ಸ್ಯಾಂಡಲ್‌ವುಡ್‌ನ ‘ರಣಾಕ್ಷ’ (Ranaksha) ಸಿನಿಮಾದ ನಿರ್ಮಾಪಕ ಶಿವರಾಮ್ (Shivaram) ಮೇಲೆ ಎಫ್‌ಐಆರ್ ದಾಖಲಾಗಿದೆ. ಹೀರೋಯಿನ್ ಮಾಡ್ತೀನಿ ಅಂತ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ನಿರ್ಮಾಪಕ ಶಿವರಾಮ್ ಮೇಲೆ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ:ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣಗೆ ಮದುವೆ ಆಮಂತ್ರಣ ನೀಡಿದ ಡಾಲಿ
Advertisement
2023ರಲ್ಲಿ ‘ರಣಾಕ್ಷ’ ಎಂಬ ಸಿನಿಮಾ ಶೂಟಿಂಗ್ ನಡೆಯುತ್ತಿರುತ್ತದೆ. ಈ ಚಿತ್ರಕ್ಕೆ ಪೂಜಾ ಅವರನ್ನು ಆಯ್ಕೆ ಮಾಡಿರುತ್ತಾರೆ. ಮಗಳ ಸಿನಿಮಾ ಶೂಟಿಂಗ್ ನೋಡಲು ಸೆಟ್ ಬಂದಿದ್ದ ತಾಯಿ ಸುನಂದಾಗೂ ಚಿತ್ರದ ನಿರ್ಮಾಪಕ ಶಿವರಾಮ್ ಪರಿಚಯವಾಗುತ್ತದೆ. ಹೀಗೆ ಶೂಟಿಂಗ್‌ಗೆ ಆರ್ಥಿಕವಾಗಿ ಸಮಸ್ಯೆ ಆಗಿದೆ ಎಂದು ನಟಿಯ ತಾಯಿಯ ಬಳಿ 5 ಲಕ್ಷ ರೂ.ವನ್ನು ಶಿವರಾಮ್ ಪಡೆದಿರುತ್ತಾರೆ. ಆ ನಂತರ ಚಿತ್ರದ ಶೂಟಿಂಗ್ ಕೂಡ ನಡೆಸಿರುತ್ತಾರೆ. ಮುಂದೆ ಸಮಯಕ್ಕೆ ಸರಿಯಾಗಿ ಆ ಹಣವನ್ನು ಶಿವರಾಮ್ ಹಿಂದಿರುಗಿಸಿರುತ್ತಾರೆ.
Advertisement
Advertisement
ಕೆಲವು ದಿನಗಳ ಬಳಿಕ ಮತ್ತೆ ನಟಿಯ ತಾಯಿಗೆ ಕರೆ ಮಾಡಿ ಇನ್ನೊಂದಿಷ್ಟು ಹಣ ಸಿಗಬಹುದಾ ಎಂದು ಕೇಳಿದ್ದಾರೆ. ಆ ಸಮಯದಲ್ಲಿ ನಗದು ಹಣವಿರದ ಕಾರಣ ತಮ್ಮ ಬಳಿಯಿದ್ದ 575 ಗ್ರಾಂ ಚಿನ್ನವನ್ನು ಶಿವರಾಮ್‌ಗೆ ನೀಡಿದ್ದಾರೆ. ಶ್ಯೂರಿಟಿಗಾಗಿ ಎರಡು ಚೆಕ್‌ಗಳನ್ನು ನಟಿಯ ತಾಯಿಗೆ ನೀಡಿದ್ದರು. ಆದರೆ ಚೆಕ್ ಅವಧಿ ಮುಗಿದಿದ್ದರೂ ಚಿನ್ನಾಭರಣ ನೀಡದೇ ನಿರ್ಮಾಪಕ ವರಸೆ ಬದಲಿಸಿದ್ದಾರೆ. ಈ ಹಿನ್ನೆಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಶಿವರಾಮ್ ವಿರುದ್ಧ ನಟಿಯ ತಾಯಿ ಸುನಂದಾ ಎಫ್‌ಐಆರ್ ದಾಖಲಿಸಿದ್ದಾರೆ.