ಬೆಂಗಳೂರು: ಕಳೆದು ಹೋದ ಮೂರೇ ಘಂಟೆಯಲ್ಲಿ ಮೊಬೈಲ್ ಅನ್ನು ಪತ್ತೆ ಮಾಡಿ ಅದನ್ನು ಯುವತಿಯರು ತಲುಪಿಸುವ ಮೂಲಕ ನಗರದ ಪೊಲೀಸರು ಮತ್ತೊಮ್ಮೆ ಶಹಬ್ಬಾಸ್‍ಗಿರಿ ಪಡೆದುಕೊಂಡಿದ್ದಾರೆ.
ಯುವತಿಯರಾದ ಆಕಾಂಕ್ಷ ಹಾಗೂ ಶೃತಿ ಮನೆಗೆ ಹೋಗಲು ಸೆಪ್ಟೆಂಬರ್ 29 ರಂದು ಉಬರ್ ಕ್ಯಾಬ್ ಬುಕ್ ಮಾಡಿದ್ದಾರೆ. ಮನೆಗೆ ತೆರಳಿದಾಗ ಮೊಬೈಲ್ ಕ್ಯಾಬಿನಲ್ಲೇ ಬಿಟ್ಟಿರುವುದು ಬೆಳಕಿಗೆ ಬಂದಿದೆ. ಕ್ಯಾಬ್ ಅವರಿಗೆ ಮಾಹಿತಿ ನೀಡಿದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಡ್ರೈವರ್ ನನ್ನು ಕೇಳಿದರೆ ನಂತರ ಬುಕ್ ಮಾಡಿದ ಪ್ರಯಾಣಿಕರು ಮೊಬೈಲ್ ತೆಗೆದುಕೊಂಡು ಹೋಗಿರಬಹುದು ಎಂದು ಹೇಳಿದ್ದಾನೆ.
Advertisement
Advertisement
ಕ್ಯಾಬ್ ಸಂಸ್ಥೆಯಿಂದ ಸರಿಯಾದ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅಕ್ಟೋಬರ್ 2 ರಂದು ಯುವತಿಯರಿಬ್ಬರು ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಉಬರ್ ಕ್ಯಾಬ್ ಡ್ರೈವರ್‌ನನ್ನು ಠಾಣೆಗೆ ಕರೆಸಿದ್ದಾರೆ. ಖುದ್ದು ಯುವತಿಯರ ಮುಂದೆಯೇ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮೊಬೈಲ್ ತನ್ನ ಬಳಿಯೇ ಇದೆ ಎಂದು ಉಬರ್ ಡ್ರೈವರ್ ತಪ್ಪನ್ನು ಒಪ್ಪಿಕೊಂಡು ಮೊಬೈಲನ್ನು ಹಿಂದಿರುಗಿಸಿದ್ದಾನೆ.
Advertisement
ನಡೆದ ಈ ಎಲ್ಲ ಘಟನೆಯನ್ನು ಅಶೋಕ್ ಎಂಬವರು ಫೇಸ್‍ಬುಕ್ ನಲ್ಲಿ, ಪೊಲೀಸರಲ್ಲಿ ಎಲ್ಲ ಪೊಲೀಸರು ಕೆಟ್ಟವರಲ್ಲ. ಎಲ್ಲ ಪೊಲೀಸರು ಭ್ರಷ್ಟರಲ್ಲ. ಕೇವಲ ಮೂರೇ ಗಂಟೆಯಲ್ಲಿ ಮೊಬೈಲ್ ಹುಡುಕಿ ಕೊಟ್ಟಿದ್ದಕ್ಕೆ ಬೆಂಗಳೂರಿನ ಸಿಟಿ ಪೋಲಿಸರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
Advertisement
ಈ ಘಟನೆಯಿಂದಾಗಿ ನಮಗೆ ಆತ್ಮವಿಶ್ವಾಸ ಮತ್ತು ಪೊಲೀಸರ ಮೇಲೆ ಒಳ್ಳೆಯ ಭಾವನೆ ಮೂಡಿದೆ. ಸಹಾಯಕ್ಕಾಗಿ ನಾವು ಯಾವುದೇ ಸಮಯದಲ್ಲಿ ಅವರ ಬಳಿ ಹೋಗಬಹುದು ಎಂದು ಎಂದು ಅಶೋಕ್ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv