ಬೆಂಗಳೂರು: ಕಳೆದ 20 ವರ್ಷಗಳಿಂದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯದರ್ಶಿಯಾಗಿದ್ದ ನಾಗರಾಜ್‍ಗೆ ಧಮ್ಕಿ, ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರವೇ ಅಧ್ಯಕ್ಷ ನಾರಾಯಣಗೌಡರ ವಿರುದ್ಧ ಎಫ್‍ಐಆರ್ ದಾಖಲಾಗಿದೆ
ಕಳೆದ ಹಲವು ವರ್ಷಗಳಿಂದ ನಾರಾಯಣಗೌಡರ ಜೊತೆ ಇದ್ದ ನಾಗರಾಜ್ ಶುಕ್ರವಾರ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬರ್ತ್ ಡೇ ಕಾರ್ಯಕ್ರಮ ಮುಗಿಸಿಕೊಂಡು ಅನ್ನಪೂರ್ಣೇಶ್ವರಿ ನಗರದ್ಲಿರೋ ತಮ್ಮ ನಿವಾಸ ಮನೆಗೆ ಬರುತ್ತಿದ್ದಂತೆ 20 ಜನರ ತಂಡ ಗಲಾಟೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಸಿ ಹಲ್ಲೆಗೆ ಯತ್ನಿದ್ದಾರೆ ಎನ್ನಲಾಗಿದೆ. ನಾರಾಯಣಗೌಡ ಸಹೋದರ ಧರ್ಮರಾಜ್ ಗ್ಯಾಂಗ್ ಕಟ್ಟಿಕೊಂಡು ಬಂದು ಗಲಾಟೆ ಮಾಡಿಸಿದ್ದಾರೆ. ಪತ್ನಿ, ಮಕ್ಕಳನ್ನ ಕೊಲ್ಲುವುದಾಗಿ ಧಮ್ಕಿ ಹಾಕಿದ್ದಾರೆ. ಇದಕ್ಕೆ ನಾರಾಯಣಗೌಡ ಕುಮ್ಮಕ್ಕು ಕೊಟ್ಟು ಗಲಾಟೆ ಮಾಡಿಸಿದ್ದಾರೆಂದು ನಾಗರಾಜ್ ಆರೋಪಿಸಿದ್ದಾರೆ.
ನಾಗರಾಜ್ ಆರೋಪವನ್ನು ತಿರಸ್ಕರಿಸೋ ಕರವೇ ಅಧ್ಯಕ್ಷ ನಾರಾಯಣ ಗೌಡ ಪಬ್ಲಿಕ್ ಟಿವಿಗೆ ಜೊತೆ ಮಾತಾನಾಡಿ, ನನಗೂ ಆ ಗಲಾಟೆಗೂ ಯಾವುದೇ ಸಂಬಂಧವಿಲ್ಲ. ನಾನು ಯಾರನ್ನು ಕಳಿಸಿಲ್ಲ ನನ್ನ ಮನೆ ಮುಂದೆಯೇ ಕೆಲವರು ರಾತ್ರಿ ಬಂದು ಧಿಕ್ಕಾರ ಕೂಗುತ್ತಿದ್ದರು. ನಾನು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದೇನೆ ಅಂತಾ ಹೇಳಿದರು.
ತನ್ನ ಏಳಿಗೆಯನ್ನ ಸಹಿಸದ ನಾರಾಯಣಗೌಡ ಈ ರೀತಿ ಸಂಚು ರೂಪಿಸಿದ್ದಾರೆಂದು ಆರೋಪಿಸಿರುವ ನಾಗರಾಜ್, ಗಲಾಟೆ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ನಾರಾಯಣಗೌಡ, ಸಹೋದರ ಧರ್ಮ, ಕಾರ್ತಿಕ್ ಸೇರಿದಂತೆ 11 ಮಂದಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ..
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv