ಕನ್ನಡದ ಹೆಸರಾಂತ ನಟಿ ಶ್ರೀಲೀಲಾ (Shrileela) ತಾಯಿ ಸ್ವರ್ಣಲತಾ ಮೇಲೆ ಎಫ್.ಐ.ಆರ್ ದಾಖಲಾಗಿದ್ದು, ಬಂಧನಕ್ಕಾಗಿ ಈಗಾಗಲೇ ಪೊಲೀಸರು ಬಲೆ ಬೀಸಿದ್ದಾರೆ. ಖ್ಯಾತ ರಾಜಕಾರಣಿಯೊಬ್ಬರಿಗೆ ಅಲೆಯನ್ಸ್ (Alliance)ವಿಶ್ವ ವಿದ್ಯಾಲಯ ಮಾರಿಲಸು ಸ್ವರ್ಣಲತಾ (Swarnalatha) ಮುಂದಾಗಿದ್ದರು ಎನ್ನುವ ಕಾರಣಕ್ಕಾಗಿ ಅವರ ಮೇಲೆ ದೂರು ದಾಖಲಾಗಿದೆ. ಇದರ ಹಿಂದೆ ನೂರಾರು ಕೋಟಿ ಡೀಲ್ ಕೂಡ ಇದೆ ಎಂದು ಹೇಳಲಾಗುತ್ತಿದೆ.
Advertisement
ಮಧುಕರ್ ಅಂಗೂರ್ (Madhukar Angur) ಅವರಿಂದ ಯುನಿವರ್ಸಿಟಿ ಮಾರಾಟಕ್ಕೆ ಸ್ವರ್ಣಲತಾ ಡೀಲ್ ಕುದುರಿಸಿದ್ದರು ಎಂದು ಹೇಳಲಾಗಿದ್ದು, ಮಧುಕರ್ ಮತ್ತು ಸ್ವರ್ಣಲತಾ ಗೂಂಡಾಗಳ ಜೊತೆ ವಿವಿಗೆ ನುಗ್ಗಿ ಸಿಬ್ಬಂದಿಗೆ ಮತ್ತು ವಿದ್ಯಾರ್ಥಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ. ಸೆ.10ರಂದು ಬಂದೂಕು ಹಿಡಿದ ಗೂಂಡಾಗಳ ಜೊತೆ ಸ್ವರ್ಣಲತಾ ವಿವಿಗೆ ನುಗ್ಗಿದ್ದರು ಎನ್ನಲಾಗುತ್ತಿದೆ. ಇದನ್ನೂ ಓದಿ: ಮುಂದೆ ಕ್ಲೋಸ್ ಆಗಿರುವ ಜಯಶ್ರೀಯೇ ಸೋನು ಬಗ್ಗೆ ಕೆಟ್ಟ ಭವಿಷ್ಯ ನುಡಿದಳಾ?
Advertisement
Advertisement
ಈ ಕುರಿತು ಆನೇಕಲ್ (Anekal) ಪೊಲೀಸ್ ಠಾಣೆಗೆ ದೂರು ನೀಡಿರುವ ವಿವಿ ರಿಜಿಸ್ಟಾರ್ ಡಾ. ನಿವೇದಿತಾ ಮಿಶ್ರಾ, (Nivedita Mishra) ‘ಸೆ.10 ರಂದು ಸ್ವರ್ಣಲತಾ ಮತ್ತು ಮಧುಕರ್ ಅಂಗೂರು ಜೊತೆಯಾಗಿ ಗೂಂಡಾಗಳ ಜೊತೆ ವಿವಿಗೆ ನುಗ್ಗಿದ್ದಾರೆ. ಗೂಂಡಾಗಳ ಬಳಿ ಬಂದೂಕು ಕೂಡ ಇದ್ದವು. ವಿವಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಹೆದರಿಸುವಂತಹ ಮತ್ತು ಬಂದೂಕಿನಿಂದ ಶೂಟ್ ಮಾಡುವುದಾಗಿ ಹೆದರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ ಮಧುಕರ್ ಬಂಧನವಾಗಿದ್ದು, ಸ್ವರ್ಣಲತಾ ಅವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.