರ ನಟನೆಯ ಸೂಪರ್ ಸ್ಟಾರ್ ಚಿತ್ರದ ನಿರ್ದೇಶಕನಿಗೆ ಕಾನೂನು ಸಂಕಷ್ಟ ಎದುರಾಗಿದೆ. ವಂಚನೆ, ಪ್ರಾಣ ಬೆದರಿಕೆಯಂತಹ ಗಂಭೀರ ಪ್ರಕರಣಗಳು ಅವರ ಮೇಲೆ ದಾಖಲಾಗಿದ್ದು, ಈ ಚಿತ್ರದ ನಿರ್ಮಾಪಕರು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೋಟ್ಯಾಂತರ ರೂಪಾಯಿ ವಂಚನೆ ಮತ್ತು ತಮಗೆ ನಿರ್ದೇಶಕರು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ನಿರ್ಮಾಪಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಂದುಕೊಂಡಂತೆ ಆಗಿದ್ದರೆ ಸೂಪರ್ ಸ್ಟಾರ್ ಸಿನಿಮಾ ಶೂಟಿಂಗ್ ಮುಗಿಸಿ, ಇಷ್ಟೊತ್ತಿಗೆ ತೆರೆಗೆ ಬರಬೇಕಿತ್ತು. ಆದರೆ, ಚಿತ್ರತಂಡದಲ್ಲಿಯ ಬಿರುಕಿನಿಂದಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತುವಂತಾಗಿದೆ. ಈ ಸಿನಿಮಾದ ನಿರ್ದೇಶಕರು ತಮಗೆ 1 ಕೋಟಿ 10 ಲಕ್ಷ ವಂಚನೆ ಮಾಡಿದ್ದಾರೆ ಎಂದು  ನಿರ್ಮಾಪಕರು ಆರೋಪ ಮಾಡಿದ್ದು, ಸಿನಿಮಾ ಚೆನ್ನಾಗಿ ಓಡುತ್ತೆ ಎಂದು ನಿರ್ಮಾಪಕನಿಗೆ ನಿರ್ದೇಶಕರು ಪ್ರಚೋದನೆ ನೀಡಿದ್ದಾರಂತೆ. ಕಲಾವಿದರಿಗೂ ಹಣ ನೀಡದೆ ಸ್ವಂತಕ್ಕೆ ತಮ್ಮ ಹಣವನ್ನು ನಿರ್ದೇಶಕರು ಬಳಸಿಕೊಂಡಿದ್ದಾರಂತೆ. ನಿರ್ಮಾಪಕನ ಚಿತ್ರವನ್ನ ನಿರ್ಮಾಪಕನಿಗೆ ಗೊತ್ತಿಲ್ಲದೆ ಮಾರಾಟ ಮಾಡಿದ್ದಾರೆ ಎಂದು ನಿರ್ಮಾಪಕರು ಆರೋಪ ಮಾಡಿದ್ದಾರೆ.

ಈ ಸಿನಿಮಾವನ್ನು ಆರ್.ವೆಂಕಟೇಶ್ ಬಾಬು ನಿರ್ದೇಶನ ಮಾಡಿದ್ದು, ಮೈಲಾರಿ ಎನ್ನುವವರು ನಿರ್ಮಾಣ ಮಾಡಿದ್ದರು. ನಂತರ ಚಿತ್ರತಂಡದಲ್ಲಿ ಹಲವಾರು ಬದಲಾವಣೆಗಳು ಆಗಿ ಸತ್ಯನಾರಾಯಣ ಮತ್ತು ರಮಾದೇವಿ ನಿರ್ಮಾಪಕರಾಗಿ ಬಂದಿದ್ದಾರೆ ಎನ್ನಲಾಗುತ್ತಿದೆ. ಇವರೆಲ್ಲರೂ ಸೇರಿ ತಮಗೆ ವಂಚನೆ ಮಾಡಿದ್ದಾರೆ ಎಂದು ನಿರ್ಮಾಪಕ ಮೈಲಾರಿ ಈ ಮೂವರ ಮೇಲೂ ದೂರು ನೀಡಿದ್ದಾರೆ. ಇದನ್ನೂ ಓದಿ:ಕಾಲಿವುಡ್‌ನತ್ತ ಕನ್ನಡದ ನಟ ಭರತ್ ಭೋಪಣ್ಣ

ಈ ಸಿನಿಮಾ ಮಾತೃಶ್ರಿ ಎಂಟರ್ ಪ್ರೈಸಸ್ ಬ್ಯಾನರ್ ನಡಿ ಮೈಲಾರಿ ಸೂಪರ್ ಸ್ಟಾರ್ ಚಿತ್ರ ಮಾಡ್ತಿದ್ದರು. ಕೋವಿಡ್ ಹಿನ್ನಲೆ ಚಿತ್ರೀಕರಣ ಸ್ವಲ್ಪ ದಿನ ಸ್ಥಗಿತಗೊಂಡಿತ್ತು. ನಂತರ ಸತ್ಯನಾರಾಯಣ ಎಂಬುವವರ ಜೊತೆ ಸೇರಿ ಚಿತ್ರದ ಮಾಲೀಕತ್ವವನ್ನೇ ಬದಲಿಸಿದ ಆರೋಪ ನಿರ್ದೇಶಕರ ಮೇಲೆ ಕೇಳಿ ಬಂದಿದೆ. ಹೊಸ ನಿರ್ಮಾಪಕರಾಗಿ ರಮಾದೇವಿ ಹಾಗು ಸತ್ಯನಾರಾಯಣ ಅವರನ್ನ ಹಾಕಿಕೊಂಡ ನಿರ್ದೇಶಕ ವೆಂಕಟೇಶ್ ಬಾಬು ಈ ಚಿತ್ರ ಮಾಡಿದ್ದು, ಹಾಕಿದ ಬಂಡವಾಳ ವಾಪಾಸ್ ಕೇಳಲು ಹೋದಾಗ ಪ್ರಾಣಬೆದರಿಕೆ , ಧಮ್ಕಿ ಹಾಕಿದ್ದಾರೆ ಎಂದು ದೂರಿನಲ್ಲಿಉಲ್ಲೇಖವಾಗಿದೆ.

Live Tv

Leave a Reply

Your email address will not be published. Required fields are marked *

Back to top button