ವಿಜಯಪುರ: ಕಲಬುರಗಿ ಬಿಜೆಪಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ದಿವ್ಯಾ ಹಾಗರಗಿ ಮೇಲೆ ವಿಜಯಪುರದಲ್ಲಿ ಎಫ್ ಐಆರ್ ದಾಖಲಾಗಿದೆ.
ಪ್ರಚೋದನಾಕಾರಿ ಭಾಷಣ, ಕೊಲೆ ಬೆದರಿಕೆ, ಜೀವ ಭಯ ಹಾಕಿದ್ದ ಹಿನ್ನೆಲೆಯಲ್ಲಿ ದಿವ್ಯಾ ವಿರುದ್ಧ ಗೋಲಗುಮ್ಮಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದಿವ್ಯಾ ಭಾಷಣದಲ್ಲಿ ಹೇಳಿದ್ದು ಏನು?
ಮಾರ್ಚ್ 25 ರಂದು ವಿಜಯಪುರದಲ್ಲಿ ನಡೆದ ವೀರಶೈವ ಲಿಂಗಾಯತ ಸಮಾವೇಶದಲ್ಲಿ ಮಾತನಾಡಿದ ಅವರು, ನೀವು ಇಲ್ಲಿ ಬಂದಿದ್ದೇ ಆದರೆ ಬರೀ ಒಂದು ರೌಂಡ್ ಹಾಕಿ ತೋರಿಸಿ. ನೀವು ನಮ್ಮ ಧರ್ಮಕ್ಕೆ ನೀವು ಕೈ ಹಾಕಿದ್ದು ಸರಿಯಲ್ಲ. ಅದಕ್ಕೆ ಪುರುಷರು ಯಾರು ಬೇಡ. ನಾವು ಮಹಿಳೆಯರು ಸಾಕು. ಒಂದು ಒನಕೆ ಅಥವಾ ಖಡ್ಗ ಕೊಟ್ರೆ ಸಾಕು ನಿಮ್ಮಂಥ ಎಷ್ಟೇ ಧರ್ಮ ವಿರೋಧಿಗಳು ಬಂದರೂ ಅವರನ್ನು ಪೀಸ್ ಪೀಸ್ ಮಾಡುತ್ತೇವೆ ಎಂದು ಎಂ.ಬಿ ಪಾಟೀಲರಿಗೆ ಎಚ್ಚರಿಕೆ ನೀಡಿದ್ದರು. ದಿವ್ಯಾ ಹೇಳಿಕೆಯನ್ನು ಖಂಡಿಸಿ ಇದೀಗ ದಲಿತ ಪರ ಹೋರಾಟಗಾರ ಶ್ರೀನಾಥ ಪೂಜಾರಿ ಗೋಲಗುಂಬಜ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೇ ಈ ಕೂಡಲೇ ದಿವ್ಯಾರನ್ನು ಬಂಧಿಸಿ ಕ್ರಮಕೈಗೊಳ್ಳಬೇಕಾಗಿ ಆಗ್ರಹಿಸಿದ್ದಾರೆ.