ತುಮಕೂರು: ಪ್ರಚೋದನಕಾರಿಯಾಗಿ ಭಾಷಣ ಮಾಡಿದ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದ ಬಿಜೆಪಿಯ ಮಾಜಿ ಶಾಸಕ ಸುರೇಶ್‍ಗೌಡ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಹೊನಸಿಗೆರೆ ಗ್ರಾಮದಲ್ಲಿ ನಡೆದಿದ್ದ ಕಾರ್ಯಕರ್ತರ ಸಭೆಯಲ್ಲಿ ಸುರೇಶ್ ಗೌಡ ಅವರು, ಜೆಡಿಎಸ್ ಬಗ್ಗೆ ಜನರಲ್ಲಿ ದ್ವೇಷ ಹುಟ್ಟುವ ರೀತಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದರು. ಈ ಸಂಬಂಧ ವಿಚಕ್ಷಣಾದಳದ ಅಧಿಕಾರಿ ಡಿ.ಜಯರಾಮಣ್ಣ ಅವರು ಮಾಜಿ ಶಾಸಕರ ವಿರುದ್ಧ ಹೆಬ್ಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Advertisement
Advertisement
ಮಾಜಿ ಶಾಸಕ ಸುರೇಶ್ ಗೌಡ ಅವರ ವಿರುದ್ಧ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 188, 505 (ಸಾರ್ವಜನಿಕ ಕೇಡಿಗೆ ಕಾರಣವಾಗುವ ಹೇಳಿಕೆ) ಅಡಿ ಎಫ್‍ಐಆರ್ ದಾಖಲಾಗಿದೆ.
Advertisement
ಸುರೇಶ್‍ಗೌಡ ಹೇಳಿದ್ದೇನು?:
ಒಂದೊಂದು ವೋಟು ಕೂಡ ಮುಖ್ಯ. ಯಾವುದಕ್ಕೂ ಎದೆಗುಂದದೆ ದೊಣ್ಣೆ ಹಿಡಿದು ನಿಂತುಕೊಳ್ಳಿ. ಯಾವನ್ ಬರ್ತಾನೋ ಬರಲಿ, ನನ್ಮಕ್ಳು ಜೆಡಿಎಸ್‍ನವರನ್ನು ಹೆದರಿಸಬೇಕು. ಅವರು ಮೋಸ ಮಾಡ್ತಾರೆ. ಅವರು ಕೌರವ ವಂಶಸ್ಥರು. ಅವರ ಮೇಲೆ ಯುದ್ಧ ಮಾಡಬೇಕಾದರೆ ಕೃಷ್ಣನಂತೆ ನಾನು ಇರುತ್ತೀನಿ. ನಿಂತ್ಕೊಂಡು ಯುದ್ಧ ಮಾಡಿ ಅವರನ್ನು ಸಂಹಾರ ಮಾಡೋಣ. ಅವರ ಟೆಕ್ನಿಕ್ಸ್ ನಂಗೆ ಗೊತ್ತಿದೆ ಎಂದು ಹೇಳಿದ್ದರು.