ಬೆಂಗಳೂರು: #MeToo ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶೃತಿ ಹರಿಹರನ್ ರಾತ್ರೋರಾತ್ರಿ ಪೊಲೀಸ್ ಠಾಣೆಗೆ ಹೋಗಿ ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಆಪ್ತನ ವಿರುದ್ಧ ದೂರು ದಾಖಲಿಸಿದರು. ಆದರೆ ಶೃತಿ ದೂರು ನೀಡಿದರೂ, ಇದುವರೆಗೂ ಯಾವುದೇ ಎಫ್‍ಐಆರ್ ದಾಖಲಾಗಿಲ್ಲ.
ಫಿಲಂ ಚೇಂಬರ್ ನಲ್ಲಿ ಸಭೆ ನಡೆಯುತ್ತಿದ್ದ ವೇಳೆ ಫಿಲಂ ಚೇಂಬರ್ ಕಟ್ಟಡದ ಒಳಗೆ ಮತ್ತು ಹೊರಗೆ ನಮ್ಮ ಪ್ರಕರಣ ಸಂಬಂಧ ಪಡದ ಅನಪೇಕ್ಷಿತ ವ್ಯಕ್ತಿಗಳು ಜಮಾವಣೆಗೊಂಡಿದ್ದರು ಎಂದು ಶೃತಿ ದೂರು ನೀಡಿದ್ದರೂ, ಆದರೆ ಇದುವರೆಗೂ ಯಾವುದೇ ಎಫ್‍ಐಆರ್ ದಾಖಲಾಗಿಲ್ಲ.
Advertisement
Advertisement
ಗುರುವಾರ ಸಂಜೆ ಫಿಲಂ ಚೇಂಬರ್ ನಮಗೆ ಕರೆ ಮಾಡಿ ಸಭೆಗೆ ಕರೆಸಿದ್ದರು. ನಾವು ಫಿಲಂ ಚೇಂಬರ್ ಮಾತಿಗೆ ಗೌರವಿಸಿ ಯಾವುದೇ ದೂರು ನೀಡಿಲ್ಲ. ಆದರೆ ಅರ್ಜುನ್ ಅವರು ಶೃತಿ ವಿರುದ್ಧ ಎರಡು ದೂರು ದಾಖಲಿಸಿದ್ದಾರೆ. ನಾವು ರಾತ್ರಿ ದೂರು ನೀಡಿದ್ದೆವು. ಆದರೆ ರಾತ್ರಿ ಆಗಿದ್ದರಿಂದ ನಾವು ಪೊಲೀಸರಿಗೆ ಹೆಚ್ಚಿನ ಒತ್ತಡ ಹೇರಲಿಲ್ಲ ಎಂದು ಶೃತಿ ಪರ ವಕೀಲರಾದ ಅನಂತ್‍ನಾಯಕ್ ತಿಳಿಸಿದ್ದಾರೆ.
Advertisement
Advertisement
ದೂರು ನೀಡಿದ್ದರೆ ಅದರಲ್ಲಿರುವ ಸಾರಾಂಶ ಮುಖ್ಯವಾಗುತ್ತದೆ. ಎರಡು ರೀತಿಯ ದೂರು ಇರುತ್ತದೆ. ಒಂದು ಕಾಗ್ನಿಸಬಲ್ ಹಾಗೂ ನಾನ್ ಕಾಗ್ನಿಸಬಲ್ ಎಂಬುದು ನೋಡಬೇಕು. ದೂರು ಕಾಗ್ನಿಸಬಲ್ ಆಗಿದ್ದರೆ ನಾವು ಎಫ್‍ಐಆರ್ ದಾಖಲಿಸುತ್ತೇವೆ. ಆದರೆ ದೂರು ನಾನ್ ಕಾಗ್ನಿಸಬಲ್ ಆದರೆ ಕೋರ್ಟ್ ಮೊರೆ ಹೋಗುತ್ತೇವೆ. ಕೋರ್ಟ್ ಒಪ್ಪಿಕೊಂಡರೆ ಆಗ ನಾವು ಎಫ್‍ಐಆರ್ ದಾಖಲಿಸಿಕೊಂಡಿದ್ದೇವೆ ಎಂದು ಸೆಂಟ್ರಲ್ ಡಿಸಿಪಿ ದೇವರಾಜ್ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
https://www.youtube.com/watch?v=RKPY3g4jWRM
https://www.youtube.com/watch?v=Mud4GP9t0ik
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv