ಮತ್ತೊಬ್ಬ ಸ್ಯಾಂಡಲ್‍ವುಡ್ ನಟನ ಮೇಲೆ ಎಫ್‍ಐಆರ್ ದಾಖಲು

Public TV
2 Min Read
RISHI

ಬೆಂಗಳೂರು: ಚಿಕ್ಕಮ್ಮನ ಮೇಲೆ ಹಲ್ಲೆ ಮಾಡಿದ್ದ ಆರೋಪದ ಮೇರೆಗೆ ಅಪರೇಷನ್ ಅಲುಮೇಲಮ್ಮ ಖ್ಯಾತಿಯ ನಟ ರಿಷಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ನಟ ರಿಷಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಇದೇ ತಿಂಗಳ 11 ರಂದು ಪೊಲೀಸರು ಎನ್‍ಸಿಆರ್ ದಾಖಲಿಸಿಕೊಂಡಿದ್ದರು. ಇದೀಗ ಎಫ್‍ಐಆರ್ ದಾಖಲಿಸಿಕೊಂಡಿರುವ ಬಸವೇಶ್ವರನಗರ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಏನಿದು ಪ್ರಕರಣ?
ನಟ ರಿಷಿ ವಿರುದ್ಧ ಅವರ ಚಿಕ್ಕಮ್ಮ ಶಾಲಿನಿ ಆಸ್ತಿಗಾಗಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಟ ರಿಷಿ ಬಸವೇಶ್ವರ ನಗರದಲ್ಲಿರುವ ತಮ್ಮ ತಾತನ ಮನೆಯಲ್ಲಿ ತಂದೆ-ತಾಯಿಯೊಂದಿಗೆ ವಾಸವಾಗಿದ್ದಾರೆ. ಅಕ್ಟೋಬರ್ 10ರಂದು ದೂರುದಾರರಾದ ಶಾಲಿನಿ ಗೋಪಿನಾಥ್ ಅವರು ಪಾರ್ಶ್ವವಾಯುವಿನಿಂದ ಬಳಲುತ್ತಿರುವ ತಮ್ಮ ತಂದೆಯನ್ನು ನೋಡೆಲೆಂದು ಮನೆಗೆ ಹೋಗಿದ್ದರು.

RISHI

ಈ ವೇಳೆ  ರಿಷಿ ಮತ್ತು ಅವನ ಪೋಷಕರು, ಆಸ್ತಿ ವಿಚಾರವಾಗಿ ಜಗಳ ಮಾಡಿದ್ದಾರೆ. ಅಷ್ಟೇ ಅಲ್ಲದೇ ಖಾಲಿ ಪೇಪರ್ ಗಳ ಮೇಲೆ ಸಹಿ ಹಾಕು, ಈ ಆಸ್ತಿಯನ್ನು ತಮ್ಮ ಹೆಸರಿಗೆ ಬರೆದುಕೊಟ್ಟರೆ ಮಾತ್ರ ಮನೆಯೊಳಗೆ ಪ್ರವೇಶ ನೀಡುವುದಾಗಿ ಬೆದರಿಸಿದ್ದರು ಎಂದು ಚಿಕ್ಕಮ್ಮ ಆರೋಪಿಸಿದ್ದರು.

ರಿಷಿ ನನ್ನ ಮೇಲೆ ಹಲ್ಲೆ ಮಾಡಲು ಮುಂದದಾಗ ನಾನು ಆತಂಕಗೊಂಡು ಜೋರಾಗಿ ಕೂಗಿಕೊಂಡೆ. ಈ ವೇಳೆ ರಿಷಿ ತಾಯಿ ಅನಲಾ ನನ್ನ ಬಾಯಿಗೆ ಬಟ್ಟೆ ತುರುಕಿದ್ದರು. ಆಗ ರಿಷಿ ಮಾರಕಾಸ್ತ್ರ ತೋರಿಸಿ ಹೆದರಿಸಿ ಖಾಲಿ ಪೇಪರ್ ಗೆ ಸಹಿ ಮಾಡುವಂತೆ ಒತ್ತಾಯಿಸಿದರನು. ಅಷ್ಟೇ ಅಲ್ಲದೇ ಪ್ರಾಣಬೆದರಿಕೆ ಹಾಕಿದ್ದರು ಎಂದು ಶಾಲಿನಿ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

rishi new

ಆರೋಪ ಸುಳ್ಳು:
ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಷಿ, ಚಿಕ್ಕಮ್ಮ ಮಾಡುತ್ತಿರುವ ಆರೋಪವೆಲ್ಲ ಸುಳ್ಳು ಎಂದು ತಳ್ಳಿ ಹಾಕಿದ್ದರು. ಮೊದಲಿನಿಂದಲೂ ಚಿಕ್ಕಮ್ಮ ತಾತನ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದರು. ಆದರೆ ಈಗ ತಾತ ಸ್ಟ್ರೋಕ್ ಆಗಿ ಹಾಸಿಗೆ ಹಿಡಿದಿದ್ದರಿಂದ ಅವರಿಗೆ ಹಣ ಕೊಡಲು ಯಾರು ಇಲ್ಲ. ಆದ್ದರಿಂದ ನಾನು ನಟ, ಹಣ ಚೆನ್ನಾಗಿ ಸಿಗಬಹುದು ಎಂಬ ಕಾರಣಕ್ಕೆ ನನ್ನ ಹಿಂದೆ ಬಿದ್ದಿದ್ದಾರೆ. ನಾನು ಹಣ ಕೊಡುವುದಿಲ್ಲ ಎಂದು ಹೇಳಿದ್ದಕ್ಕೆ ನನ್ನ ವಿರುದ್ಧ ಚಿಕ್ಕಮ್ಮ ಈ ರೀತಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರಿಗೆ ಏನೂ ಕೆಲಸವಿಲ್ಲ, ಅವರು ಬಹಳ ಕ್ರಿಮಿನಲ್ ಬುದ್ಧಿಯವರು ಎಂದು ರಿಷಿ ದೂರಿದ್ದರು.

ಸದ್ಯಕ್ಕೆ ನಟ ರಿಷಿ ಪುನಿತ್ ರಾಜ್‍ಕುಮಾರ್ ನಿರ್ಮಿಸುತ್ತಿರುವ “ಕವಲುದಾರಿ’ ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ತಮಿಳು ನಟ ಧನುಷ್ ನಿರ್ಮಾಣದ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *