ಗಡ್ಡಧಾರಿ ವ್ಯಕ್ತಿಗಳ ವಿರುದ್ಧ ಅಪಹಾಸ್ಯ – ಹಾಸ್ಯ ನಟಿ ಭಾರತಿ ಸಿಂಗ್ ವಿರುದ್ಧ FIR

Public TV
1 Min Read
Bharti Singh

ಮುಂಬೈ: ಗಡ್ಡಧಾರಿ ವ್ಯಕ್ತಿಗಳನ್ನು ಅಪಹಾಸ್ಯ ಮಾಡಿದ ಹಳೆಯ ವೀಡಿಯೋವೊಂದರ ಕುರಿತಂತೆ ಬಾಲಿವುಡ್ ಹಾಸ್ಯನಟಿ ಭಾರತಿ ಸಿಂಗ್ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಭಾರತಿ ಸಿಂಗ್ ಅವರಿಂದ ಸಿಖ್ಖರ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಪಂಜಾಬ್‍ನ ಅಮೃತಸರದಲ್ಲಿ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ ನೀಡಿದ ದೂರಿನ ಆಧಾರದ ಮೇರೆಗೆ ಸೋಮವಾರ ರಾತ್ರಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  ಫ್ಯಾಟ್‌ ಸರ್ಜರಿ ಎಫೆಕ್ಟ್‌ – ಕಿರುತೆರೆ ನಟಿ ಚೇತನಾ ರಾಜ್‌ ಸಾವು

Bharti Singh 1

ವೈರಲ್ ಆದ ಹಳೆಯ ವೀಡಿಯೋದಲ್ಲಿ, ಗಡ್ಡ-ಮೀಸೆಯಿಂದ ಅನೇಕ ಪ್ರಯೋಜನಗಳಿವೆ. ಹಾಲು ಕುಡಿಯುವಾಗ ನಿಮ್ಮ ಗಡ್ಡವನ್ನು ನಿಮ್ಮ ಬಾಯಿಯೊಳಗೆ ಹಾಕಿಕೊಳ್ಳಿ. ಅದು ನಿಮಗೆ ಶಾವಿಗೆ ಪಾಯಸದಷ್ಟೇ ರುಚಿಯನ್ನು ನೀಡುತ್ತದೆ ಎಂದು ಭಾರತಿ ಸಿಂಗ್ ಅಪಹಾಸ್ಯ ಮಾಡಿದ್ದರು. ಈ ವಿಚಾರವಾಗಿ ಸಿಖ್ಖರು ನಮ್ಮ ಧಾರ್ಮಿಕ ನಂಬಿಕೆಯ ಭಾಗವಾದ ಗಡ್ಡದ ಬಗ್ಗೆ ಭಾರತಿ ಸಿಂಗ್ ಅಗೌರವ ತೋರಿಸಿದ್ದಾರೆ ಎಂದು ಆರೋಪಿಸಿ ಸೋಮವಾರ ಅಮೃತಸರದಲ್ಲಿ ಭಾರತಿ ಸಿಂಗ್ ವಿರುದ್ಧ ಸಿಖ್ ಗುಂಪುಗಳು ಪ್ರತಿಭಟನೆ ನಡೆಸಿದ್ದವು.

ನಂತರ ಸೋಮವಾರ ಈ ಕುರಿತಂತೆ ವೀಡಿಯೋವೊಂದನ್ನು ಪೋಸ್ಟ್ ಮಾಡಿ ಭಾರತಿ ಸಿಂಗ್ ಅವರು ಕ್ಷಮೆಯಾಚಿಸಿದ್ದಾರೆ ಮತ್ತು ತಾವು ಯಾವುದೇ ಸಮುದಾಯವನ್ನು ನೋಯಿಸುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಪಠ್ಯಕ್ರಮದಲ್ಲಿ RSS ಸಂಸ್ಥಾಪಕ ಹೆಡ್ಗೆವಾರ್ ಭಾಷಣ ಸೇರ್ಪಡೆ – ಶೀಘ್ರವೇ ಹಿಂತೆಗೆಯಲು ಕ್ಯಾಂಪಸ್ ಫ್ರಂಟ್ ಒತ್ತಾಯ

ಕಳೆದ ಮೂರ್ನಾಲ್ಕು ದಿನಗಳಿಂದ ನಾನು ಗಡ್ಡಧಾರಿಗಳನ್ನು ಗೇಲಿ ಮಾಡಿದ್ದೇನೆ ಎಂಬ ವೀಡಿಯೋ ಹರಿದಾಡುತ್ತಿದೆ. ಆದರೆ ದಯವಿಟ್ಟು ವೀಡಿಯೋವನ್ನು ಸರಿಯಾಗಿ ನೋಡಿ. ನಾನು ಅದರಲ್ಲಿ ಏನನ್ನು ಹೇಳಿಲ್ಲ. ಅಲ್ಲದೇ ಯಾವುದೇ ಧರ್ಮ ಅಥವಾ ಜಾತಿ, ಸಿಖ್ಖರನ್ನು ಅಪಹಾಸ್ಯ ಮಾಡಿಲ್ಲ. ದಾಡಿಯಿಂದ ಯಾವ ರೀತಿ ಸಮಸ್ಯೆಗಳು ಬರಬಹುದು ಎಂದು ಹೇಳಿದ್ದೇನೆ ಅಷ್ಟೇ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *