ಹಾಸನ: ಸೂರಜ್ ರೇವಣ್ಣಗೆ (Suraj Revanna) ಬ್ಲಾಕ್‌ಮೇಲ್ ಮಾಡಲಾಗಿದೆ ಎಂದು ದೂರು ನೀಡಿದ್ದ ಶಿವಕುಮಾರ್ (Shivakumar) ವಿರುದ್ಧ ಹಣ ದುರುಪಯೋಗ ಆರೋಪದಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.
ಶ್ರೀರಾಮ್ ಫೈನಾನ್ಸ್‌ನ ರಾಮನಾಥಪುರ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಶಿವಕುಮಾರ್ ಮೇಲೆ ವಾಹನ ಸಾಲ ಪಡೆದ ಗ್ರಾಹಕರು ನೀಡಿದ್ದ ಹಣವನ್ನು ದುರ್ಬಳಕೆ ಮಾಡಿದ ಆರೋಪ ಕೇಳಿ ಬಂದಿದೆ.
ಆರು ಗ್ರಾಹಕರು ವಾಹನ ಸಾಲದ ವಂತಿಗೆ ಕಟ್ಟಲು ನೀಡಿದ್ದ 2,91,916 ರೂ. ಹಣವನ್ನು ಶಿವಕುಮಾರ್ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ರಾಮನಾಥಪುರ ಶಾಖೆಯ ಮ್ಯಾನೇಜರ್ ಕೇಶವಮೂರ್ತಿ ಅವರು ಜೂ.21 ರಂದು ಕೊಣನೂರು ಠಾಣೆಗೆ ದೂರು ನೀಡಿದ್ದರು. ಇದನ್ನೂ ಓದಿ: ಗಂಡ ಇಲ್ಲದೇ ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ: ರೇಣುಕಾಸ್ವಾಮಿ ಕೊಲೆ ಕೇಸ್‌ನ ಎ4 ಆರೋಪಿ ಪತ್ನಿ ಕಣ್ಣೀರು
ಅರಕಲಗೂಡು ಮೂಲದ ಯುವಕನೋರ್ವನಿಂದ ಎಂಎಲ್‌ಸಿ ಸೂರಜ್ ರೇವಣ್ಣಗೆ ಬ್ಲಾಕ್ ಮೇಲ್ ಮಾಡಲಾಗಿದೆ ಎಂದು ಆರೋಪಿಸಿ ಶಿವಕುಮಾರ್ ದೂರು ನೀಡಿದ್ದರು.