ಪಾಟ್ನಾ: ಪ್ರಧಾನಿ ಮೋದಿ (PM Modi) ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ (Tejaswi Yadav) ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಎಕ್ಸ್ ಖಾತೆಯಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಕ್ಕಾಗಿ ಮಹಾರಾಷ್ಟ್ರದ (Maharashtra) ಗಡ್ಚಿರೋಲಿಯ ಬಿಜೆಪಿ (BJP) ಶಾಸಕ ಮಿಲಿಂದ್ ನರೋಟೆ ಅವರು ಬಿಹಾರದ ಮಾಜಿ ಉಪಮುಖ್ಯಮಂತ್ರಿ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ನ್ಯೂಯಾರ್ಕ್ | 54 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಪಲ್ಟಿ – ಭಾರತೀಯರು ಸೇರಿ ಐವರು ಸಾವು
ದೂರಿನ ಆಧಾರದ ಮೇಲೆ ಬಿಎನ್‌ಎಸ್ (BNS) ಅಡಿಯಲ್ಲಿ 196, 356, 352 ಮತ್ತು 353 ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
आज गया में लगेगी झूठ और जुमलों की दुकान!
प्रधानमंत्री जी, गया में बिना हड्डी की जुबान से आज झूठ और जुमलों का हिमालय खड़ा करेंगे लेकिन बिहार के न्यायप्रिय जनता दशरथ मांझी की तरह उनके झूठ और जुमलों के इन विशाल पहाड़ों को तोड़ देगी।
11 साल अपनी और 20 वर्षों की एनडीए सरकार के 20… pic.twitter.com/X1KRhb80pY
— Tejashwi Yadav (@yadavtejashwi) August 22, 2025
ಎಕ್ಸ್‌ನಲ್ಲಿ ಏನಿದೆ?
ಮತಗಳ್ಳ ಬಿಹಾರದ ಗಯಾಗೆ ಬರುತ್ತಿದ್ದಾನೆ. ಬಿಹಾರಿಗಳ ಮುಂದೆ ಸುಳ್ಳು ಹೇಳುತ್ತಾನೆ. ದಶರಥ ಮಾಂಝಿಯವರಿದ್ದ ಬಿಹಾರದ (Bihar) ನ್ಯಾಯಯುತ ಜನರು ಮುಂದೆ ಪ್ರಧಾನಿ ಅವರು, ಮೂಳೆಯಿಲ್ಲದ ನಾಲಿಗೆಯಿಂದ ಸುಳ್ಳಿನ ಹಿಮಾಲಯವನ್ನೇ ನಿರ್ಮಿಸುತ್ತಾರೆ ಎಂದು ಬರೆದುಕೊಂಡಿದ್ದರು.ಇದನ್ನೂ ಓದಿ: ಕೊಲ್ಲಾಪುರದಲ್ಲಿ ಅನ್ಯಕೋಮಿನ ಗುಂಪುಗಳ ನಡುವೆ ಘರ್ಷಣೆ – 10ಕ್ಕೂ ಹೆಚ್ಚು ಮಂದಿಗೆ ಗಾಯ