(ಸಾಂದರ್ಭಿಕ ಚಿತ್ರ)
ಲಕ್ನೋ: ಮುನ್ಸಿಪಾಲ್ ಚುನಾವಣೆಯಲ್ಲಿ (Municipal Election) ಮತದಾನ ಕರ್ತವ್ಯದಿಂದ ವಿನಾಯಿತಿ ಪಡೆಯುವ ಸಲುವಾಗಿ ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರು ನಕಲಿ ಕೋವಿಡ್-19 ಪಾಸಿಟಿವ್ ರಿಪೋರ್ಟ್ ನೀಡಿ ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಪಿಲಿಭಿತ್ನ (Pilibhit) ಪುರನ್ಪುರ ಪ್ರದೇಶದಲ್ಲಿ ನಡೆದಿದೆ.
Advertisement
ಮೇ 11ರಂದು ನಡೆಯಲಿರುವ ಪುರಸಭಾ ಚುನಾವಣೆಗೆ ಆಯೋಜಿಸಿದ್ದ ಪಿಂಕ್ ಮತಗಟ್ಟೆಯ ಮತಗಟ್ಟೆ ಸಂಖ್ಯೆ 3ರಲ್ಲಿ ರಿತು ತೋಮರ್ ಅವರನ್ನು ಮತಗಟ್ಟೆಯ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಶಿಕ್ಷಕಿ ಕೋವಿಡ್ ಪಾಸಿಟಿವ್ (Covid Positive) ಎಂಬ ನಕಲಿ ದಾಖಲೆಯನ್ನು ತೋರಿಸಿ, ಚುನಾವಣಾ ಕರ್ತವ್ಯದಿಂದ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳು ದಾಖಲೆಯನ್ನು ಪರಿಶೀಲಿಸಿದಾಗ ಅದು ಇನ್ನೊಬ್ಬ ವ್ಯಕ್ತಿಯ ದಾಖಲೆಗಳು ಎಂದು ತಿಳಿದುಬಂದಿದೆ. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates
Advertisement
Advertisement
ನಕಲಿ ದಾಖಲೆ ನೀಡಿದ ಶಿಕ್ಷಕಿ ಚುನಾವಣಾ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು, ಇವರ ವಿರುದ್ಧ ಎಫ್ಐಆರ್ (FIR) ದಾಖಲಿಸುವಂತೆ ಮೂಲ ಶಿಕ್ಷಾ ಅಧಿಕಾರಿ (BSA) ಅಮಿತ್ ಕುಮಾರ್ ಸಿಂಗ್ ಅವರಿಗೆ ಮಂಗಳವಾರ ಆದೇಶ ನೀಡಿದ್ದಾರೆ. ಇದನ್ನೂ ಓದಿ: 105ರ ಇಳಿವಯಸ್ಸಿನಲ್ಲೂ ಹುರುಪಿನಿಂದ ಮತ ಚಲಾಯಿಸಿದ ಶತಾಯುಷಿ