ತಿರುವನಂತಪುರ: ಸ್ಯಾಂಡಲ್ ವುಡ್‍ನ ಯಶಸ್ವಿ ಚಿತ್ರ `ಹೆಬ್ಬುಲಿ’ ಸಿನಿಮಾದ ನಾಯಕಿ ಅಮಲಾ ಪೌಲ್ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಅಮಲಾ ಪೌಲ್ ಜೊತೆ ನಟ ಫಹಾದ ಫಾಸಿಲ್ ವಿರುದ್ಧವೂ ಎಫ್‍ಐಆರ್ ದಾಖಲಾಗಿದೆ.
ಇಬ್ಬರೂ ಕಲಾವಿದರು ಕೇರಳ ನಿವಾಸಿಗಳಾಗಿದ್ದು, ತೆರಿಗೆ ತಪ್ಪಿಸುವ ಸಲುವಾಗಿ ಪುದುಚೇರಿಯಲ್ಲಿ ನಕಲಿ ದಾಖಲೆಗಳನ್ನು ನೀಡುವ ಮೂಲಕ ಕಾರು ಖರೀದಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Advertisement
Advertisement
ಕೇರಳ ರಾಜ್ಯದಲ್ಲಿ 20 ಲಕ್ಷ ರೂ. ಮೇಲಿನ ವಿಲಾಸಿ ಕಾರುಗಳಿಗೆ ಶೇ.20 ರಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ. ಈ ತೆರಿಗೆಯಿಂದ ತಪ್ಪಿಸಿಕೊಳ್ಳಲು ಪುದುಚೇರಿಯಲ್ಲಿ ಕಾರ್ ಖರೀದಿಸಿದ್ದಾರೆ. ನಟ ಫಹಾದ್ ಫಾಸಿಲ್ ಕಾರ್ ಖರೀದಿ ಮಾಡಲು ಅಲೆಪ್ಪಿ ವಿಳಾಸ ನೀಡಿ ಲೋನ್ ಪಡೆದಿದ್ದಾರೆ. ಅಂತೆಯೇ ಅಮಲಾ ಕೂಡ ಪುದುಚೇರಿಯಲ್ಲಿ ಬಾಡಿಗೆ ಕೋಣೆ ವಿಳಾಸ ನೀಡಿ `ಎಸ್ ಕ್ಲಾಸ್ ಬೆಂಜ್ ಕಾರ್` ಖರೀದಿಸಿದ್ದಾರೆ. ತೆರಿಗೆಯಿಂದ ತಪ್ಪಿಸಿಕೊಳ್ಳಲು ಹಲವರು ಇದೇ ವಿಳಾಸ ನೀಡಿ ಕಾರು ಖರೀದಿಸುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ನನ್ನ ವಿರುದ್ಧ ಮಾಡುತ್ತಿರುವ ಸುಳ್ಳು ಆರೋಪಗಳ ವಿರುದ್ಧ ನಾನು ಈಗ ಮಾತನಾಡಬೇಕಾಗಿದೆ. ಈ ಊಹಾಪೋಹ ಸುದ್ದಿಗಳಿಂದ ನನಗೂ ಮತ್ತು ಕುಟುಂಬಸ್ಥರು ಮಾನಸಿಕವಾಗಿ ತುಂಬಾ ನೋವಾಗಿದೆ. ಇದೇ ವರ್ಷ ನಾನು ಕೋಟ್ಯಾಂತರ ರೂ. ತೆರಿಗೆಯನ್ನು ಪಾವತಿಸಿದ್ದೇನೆ. ಆದರೂ ತೆರಿಗೆಗೆ ಸಂಬಂಧಿಸಿದ ಅಧಿಕಾರಿಗಳು ನನ್ನ ಕಡೆಯಿಂದ ಕಾನೂನು ಬಾಹಿರ ಚಟುವಟಿಕೆ ನಡೆದಿದೆ ಎಂದು ಹೇಳುತ್ತಿದ್ದಾರೆ. ನಾನು ಒಬ್ಬ ಭಾರತ ದೇಶದ ಪ್ರಜೆಯಾಗಿದ್ದು, ದೇಶದ ಯಾವುದೇ ಭಾಗದಲ್ಲಿ ಆಸ್ತಿಯನ್ನು ಖರೀದಿಸುವ ಹಕ್ಕು ನನಗಿದೆ ಎಂದು ನಂಬಿದ್ದೇನೆ ಎಂದು ಅಮಲಾ ಪೌಲ್ ಸ್ಪಷ್ಟನೆ ನೀಡಿದ್ದಾರೆ.