ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ನಟ ಧ್ರುವ ಸರ್ಜಾ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.
ಧ್ರುವ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಕಟೌಟ್ ಮತ್ತು ಫ್ಲೆಕ್ಸ್ ಗಳನ್ನು ಹಾಕಿದ್ದ ಹಿನ್ನೆಲೆಯಲ್ಲಿ ಧ್ರುವ ಸರ್ಜಾ ವಿರುದ್ಧ ದೂರು ದಾಖಲಾಗಿದೆ. ಬನಶಂಕರಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.
Advertisement
ಹೈಕೋರ್ಟ್ ಇತ್ತೀಚೆಗೆ ಬ್ಯಾನರ್ ಹಾಗೂ ಹೋಲ್ಡಿಂಗ್ಸ್ ತೆರವು ವಿಚಾರವಾಗಿ ಪಾಲಿಕೆಗೆ ಚಾಟಿ ಬೀಸಿದ್ದು ಪಾಲಿಕೆ ಜಾಹೀರಾತು ಬ್ಯಾನ್ ಮಾಡಿದೆ. ಸದ್ಯ ಬನಶಂಕರಿ ಉಪ ವಿಭಾಗದ ಎಆರ್‍ಒ ಬನಶಂಕರಿ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.
Advertisement
Advertisement
ದೂರಿನಲ್ಲಿ ಏನಿದೆ?
ಪಿರ್ಯಾದುದಾರ ತಾರಾನಾಥ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬನಶಂಕರಿಯ ಉಪ ವಿಭಾಗದಲ್ಲಿ ಸಹಾಯಕ ಕಂದಾಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಜಾಹೀರಾತು ಮತ್ತು ಜಾಹೀರಾತು ಫಲಕಗಳನ್ನು ಅಳವಡಿಸದಂತೆ ಪಾಲಿಗೆ ಆಯುಕ್ತರು ಆಗಸ್ಟ್ 12ರಂದು ಪ್ರಕಟಣೆಯನ್ನು ಹೊರಡಿಸಿತ್ತು. ಅಲ್ಲದೇ ಈಗಾಗಲೇ ಅಳವಡಿಸಿರುವ ಜಾಹೀರಾತು ಫಲಕಗಳನ್ನು ಆಗಸ್ಟ್ 30ರೊಳಗೆ ಸ್ವಿಚ್ಛೆಯಿಂದ ತೆರೆವುಗೊಳಿಸಲು ಸೂಚಿಸಿ ಪ್ರಕಟನೆ ಹೊರಡಿಸಿತ್ತು.
Advertisement
ಹೀಗಿರುವಾಗ ಆಗಸ್ಟ್ 12ರಂದು ಕಾರ್ಯ ವ್ಯಾಪ್ತಿಯ ವಾರ್ಡ್ ನಂ 167ರ ಬಯಲು ಜಾಗದಲ್ಲಿ ಕನ್ನಡದ ನಟ ಧ್ರುವ ಸರ್ಜಾ ಅವರು ಹುಟ್ಟುಹಬ್ಬದ ಪ್ರಯುಕ್ತ ಅನಧಿಕೃತವಾಗಿ ಸುಮಾರು 20-25 ಅಡಿ ಭಾವಚಿತ್ರದ ಕಟೌಟ್ ಅನ್ನು ಕೆ.ಆರ್ ರಸ್ತೆ ಹಾಗೂ ಶಾಸ್ತ್ರಿ ನಗರ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಹಾಕಲಾಗಿತ್ತು. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಅಡಚಣೆ ಮಾಡಿ ಕಟೌಟ್ ಅಳವಡಿಸದಂತೆ ಸೂಚಿಸಿ ಪ್ರಕಟಣೆಗಳನ್ನು ಹೊರಡಿಸಿದರೂ ಸಹ ಅವುಗಳನ್ನು ಧಿಕ್ಕರಿಸಿ ಕಟೌಟ್‍ಗಳನ್ನು ತೆರೆವುಗೊಳಿಸದೆ ನಗರದ ಸೌಂದರ್ಯಕ್ಕೆ ಧಕ್ಕೆಯನ್ನುಂಟು ಮಾಡಿದ್ದಾರೆ. ಹಾಗಾಗಿ ಅವರ ವಿರುದ್ಧ ಕೆ.ಓ.ಪಿ(ಪಿ&ಡಿ) ಆಕ್ಟ್- 1981, ಕರ್ನಾಟಕ ಮುನ್ಸಿಪಲ್ ಕಾರ್ಪೋರೇಶನ್ ಆಕ್ಟ್ 1976 ಮತ್ತು ಕಲಂ 188 ಐಪಿಸಿ ರಿತ್ಯಾ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv