ಬೆಂಗಳೂರು: ವಾಹನ ಸವಾರರಿಗೆ ಬಿಗ್ ಶಾಕ್ ಕಾದಿದ್ದು, ಇನ್ಮುಂದೆ ಹಾಫ್ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿದರೆ ಪೊಲೀಸರು ದಂಡ ವಿಧಿಸಲಿದ್ದಾರೆ.
ಸೆಪ್ಟೆಂಬರ್ 1ರಂದು ಗೌರಿ-ಗಣೇಶನನ್ನು ಬರಮಾಡಿಕೊಳ್ಳಲು ಎಲ್ಲಡೆ ಭಾರೀ ಸಿದ್ಧತೆ ನಡೆಸಲಾಗುತ್ತಿದೆ. ಆದರೆ ಈ ಹಬ್ಬದ ಸಂಭ್ರಮದ ನಡುವೆ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಶಾಕಿಂಗ್ ನ್ಯೂಸ್ ನೀಡಿದ್ದು, ಮೋಟಾರು ವಾಹನ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸುತ್ತಿದೆ. ಈ ಕಾಯ್ದೆಯಂತೆ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ವಾಹನ ಸವಾರರು ಮೂರು ಪಟ್ಟು ದಂಡ ಕಟ್ಟಬೇಕಾಗುತ್ತದೆ.
Advertisement
Advertisement
ನಗರದ ವಾಹನಗಳ ಸಂಖ್ಯೆ ಹೆಚ್ಚಾದಂತೆ ಅಪಘಾತಗಳ ಸಂಖ್ಯೆ ಸಹ ಹೆಚ್ಚುತ್ತಿದೆ. ಇದೇ ವರ್ಷ ಜನವರಿ 1 ರಿಂದ ಜೂನ್ ಅಂತ್ಯಕ್ಕೆ ನಗರದಲ್ಲಿ ಉಂಟಾದ ಬೈಕ್ ಅಪಘಾತಗಳಲ್ಲಿ 105 ಮಂದಿ ಬೈಕ್ ಸವಾರರು ಮೃತಪಟ್ಟಿದ್ದಾರೆ. 667 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೀಗಾಗಿ ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಹೆಲ್ಮೆಟ್ ಕಡ್ಡಾಯಗೊಳಿಸಿದ್ದರು. ಈಗ ಟೋಪಿಯಂತಹ ಅಥವಾ ಅರ್ಧ ಹೆಲ್ಮೆಟ್ ಧರಿಸಿದರೆ ಫೈನ್ ಹಾಕಲು ಸಂಚಾರಿ ಪೊಲೀಸ್ ಆಯುಕ್ತ ಡಾ. ಬಿ.ಆರ್ ರವಿಕಾಂತೇಗೌಡ ಸೂಚಿಸಿದ್ದಾರೆ ಎನ್ನಲಾಗಿದೆ.
Advertisement
4 ವರ್ಷದ ನಂತರದ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಈ ಟೋಪಿಯಂತಹ ಹೆಲ್ಮೆಟ್ ಅನ್ನು ಹೆಚ್ಚಾಗಿ ಪೊಲೀಸರೇ ಹಾಕಿಕೊಳ್ಳುತ್ತಾರೆ. ಹೀಗೆ ಹಾಕಿಕೊಳ್ಳುವವರಿಗೆ ದಂಡ ವಿಧಿಸಲು ಕಾನೂನಿನಲ್ಲಿಯೂ ಅವಕಾಶವಿದೆ. ಈ ನಿಯಮ ಸೆಪ್ಟೆಂಬರ್ 1 ಅಥವಾ ಗಣೇಶ ಹಬ್ಬದಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಈ ನಿಯಮಕ್ಕೆ ವಾಹನ ಸವಾರರಿಂದ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
Advertisement
ಈ ಹೊಸ ಕಾನೂನಿನ ಪ್ರಕಾರ ನಿಯಮ ಮೀರಿದರೆ ಕಟ್ಟಬೇಕಾದ ದಂಡಗಳ ವಿವರ ಇಂತಿದೆ.
ಹೆಲ್ಮೆಟ್ ಹಾಕದಿದ್ರೆ: ಈಗಿನ ದಂಡ 100 ರೂ. ಇದ್ದು, ಪರಿಷ್ಕೃತ ದಂಡ 1000 ರೂ.+3 ತಿಂಗಳು ಅಮಾನತು
ಕುಡಿದು ವಾಹನ ಚಾಲನೆ: 2000 ರೂ. – 10,000 ರೂ.
ಸೀಟ್ ಬೆಲ್ಟ್ ಹಾಕ್ಕೊಳ್ಳದಿದ್ರೆ : 100 ರೂ. – 1000 ರೂ.
ಲೈಸೆನ್ಸ್ ಇಲ್ಲದಿದ್ರೆ : 500 ರೂ. – 5000 ರೂ.
ಅತಿವೇಗ: 400 ರೂ. – 1000 ರೂ.
ರೇಸಿಂಗ್ : 500 ರೂ. – 5000 ರೂ.
ಇನ್ಶೂರೆನ್ಸ್ ಇಲ್ಲದಿದ್ರೆ : 1000 ರೂ. – 2000 ರೂ.
ಡೇಂಜರಸ್ ಡ್ರೈವಿಂಗ್: 1000 ರೂ. – 5000 ರೂ.
ಓವರ್ ಲೋಡಿಂಗ್: 100 ರೂ. – 2000 ರೂ.
ಡಿಎಲ್ ರದ್ದಾದ್ರೂ ಚಾಲನೆ : 500 ರೂ. – 10,000 ರೂ.
ಅಂಬ್ಯುಲೆನ್ಸ್ ಗೆ ದಾರಿ ಬಿಡದಿದ್ರೆ : 10,000 ರೂ.
ಪರ್ಮಿಟ್ ಇಲ್ಲದ ವಾಹನ ಚಾಲನೆ: 5000 ರೂ. – 10,000 ರೂ.