ಬೆಂಗಳೂರು: ಸಿಲಿಕಾನ್ ಸಿಟಿ ನಿವಾಸಿಗಳೇ ನಿಮ್ಮ ಮನೆಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಇನ್ನೂ ಕೂಡ ಆಳವಡಿಸಿಕೊಂಡಿಲ್ಲವೆ. ಹಾಗಿದ್ರೆ ಜಲಮಂಡಳಿ ನಿಮಗೂ ಫೈನ್ ಹಾಕಲು ರೆಡಿಯಾಗಿದೆ. ಜಲಮಂಡಳಿ ಇಲ್ಲಿವರೆಗೆ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳದ ಜನರಿಂದ ದಂಡದ ರೂಪದಲ್ಲಿ ಬರೋಬ್ಬರಿ 7.69 ಕೋಟಿ ಹಣ ಸಂಗ್ರಹಮಾಡಿದೆ.
ಮೆಟ್ರೋ ನಗರಿಯ ಪ್ರತಿ ಮನೆಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಆಳವಡಿಸಿಕೊಳ್ಳುವುದು ಕಡ್ಡಾಯ. ಇದೇನು ಹೊಸ ನಿಯಮವಲ್ಲ. 2009ರಲ್ಲಿಯೇ ಜಲಮಂಡಳಿ ಈ ನಿಯಮವನ್ನು ಖಡ್ಡಾಯಗೊಳಿಸಿತ್ತು. ಆದರೆ ಉದ್ಯಾನನಗರಿ ಜನರು ಮಾತ್ರ ಇದಕ್ಕೆ ಮನಸ್ಸು ಮಾಡ್ತಿಲ್ಲ. ಇದ್ರಿಂದ ಎಚ್ಚೆತ್ತುಕೊಂಡ ಜಲಮಂಡಳಿ, ನಿಯಮ ಮೀರಿದವರ ವಿರುದ್ಧ ಫೈನ್ ಹಾಕಲು ಆರಂಭಿಸಿತು.
Advertisement
ನಿಯಮದ ಪ್ರಕಾರ ನೀರಿನ ಬಿಲ್‍ನ ಶೇಕಡಾ 50ರಷ್ಟು ದಂಡ ವಿಧಿಸಲಾಗ್ತಿದೆ. ಉದಾಹರಣೆಗೆ 200 ರೂಪಾಯಿ ನೀರಿನ ಬಿಲ್ ಬಂದ್ರೆ 100 ರೂಪಾಯಿ ದಂಡ ವಿಧಿಸಲಾಗುತ್ತೆ. ಪದೇ ಪದೇ ಎಚ್ಚರಿಸಿದ್ರೂ ನಿಯಮ ಮೀರಿದ್ರೆ ಜಲಮಂಡಳಿ ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ. ಮಳೆ ನೀರು ಕೊಯ್ಲು ಪದ್ಧತಿ ಬಗ್ಗೆ ಜಲಮಂಡಳಿ ಈಗಾಗಲೇ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಜೊತೆಗೆ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸುವ ಬಗ್ಗೆ ಪ್ಲಂಬರ್ಸ್ ಗಳಿಗೆ ಉಚಿತವಾಗಿ ಜಲಮಂಡಳಿ ತರಬೇತಿಯನ್ನು ನೀಡುತ್ತಿದೆ.
Advertisement