Bollywood

ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ವಿರುದ್ಧ ಎಫ್‍ಐಆರ್

Published

on

Share this

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ವಿರುದ್ಧ ಮುಂಬೈ ಪೊಲೀಸರು ವಂಚನೆ ಪ್ರಕರಣ ದಾಖಲು ಮಾಡಿದ್ದಾರೆ. ಶಿಲ್ಪಾ ಶೆಟ್ಟಿ, ಆಕೆಯ ಗಂಡ ರಾಜ್ ಕುಂದ್ರಾ ಹಾಗೂ ಆನ್‍ಲೈನ್ ಶಾಪಿಂಗ್ ಕಾರ್ಯಕ್ರಮ ಬೆಸ್ಟ್ ಡೀಲ್‍ನ ನಿರ್ದೇಶಕರ ಮೇಲೆ ಪ್ರಕರಣ ದಾಖಲಾಗಿದೆ.

24 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಅಂತಾ ಟೆಕ್ಸ್ ಟೈಲ್ ಅಂಗಡಿ ಮಾಲೀಕರಾದ 60 ವರ್ಷದ ರವಿ ಮೋಹನ್‍ಲಾಲ್ ಭೋಲಾಟಿಯಾ ಆರೋಪ ಮಾಡಿರೋ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ವರ್ಷದ ಹಿಂದೆ ನಾನು ಶಿಲ್ಪಾ ಶೆಟ್ಟಿ, ಅವರ ಗಂಡ ರಾಜ್ ಕುಂದ್ರಾ ಹಾಗೂ ಕಾರ್ಯಕ್ರಮದ ನಿರ್ದೇಶಕರಾದ ದುರ್ಶಿತ್ ಇಂದ್ರವನ್ ಷಾ, ಉದಯ್ ಕೊಠಾರಿ ಹಾಗೂ ವೇದಾಂತ್ ಅವರನ್ನ ಆನ್‍ಲೈನ್ ಶಾಪಿಂಗ್ ಡೀಲ್‍ಗಾಗಿ ಭೇಟಿ ಮಾಡಿದ್ದೆ. 2015ರಲ್ಲಿ ಅವರು ನನ್ನಿಂದ 1.5 ಕೋಟಿ ರೂಪಾಯಿ ಮೌಲ್ಯದ ಬೆಡ್‍ಶೀಟ್ ಖರೀದಿಸಿದ್ರು. ನಾನು ಅವರಿಗೆ ಬೆಡ್‍ಶೀಟ್‍ಗಳನ್ನು ಹಸ್ತಾಂತರಿಸಿದ ನಂತರ 2016ರ ಜನವರಿಯಲ್ಲಿ 1 ಕೋಟಿ 44 ಲಕ್ಷ ಹಣ ಪಾವತಿ ಮಾಡಿದ್ರು. ಆ ಬಳಿಕ ಬಾಕಿ ಉಳಿದ 6 ಲಕ್ಷ ಹಣ ಕೇಳಿದಾಗ ನೆಪ ಹೇಳಿಕೊಂಡೇ ಬಂದ್ರು. 2016ರ ಜುಲೈನಲ್ಲಿ ಮತ್ತೆ 18 ಲಕ್ಷದ ಬೆಡ್‍ಶೀಟ್ ಖರೀದಿ ಮಾಡಿ ಈವರೆಗೆ ಹಣ ನೀಡಿಲ್ಲ ಅಂತಾ ರವಿ ಮೋಹನ್‍ಲಾಲ್ ಆರೋಪಿಸಿದ್ದಾರೆ.

10 ದಿನಗಳ ಹಿಂದೆ ರವಿ ಅವರು ಪೊಲೀಸ್ ಆಯುಕ್ತರಾದ ಪರಮ್ ಬೀರ್ ಸಿಂಗ್ ಅವರನ್ನ ಭೇಟಿ ಮಾಡಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಸೇರಿದಂತೆ ಐವರ ಮೇಲೆ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ನಾವು ಈವರೆಗೆ ಯಾರನ್ನೂ ಬಂಧಿಸಿಲ್ಲ. ಆದ್ರೆ ಎಲ್ಲರಿಗೂ ನೋಟಿಸ್ ನೀಡಲಿದ್ದೇವೆ ಎಂದು ಹಿರಿಯ ಪೊಲೀಸ್ ಅಧಕಾರಿ ಸಾವಂತ್ ತಿಳಿಸಿದ್ದಾರೆ.

https://www.youtube.com/watch?v=usYA68LDxXI

 

Click to comment

Leave a Reply

Your email address will not be published. Required fields are marked *

Advertisement
Advertisement