BelgaumCrimeDistrictsKarnatakaLatestMain Post

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಕೆದಕಿದ್ದ ಎಂಇಎಸ್ ಮುಖಂಡನ ವಿರುದ್ಧ FIR ದಾಖಲು

ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಕೆದಕಿದ್ದ ಎಂಇಎಸ್ ಮುಖಂಡ ಶುಭಂ ಶೆಳಕೆ ವಿರುದ್ಧ ಮಾಳಮಾರುತಿ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಕರ್ನಾಟಕ ಗಡಿಭಾಗವನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಎಂದು ವಿವಾದಿತ ನಕ್ಷೆ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಕರವೇ ಕಾರ್ಯಕರ್ತ ವಿನಾಯಕ ಭೋವಿ ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಎಂಇಎಸ್ ಮುಖಂಡ ಶುಭಂ ಶೆಳಕೆ ವಿವಾದಿತ ಪೋಸ್ಟ್ ಹಾಗೂ ವೀಡಿಯೋ ಹಾಕಿ ಗಡಿ ತಗಾದೆ ತೆಗೆದಿದ್ದ. ಕರ್ನಾಟಕದ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿದ ರೀತಿಯ ಗ್ರಾಫಿಕ್ ವೀಡಿಯೋ, ಫೋಟೋ ಹಂಚಿಕೊಂಡಿದ್ದಾನೆ. ಇದನ್ನೂ ಓದಿ: MES ಮುಖಂಡ ಶುಭಂ ಶಳಕೆಯಿಂದ DDPI ಕಚೇರಿಗೆ ನುಗ್ಗಿ ಪುಂಡಾಟಿಕೆ – ವೀಡಿಯೋ ವೈರಲ್

ವೀಡಿಯೋದಲ್ಲಿ ಮಹಾರಾಷ್ಟ್ರವಾದಿಗಳೇ ನಮಗೆ ಮನಃಪೂರ್ವಕವಾಗಿ ಮಹಾರಾಷ್ಟ್ರ ದಿನಕ್ಕೆ ಶುಭಕೋರಲು ಆಗುತ್ತಿಲ್ಲ. ಸಂಯುಕ್ತ ಮಹಾರಾಷ್ಟ್ರಕ್ಕೆ ಬೆಳಗಾವಿ ರಕ್ತ ಹೋರಾಟದ ಮುನ್ನುಡಿ ಬರೆದಿದೆ. ಬೆಳಗಾವಿ ಸೇರಿ ಗಡಿ ಭಾಗದ ಮರಾಠಿಗರು ನ್ಯಾಯಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾನೆ. ಪೋಸ್ಟ್ ಡಿಲೀಟ್ ಮಾಡುವಂತೆ ಠಾಣೆಗೆ ಕರೆಸಿ ಪೊಲೀಸರು ಎಚ್ಚರಿಕೆ ಕೊಟ್ಟಿದ್ದರೂ, ಪೋಸ್ಟ್ ಡಿಲೀಟ್ ಮಾಡದೇ ಆರೋಪಿ ಶುಭಂ ಉದ್ಧಟತನ ಮೆರೆದಿದ್ದನು.

Leave a Reply

Your email address will not be published.

Back to top button