ಹೆಲ್ಸಿಂಕಿ: ಫಿನ್‌ಲ್ಯಾಂಡ್‌ನ ನಿರ್ಗಮಿತ ಪ್ರಧಾನಿ (Finland PM) ಸನ್ನಾ ಮರಿನ್ (Sanna Marin) ವಿಚ್ಛೇದನ ಘೋಷಣೆ ಮಾಡಿದ್ದು, ಪತಿ ಮಾರ್ಕಸ್ ರೈಕೊನೆನ್ ಅವರೊಂದಿಗೆ ಜೊತೆಯಾಗಿ ವಿಚ್ಛೇದಕ್ಕೆ ಅರ್ಜಿ ಸಲ್ಲಿಸಿದ್ದಾರೆ.
Advertisement
19 ವರ್ಷಗಳ ನಮ್ಮ ಸುದೀರ್ಘ ಜೀವನಕ್ಕೆ ಹಾಗೂ ನಮ್ಮ ಪುಟ್ಟ ಮಗಳಿಗೆ ಕೃತಜ್ಞರಾಗಿರುತ್ತೇವೆ. ಉತ್ತಮ ಸ್ನೇಹಿತರಾಗಿ ಉಳಿಯುತ್ತೇವೆ. ತಮ್ಮ 5 ವರ್ಷದ ಮಗಳನ್ನು ಇಬ್ಬರೂ ಸಮಾನವಾಗಿ ನೋಡಿಕೊಳ್ಳುವುದಾಗಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಇಮ್ರಾನ್ ಖಾನ್ ಬೆನ್ನಲ್ಲೇ ಪಾಕ್ ವಿದೇಶಾಂಗ ಮಾಜಿ ಸಚಿವ ಅರೆಸ್ಟ್ – ಅಜ್ಞಾತ ಸ್ಥಳಕ್ಕೆ ಶಿಫ್ಟ್
Advertisement
2020ರಲ್ಲಿ ಕೋವಿಡ್ (Covid) ಬಿಕ್ಕಟ್ಟಿನ ವೇಳೆ ರೈಕೊನೆನ್ ಹಾಗೂ ಮರಿನ್ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಬಳಿಕ ಇಬ್ಬರೂ ಪರಸ್ಪರ ಒಪ್ಪಿ ಮದುವೆಯಾಗಿದ್ದರು.
Advertisement
Advertisement
ಮರಿನ್ ಮತ್ತು ಅವರ ಸೋಶಿಯಲ್ ಡೆಮಾಕ್ರಟಿಕ್ ಪಕ್ಷವು ಕಳೆದ ತಿಂಗಳು ಫಿನ್‌ಲ್ಯಾಂಡ್‌ನ ಸಂಸತ್ತಿನ ಚುನಾವಣೆಯಲ್ಲಿ ರಾಷ್ಟ್ರೀಯ ಒಕ್ಕೂಟದ ಪಕ್ಷ ಮತ್ತು ರಾಷ್ಟ್ರೀಯವಾದಿ ಫಿನ್ಸ್ ಪಕ್ಷದ ಎದುರು ಪರಾಭವಗೊಂಡಿತ್ತು. ಇದನ್ನೂ ಓದಿ: ಇಮ್ರಾನ್ ಖಾನ್ ಅರೆಸ್ಟ್- ಪ್ರತಿಭಟನೆಯಲ್ಲಿ 8 ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ
2019ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ಮರಿನ್ ವಿಶ್ವದ ಕಿರಿಯ ಪ್ರಧಾನಿ ಹಾಗೂ ಹೊಸ ನಾಯಕರಿಗೆ ರೋಲ್ ಮಾಡೆಲ್ ಎನಿಸಿಕೊಂಡಿದ್ದರು.