ಅಯೋಗ್ಯ ಸಿನಿಮಾ ಸಹ ನಟಿಯಿಂದ ಬ್ಲಾಕ್‍ಮೇಲ್, ಎಫ್‍ಐಆರ್ ದಾಖಲು

Public TV
1 Min Read
AYOGYA CO STAR copy

ಬೆಂಗಳೂರು: ಅಯೋಗ್ಯ ಸಿನಿಮಾದ ಸಹ ನಟಿಯ ಮೇಲೆ ಎಫ್‍ಐಆರ್ ದಾಖಲಾಗಿದೆ.

ದೃಶ್ಯ `ಅಯೋಗ್ಯ’ ಸಿನಿಮಾದ ಸಹ ನಟಿಯಾಗಿದ್ದು, ಈಕೆ ಬ್ಲಾಕ್‍ ಮೇಲ್ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಸ್ನೇಹಿತ ಪ್ರಶಾಂತ್ ಎಂಬವರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ.

ದೃಶ್ಯ ಪ್ರಶಾಂತ್ ಜೊತೆ ಎರಡು ವರ್ಷದಿಂದ ಲಿವಿಂಗ್ ಟುಗೆದರ್ ನಲ್ಲಿ ಇದ್ದಳು. ಸಲುಗೆ ಬೆಳೆಸಿಕೊಂಡಿದ್ದ ಈಕೆ ಪ್ರಶಾಂತ್ ಇನ್ ಸ್ಟಾಗ್ರಾಮ್ ಹಾಗೂ ಫೇಸ್‍ಬುಕ್ ಚೆಕ್ ಮಾಡುತ್ತಿದ್ದಳು. ಬಳಿಕ ಇನ್ ಸ್ಟಾಗ್ರಾಂ ಬಳಸಿ ಅದರಲ್ಲಿ ಬೇರೆ ಹುಡುಗ-ಹುಡುಗಿಗೆ ದೃಶ್ಯ ಮೆಸೇಜ್ ಮಾಡುತ್ತಿದ್ದಳು. ಬೇರೆಯವರಿಗೆ ಮೆಸೇಜ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದಳು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

vlcsnap 2019 03 09 08h51m44s93

ತನ್ನ ಖಾಸಗಿ ಫೋಟೋಗಳನ್ನು ಸಂಗ್ರಹಿಸಿದ್ದ ದೃಶ್ಯ ವಿರುದ್ಧ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್ ದೂರು ನೀಡಿದ್ದರು. ಇದಾದ ಬಳಿಕ ಮತ್ತೆ ನನ್ನ ಇನ್ ಸ್ಟಾಗ್ರಾಮ್ ಹಾಗೂ ಫೇಸ್‍ಬುಕ್ ಬಳಸಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಪ್ರಶಾಂತ್ ಸೈಬರ್ ಕ್ರೈಂ ಮೊರೆ ಹೋಗಿದ್ದಾರೆ.

ಸದ್ಯಕ್ಕೆ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದು, ಈಕೆ ಹಿಂದೆ ಇರುವ ಕೆಲ ಮಂದಿ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಸೈಬರ್ ಕ್ರೈಂ ಪೊಲೀಸರು ದೃಶ್ಯ ಮೊಬೈಲ್ ನ ಸೀಜ್ ಮಾಡಿದ್ದು, ಮೊಬೈಲ್‍ನನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *