ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅಭಿಯನದ ‘ಧುರಂದರ್ 2’ (Dhurandhar 2) ನಾಳೆ (ಮಾ.19) ವಿಶ್ವದಾದ್ಯಂತ ರಿಲೀಸ್‌ಗೆ ಸಜ್ಜಾಗಿದೆ. ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿರುವ ಧುರಂಧರ್ ಚಿತ್ರ ಭಾರತ ಅಷ್ಟೇ ಅಲ್ಲ ವಿದೇಶಗಳಲ್ಲೂ ಮನೆಮಾತಾಗಿದೆ. ಫಿನ್‌ಲ್ಯಾಂಡ್ ಅಧ್ಯಕ್ಷ ಮತ್ತು ಕೆನಡಾ ಪ್ರಧಾನಿ ಇಬ್ಬರೂ ಪಾರ್ಕ್‌ನಲ್ಲಿ ಬೆಳಗ್ಗೆ ಜಾಗಿಂಗ್ ಮಾಡುತ್ತ ಧುರಂಧರ್ ಸಿನಿಮಾ ಬಗ್ಗೆ ಮಾತನಾಡಿ ಗಮನ ಸೆಳೆದಿದ್ದಾರೆ.
ಫಿನ್‌ಲ್ಯಾಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅವರು ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಮತ್ತು ಅವರ ಪತ್ನಿಯೊಂದಿಗೆ ಲಂಡನ್‌ನ ಹೈಡ್ ಪಾರ್ಕ್‌ನಲ್ಲಿ ಜಾಗಿಂಗ್ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾರ್ನಿ ಅವರ ಯುಕೆ ಅಧಿಕೃತ ಭೇಟಿಯ ಸಮಯದಲ್ಲಿ ಇಬ್ಬರು ನಾಯಕರು ಒಟ್ಟಿಗೆ ಜಾಗಿಂಗ್ ಮಾಡಿರುವುದು ಕಂಡುಬಂದಿದೆ. ಇದನ್ನೂ ಓದಿ: ರಿಲೀಸ್‌ಗೂ ಮುನ್ನವೇ 100 ಕೋಟಿ ಬಾಚಿದ ಧುರಂಧರ್-2
ಸ್ಟಬ್ ಮತ್ತು ಕಾರ್ನಿ ಜಾಗಿಂಗ್ ಮಾಡುವಾಗ ಚಿಕ್ಕ ಸಂಭಾಷಣೆ ನಡೆಸಿದ್ದಾರೆ. ಕಾರ್ನಿ, ಫಿನ್‌ಲ್ಯಾಂಡ್ ಅಧ್ಯಕ್ಷರನ್ನು ಭಾರತದಲ್ಲಿ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆಯಲ್ಲಿನ ಹೆಚ್ಚಳದ ಬಗ್ಗೆ ಕೇಳುತ್ತಾರೆ. ‘ಹಿಂದಿ ಚಲನಚಿತ್ರ ಧುರಂಧರ್ ನೋಡಿದೆ ಅಂತ ಹೇಳಿದ ಬೆನ್ನಲ್ಲೇ ಅದು ದೊಡ್ಡದಾಯ್ತು’ ಅಂತ ಸ್ಟಬ್ ಪ್ರತಿಕ್ರಿಯಿಸುತ್ತಾರೆ.
No ice-hockey rinks available, so a nice morning run in Hyde Park with Prime minister @MarkJCarney, Diana and Suzanne. pic.twitter.com/frvOts0V6v
— Alexander Stubb (@alexstubb) March 17, 2026
ಈ ವೀಡಿಯೊವನ್ನು ಸ್ಟಬ್ ಅವರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದು ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಇದು ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆಯಿತು. ಇಬ್ಬರು ವಿಶ್ವ ನಾಯಕರು ಬ್ಲಾಕ್‌ಬಸ್ಟರ್ ಚಿತ್ರದ ಬಗ್ಗೆ ಅನಿರೀಕ್ಷಿತವಾಗಿ ಉಲ್ಲೇಖಿಸಿದ್ದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ಧುರಂಧರ್ ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರ ಎಂಬ ದಾಖಲೆ ಬರೆದಿದೆ. ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಂಪಾಲ್ ಮತ್ತು ಆರ್ ಮಾಧವನ್ ಸೇರಿದಂತೆ ಹಲವು ತಾರಾಬಳಗವಿತ್ತು. ಬೇಹುಗಾರಿಕೆ, ಭೂಗತ ಲೋಕ, ಭೌಗೋಳಿಕ ರಾಜಕೀಯ ವಿಷಯಗಳನ್ನೊಳಗೊಂಡ ಸಿನಿಮಾ ಭಾರತ ಮತ್ತು ವಿದೇಶಗಳೆರಡರಲ್ಲೂ ಪ್ರೇಕ್ಷಕರನ್ನು ಆಕರ್ಷಿಸಿದೆ. ಇದನ್ನೂ ಓದಿ: ದುರಂಧರ್ 2 ಟ್ರೈಲರ್ ರಿಲೀಸ್ – ರಿವೆಂಜ್ ಮೋಡ್‌ನಲ್ಲಿ ರಣವೀರ್ ಸಿಂಗ್
‘ಧುರಂಧರ್: ದಿ ರಿವೆಂಜ್’ ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಮಾರ್ಚ್ 7 ರಂದು ಬಿಡುಗಡೆಯಾದ ಟ್ರೇಲರ್, ಮಾರ್ಚ್ 19 ರಂದು ಥಿಯೇಟ್ರಿಕಲ್ ಬಿಡುಗಡೆಗೂ ಮುನ್ನ ಆನ್‌ಲೈನ್‌ನಲ್ಲಿ ಗಮನಾರ್ಹ ಸಂಚಲನ ಮೂಡಿಸಿತು.

