ಬಾಲಿವುಡ್ ನಟಿ ರಾಖಿ ಸಾವಂತ್ ಪತಿ ಮೈಸೂರಿನ ಆದಿಲ್ ಖಾನ್ ದುರಾನಿ ಮೇಲೆ ಮೈಸೂರಿನಲ್ಲಿ ಎಫ್.ಐ.ಆರ್ ದಾಖಲಾಗಿದೆ. ತನ್ನ ಮೇಲೆ ಆದಿಲ್ ಅತ್ಯಾಚಾರ ಮಾಡಿರುವುದಾಗಿ ಮಹಿಳೆಯೊಬ್ಬರು ಆರೋಪ ಮಾಡಿದ್ದು, ದೂರು ಕೂಡ ನೀಡಿದ್ದಾರೆ. ಮಹಿಳೆ ನೀಡಿದ ದೂರನ್ನು ಆಧರಿಸಿ ಮೈಸೂರು ನಗರ ಪೊಲೀಸರು ಆದಿಲ್ ಮೇಲೆ ಎಫ್.ಐ.ಆರ್ ದಾಖಲಿಸಿದ್ದಾರೆ. ಈಗಾಗಲೇ ಪತ್ನಿ ರಾಖಿ ಸಾವಂತ್ ಮಾಡಿರುವ ವಂಚನೆ ಆರೋಪದಲ್ಲಿ ಆದಿಲ್ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಪತಿ ಆದಿಲ್ ಖಾನ್ ಬಗ್ಗೆ ಮತ್ತೊಂದು ಗುರುತರ ಆರೋಪಗಳನ್ನು ಮಾಡಿದ್ದಾರೆ ನಟಿ ರಾಖಿ ಸಾವಂತ್. ತನ್ನ ಬೆತ್ತಲೆ ವಿಡಿಯೋಗಳನ್ನು ಗೊತ್ತಾಗದಂತೆ ಚಿತ್ರೀಕರಿಸಿ, ಹಣಕ್ಕಾಗಿ ಆದಿಲ್ ಮಾರಾಟ ಮಾಡುತ್ತಿದ್ದ ಎಂದು ಹೇಳಿದ್ದಾರೆ. ಅಲ್ಲದೇ, ವರದಕ್ಷಿಣೆ ಕಿರುಕುಳ, ದೈಹಿಕ ಕಿರುಕುಳ ಸೇರಿದಂತೆ ಹಲವು ಆಪಾದನೆಗಳನ್ನು ಈಗಾಗಲೇ ರಾಖಿ ತಮ್ಮ ಪತಿಯ ಮೇಲೆ ಮಾಡಿದ್ದಾರೆ. ಬೆತ್ತಲೆ ವಿಡಿಯೋ ಅವರ ಹೊಸ ಆರೋಪವಾಗಿದೆ. ಇದನ್ನೂ ಓದಿ: `ರಿಷಬ್’ ಜೊತೆ ಕಾಣಿಸಿಕೊಂಡ ಊರ್ವಶಿ ರೌಟೇಲಾ: `ಕಾಂತಾರ 2′ ಬಗ್ಗೆ ಅಪ್‌ಡೇಟ್
ರಾಖಿ ಸಾವಂತ್ ಹಿಂದೆ ಬಿದ್ದು ಸದ್ಯ ಜೈಲುಪಾಲಾಗಿರುವ ಆದಿಲ್ ಖಾನ್ ಗೆ ಬಿಗ್ ಬಾಸ್ ಮನೆ ಒಳಗೆ ಹೋಗುವ ಆಸೆ ಇತ್ತಂತೆ. ಹಾಗಾಗಿಯೇ ಅವನು ರಾಖಿ ಸಖ್ಯ ಬೆಳೆಸಿದ್ದ ಎನ್ನುವ ವಿಷಯ ಬಹಿರಂಗವಾಗಿದೆ. ಆದಿಲ್ ಆಪ್ತರು ಹೇಳುವಂತೆ ರಾಖಿ ಹಿಂದೆ ಹೋದರೆ, ಬಿಗ್ ಬಾಸ್ ಮನೆಗೆ ಹೋಗುವ ದಾರಿ ಸುಲಭವಾಗುತ್ತದೆ. ಹೀಗಾಗಿ ರಾಖಿ ಬೆನ್ನು ಬಿದ್ದಿದ್ದ ಎಂದು ಹೇಳಲಾಗುತ್ತಿದೆ. ಈ ಹಿಂದೆ ಸ್ವತಃ ರಾಖಿಯೇ ಆದಿಲ್ ಜೊತೆ ಬಿಗ್ ಬಾಸ್ ಮನೆಗೆ ಹೋಗುವುದಾಗಿಯೂ ಮಾತನಾಡಿದ್ದರು.
ಆದಿಲ್ ಜೊತೆ ಡೇಟಿಂಗ್ ಮಾಡುತ್ತಿರುವ ವಿಷಯವನ್ನು ರಾಖಿ ಸಾವಂತ್ ಬಹಿರಂಗ ಪಡಿಸಿದ ಸಂದರ್ಭದಲ್ಲೂ ಬಿಗ್ ಬಾಸ್ ಕುರಿತಾಗಿ ನಟಿ ಮಾತನಾಡಿದ್ದರು. ಬಿಗ್ ಬಾಸ್ ಮನೆಗೆ ಒಟ್ಟಿಗೆ ಹೋಗುವಂತಹ ಅವಕಾಶ ಬಂದರೆ, ಹೋಗುತ್ತೇವೆ ಎಂದಿದ್ದರು. ಅಲ್ಲದೇ, ಬಿಗ್ ಬಾಸ್ ಮನೆಯಲ್ಲೇ ಮದುವೆ ಆಗುವುದಾಗಿಯೂ ತಿಳಿಸಿದ್ದರು. ಆದರೆ, ಕೇವಲ ರಾಖಿಗೆ ಮಾತ್ರ ಮನೆಯ ಪ್ರವೇಶಕ್ಕೆ ಅವಕಾಶ ಸಿಕ್ಕಿತ್ತು. ತಾಯಿಯ ಅನಾರೋಗ್ಯದ ಕಾರಣದಿಂದಾಗಿ ಅವರು ಅರ್ಧಕ್ಕೆ ಬಿಗ್ ಬಾಸ್ ಮನೆಯಿಂದ ವಾಪಸ್ಸಾದರು.
ತನಗೆ ಬಿಗ್ ಬಾಸ್ ಮನೆಗೆ ಹೋಗುವುದಕ್ಕೆ ಅವಕಾಶ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ರಾಖಿಯಿಂದ ಆದಿಲ್ ದೂರವಾದ ಎನ್ನುವ ಮಾತು ಆಪ್ತರಿಂದ ತಿಳಿದು ಬಂದಿದೆ. ಆದರೆ, ರಾಖಿ ಸಾವಂತ್ ಹೇಳುವುದೇ ಬೇರೆ. ಆದಿಲ್ ಮೇಲೆ ಹಲವು ಗುರುತರ ಆರೋಪಗಳನ್ನು ಮಾಡಿದ್ದಾರೆ. ಅಸಹಜ ಲೈಂಗಿಕ ಕ್ರಿಯೆಯಿಂದ ಹಿಡಿದು ವರದಕ್ಷಿಣೆ ಕಿರುಕುಳದ ಆರೋಪವನ್ನೂ ಪತಿ ಆದಿಲ್ ಮೇಲೆ ಹೊರಸಿದ್ದಾರೆ. ಅವೆಲ್ಲವೂ ಗುರುತರ ಆರೋಪಗಳಾದ ಕಾರಣದಿಂದಾಗಿ ಕೋರ್ಟ್ ಆದಿಲ್ ಗೆ 14 ದಿನಗಳ ನ್ಯಾಯಾಂಗ ಬಂಧನ ಆದೇಶ ಹೊರಡಿಸಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k