ಬೆಂಗಳೂರು: ಚರ್ಚ್ ಫಾದರ್ (Church Father) ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ (Banasavadi Police Station) ಎಫ್‍ಐಆರ್ ದಾಖಲಾಗಿದೆ. ಲೈಂಗಿಕ ಕಿರುಕುಳ ಆರೋಪದಡಿ ಕಮ್ಮನಹಳ್ಳಿಯ ಸೆಂಟ್ ಪಿಯೂಸ್ ಚರ್ಚ್ ಪಾದ್ರಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಚರ್ಚ್ ಫಾದರ್ ಜಯಕರನ್ ವಿರುದ್ಧ ಮಹಿಳೆ ದೂರು ದಾಖಲು ಮಾಡಿದ್ದಾರೆ. ಲೈಂಗಿಕ ಕಿರುಕುಳ ನೀಡಿ ಹಲ್ಲೆ ಮಾಡಿದ್ದಾರೆಂದು ದೂರು ದಾಖಲಿಸಿದ್ದಾರೆ. ಫಾದರ್ ಜಯಕರನ್ ಅನುಯಾಯಿಗಳಿಂದಲೂ ಬೆದರಿಕೆ ಕರೆಗಳು ಬರುತ್ತಿದೆ ಎಂದು ಸಂತ್ರಸ್ತ ಮಹಿಳೆ ಆರೋಪ ಮಾಡಿದ್ದಾರೆ. ಘಟನೆ ಬಗ್ಗೆ ಚರ್ಚ್‍ನ ಆಂತರಿಕ ಸಮಿತಿಗೂ ದೂರು ನೀಡಿದ್ರೂ ಕ್ರಮ ಇಲ್ಲ ಎಂದು ಆರೋಪ ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.
ಮಹಿಳೆ ವಿರುದ್ಧ ಚರ್ಚ್ ಫಾದರ್ ಕೂಡ ಪ್ರತಿ ದೂರು ದಾಖಲಿಸಿದ್ದು, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಚರ್ಚ್ ಹಣಕಾಸಿನ ವಿಚಾರಕ್ಕೆ ಸುಳ್ಳು ಆರೋಪ ಮಾಡಿದ್ದಾರೆಂದು ಮಹಿಳೆ ಸೇರಿದಂತೆ 9 ಮಂದಿ ವಿರುದ್ಧ ಚರ್ಚ್ ಫಾದರ್ ದೂರು ಸಲ್ಲಿಸಲಾಗಿದೆ. ತಾನು ಚರ್ಚ್ ಫಾದರ್ ಆಗಿ ಅಧಿಕಾರ ವಹಿಸಿಕೊಳ್ಳದಂತೆ ಕಿರುಕುಳ ನೀಡಿದರು. ಆರೋಪಿಗಳು ಚರ್ಚ್ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಚಂದ್ರಯಾನ ಸಾಫ್ಟ್ ಲ್ಯಾಂಡಿಗ್‌ಗಾಗಿ ಅಯ್ಯಪ್ಪಸ್ವಾಮಿ ಮೊರೆಹೋದ ಇಸ್ರೋ ಅಧ್ಯಕ್ಷ
ಹಣದ ಲೆಕ್ಕ ಕೇಳಿದ್ದಕ್ಕೆ ಈ ರೀತಿ ಸುಳ್ಳು ಆರೋಪ ಮಾಡಿ ನನ್ನ ವಿರುದ್ಧ ದೂರು ನೀಡಿದ್ದಾರೆಂದು ಫಾದರ್ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.ಬಾಣವಾಡಿ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Web Stories