ನೈಟ್ ಕರ್ಫ್ಯೂ ನಿಯಮ ಉಲ್ಲಂಘಿಸಿದ್ರೆ ಎಫ್‌ಐಆರ್ – ಬಳ್ಳಾರಿ ಎಸ್‌ಪಿ ಎಚ್ಚರಿಕೆ

Public TV
1 Min Read
night curfew 1

ಬಳ್ಳಾರಿ: ನೈಟ್ ಕರ್ಫ್ಯೂ ನಿಯಮ ಉಲ್ಲಂಘಿಸಿದರೆ ಅಂತಹವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಬಳ್ಳಾರಿ ಎಸ್ಪಿ ಸೈದುಲ್ ಅದಾವತ್ ಎಚ್ಚರಿಕೆ ನೀಡಿದ್ದಾರೆ.

OMICRON

ಡಿಸೆಂಬರ್ 28 ರಿಂದ ನೈಟ್ ಕರ್ಫ್ಯೂ ಜಾರಿ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರದಲ್ಲಿ 7 ಕಡೆ ಚೆಕ್‌ಪೋಸ್ಟ್ ಹಾಕಲಾಗುವುದು. ಅನವಶ್ಯಕವಾಗಿ ಓಡಾಡುವರಿಗೆ ಮಾತ್ರ ಈ ನಿಯಮ ಅನ್ವಯಿಸಲಿದೆ. ಗೂಡ್ಸ್ ವಾಹನ, ಅಂತರ ಜಿಲ್ಲಾ ಬಸ್‌ಗಳಿಗೆ ನಿರ್ಬಂಧ ಇರುವುದಿಲ್ಲ. 10 ಗಂಟೆ ನಂತರ ಅಂಗಡಿ ತೆರೆಯಲು ಅವಕಾಶ ಇಲ್ಲ. ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಪಿಐಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಪ್ರತಿ ತಾಲೂಕು ಕೇಂದ್ರಗಳಲ್ಲೂ ಚೆಕ್‌ಪೋಸ್ಟ್ ಹಾಕಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:  ಬೇಡಿಕೆ ಈಡೇರಿಸುವಂತೆ ಪ್ರತಿಭಟಸಿದ 100ಕ್ಕೂ ಹೆಚ್ಚು ಆದಿವಾಸಿಗಳು ಪೊಲೀಸರ ವಶಕ್ಕೆ

NIGHT CURFEW 6 1

ನಿಯಮ ಉಲ್ಲಂಘನೆ ಮಾಡಿದರೆ, ವಿಪತ್ತು ನಿರ್ವಹಣೆ ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ ಅಡಿ ಎಫ್‌ಐಆರ್ ಹಾಕಲಾಗುವುದು. ಖಾಸಗಿ ವಾಹನಗಳಲ್ಲಿ ಹೊರಗಡೆ ಬಂದರೆ ವಾಹನ ವಶಕ್ಕೆ ಪಡೆಯಲಾಗುವುದು. ಡಿಸೆಂಬರ್ 31ರ ರಾತ್ರಿ ಹೊಸ ವರ್ಷ ಆಚರಣೆ ಹಿನ್ನೆಲೆ ಗುಂಪಾಗಿ ಸಂಭ್ರಮಾಚರಣೆ ಮಾಡಿದವರ ವಿರುದ್ಧವೂ ಪ್ರಕರಣ ದಾಖಲಿಸುತ್ತೇವೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಲಾರಿಗೆ ವ್ಯಾನ್ ಡಿಕ್ಕಿ – ೪ ಮೀನುಗಾರರು ಸಾವು

Share This Article
Leave a Comment

Leave a Reply

Your email address will not be published. Required fields are marked *