ಬೆಂಗಳೂರು: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವ ಮೊದಲು ವಾಹನ ಸವಾರರೇ ಎಚ್ಚರವಾಗಿರಿ. ಯಾಕೆಂದರೆ ಇನ್ನು ಮುಂದೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ಸಿಕ್ಕಾಪಟ್ಟೆ ದಂಡ ಕಟ್ಟಬೇಕಾಗುತ್ತದೆ.
ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡುವುದು, ನೋ ಪಾರ್ಕಿಂಗ್‍ನಲ್ಲಿ ವಾಹನಗಳನ್ನು ಪಾರ್ಕ್ ಮಾಡುವುದು ಮತ್ತು ಅತಿಯಾದ ವೇಗಕ್ಕೆ ವಿಧಿಸುವ ದಂಡದ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಇಂದಿನಿಂದಲೇ ಜಾರಿಗೆ ಬರುವಂತೆ ಹೊಸ ದಂಡವನ್ನು ಫಿಕ್ಸ್ ಮಾಡಲಾಗಿದೆ.
ಯಾವ್ಯಾವ ರೂಲ್ಸ್ ಬ್ರೇಕ್‍ಗೆ ಎಷ್ಟೆಷ್ಟು ಫೈನ್:
ಮೊಬೈಲ್ ಬಳಕೆ ಮಾಡಿದರೆ ಮೊದಲು ಸಾವಿರ ರೂ. ದಂಡ ಕಟ್ಟಬೇಕು, 2ನೇ ಬಾರಿಗೆ 2 ಸಾವಿರ ರೂ. ದಂಡ ಕಟ್ಟಬೇಕಾಗುತ್ತದೆ. ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದಿದ್ದರೆ, ಮೊದಲು 2 ಸಾವಿರ ರೂ. ದಂಡ, 2ನೇ ಬಾರಿಗೆ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ.
ಅಲ್ಲದೆ ಇನ್ಶೂರೆನ್ಸ್ ಇಲ್ಲದಿದ್ದರೆ, ಸಾವಿರ ರೂಪಾಯಿ ದಂಡ ಕಟ್ಟಬೇಕು. ಇನ್ಶೂರೆನ್ಸ್ ಇಲ್ಲದವರಿಗೆ ಮೊದಲು 500 ರೂ. ದಂಡ ಇತ್ತು. ನೋ ಪಾರ್ಕಿಂಗ್‍ನಲ್ಲಿ ಪಾರ್ಕಿಂಗ್ ಮಾಡಿದವರಿಗೆ ಮೊದಲು ಸಾವಿರ ರೂ. ದಂಡ, 2ನೇ ಬಾರಿಗೆ ಹಾಗೇ ಮಾಡಿದರೆ 2 ಸಾವಿರ ಕಟ್ಟಬೇಕಾಗುತ್ತದೆ.
1998ರ ಮೋಟಾರ್ ವೆಹಿಕಲ್ ಆ್ಯಕ್ಟ್ ನಿಗದಿಪಡಿಸಿದ ಮಿತಿಯ ಒಳಗೆ ದಂಡ ಫಿಕ್ಸ್ ಮಾಡಲಾಗಿದೆ.