ಬಾಗಲಕೋಟೆ: ಬಿಜೆಪಿ (BJP) ಕಾರ್ಯಕರ್ತೆ ಹಾಗೂ ಖಾಸಗಿ ಶಾಲೆಯ ಶಿಕ್ಷಕಿಯ ಫೋಟೋದಿಂದ ಅಶ್ಲೀಲ ವೀಡಿಯೋ ತಯಾರಿಸಿ ಬ್ಲ್ಯಾಕ್‍ಮೇಲ್ ಮಾಡಿದ ಪ್ರಕರಣ ಜಮಖಂಡಿಯಲ್ಲಿ ನಡೆದಿದೆ.
ಮಹಿಳೆಯ (Woman) ಫೋಟೋ ಒಂದಕ್ಕೆ ಕಣ್ಣಿಗೆ ಕಪ್ಪು ಪಟ್ಟಿ ಹಾಕಿ ಎಡಿಟ್ ಮಾಡಿ ಅಶ್ಲೀಲ ವೀಡಿಯೋ ತಯಾರಿಸಲಾಗಿದೆ. ನಂತರ ಯಾವುದೋ ಅಶ್ಲೀಲ ವೀಡಿಯೋ ಒಂದನ್ನು ಬ್ಲರ್ ಮಾಡಿ ಬಿಜೆಪಿ ಕಾರ್ಯಕರ್ತೆಯ ವೀಡಿಯೋ ಎಂಬಂತೆ ಬಿಂಬಿಸಲಾಗಿದೆ. ಅಲ್ಲದೇ ಬಿಜೆಪಿ ಕಾರ್ಯಕರ್ತೆಯ ರಾಸಲೀಲೆ ಎಂಬ ಬರಹ ಹಾಕಲಾಗಿದೆ. ಇದನ್ನೂ ಓದಿ: ರಶ್ಮಿಕಾ ನಂತರ ಕತ್ರಿನಾಗೆ ಡೀಪ್ ಫೇಕ್ ಕಾಟ
ಈ ವಿಚಾರವಾಗಿ ಬಂದೆನವಾಜ್ ಸರಕಾವಸ್ ಎಂಬಾತ ಮಹಿಳೆಗೆ ಕರೆ ಮಾಡಿ ನಾನು ಖಾಸಗಿ ಸುದ್ದಿ ವಾಹಿನಿಯ ವರದಿಗಾರ. ನನ್ನ ಬಳಿ ನಿಮ್ಮ ರಾಸಲೀಲೆ ವೀಡಿಯೋ ಇದೆ ಎಂದು ಹೇಳಿಕೊಂಡಿದ್ದಾನೆ. ಅಲ್ಲದೇ ನೀವು ನನ್ನನ್ನು ಭೇಟಿಯಾಗಿ ಈ ವಿಚಾರವನ್ನು ಸರಿ ಮಾಡಿಕೊಳ್ಳಿ, ಸ್ವಲ್ಪ ಹಣ ಖರ್ಚಾಗುತ್ತದೆ ಎಂದಿದ್ದಾನೆ. ಹಣ ನೀಡದಿದ್ದರೆ ವೀಡಿಯೋ ವೈರಲ್ ಮಾಡುವ ಬೆದರಿಕೆ ಹಾಕಿದ್ದಾನೆ ಎಂದು ಎಫ್‍ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಜಮಖಂಡಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಿಷ ಸೇವಿಸಿ ಎಎಸ್ಐ ಆತ್ಮಹತ್ಯೆ