ಕಾರವಾರ: ಮೈಕ್ರೋ ಫೈನಾನ್ಸ್, ಮೀಟರ್ ಬಡ್ಡಿ ಕಾಟಕ್ಕೆ ರಾಜ್ಯದಲ್ಲಿ ಹಲವರು ಮನೆ ಬಿಟ್ಟರೇ ಕೆಲವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಣ್ಣಮುಂದಿರುವಾಗಲೇ ಸಾಲ ಹೆಚ್ಚು ನೀಡಲಿಲ್ಲ ಎನ್ನುವ ಕಾರಣಕ್ಕೆ ಫೈನಾನ್ಸಿಯರ್‌ನನ್ನೇ ಕಿಡ್ನ್ಯಾಪ್ ಮಾಡಿದ ವಿಚಿತ್ರ ಘಟನೆ ಮುಂಡಗೋಡಿನಲ್ಲಿ ನಡೆದಿದೆ.
ಹೌದು, ಜ.9 ರ ರಾತ್ರಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಜಮೀರ್ ದರ್ಗಾವಾಲೆ ಎಂಬಾತನು ತನ್ನ ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಹಿಂಭಾಗದಿಂದ ಬಂದ ಕಾರೊಂದು ಡಿಕ್ಕಿ ಹೊಡೆದು ಸಿನಿಮೀಯ ರೀತಿಯಲ್ಲಿ ಆತನನ್ನು ಕಿಡ್ನ್ಯಾಪ್ ಮಾಡಿದ್ದಾರೆ.
ಈತನ ಕುಟುಂಬಕ್ಕೆ ಕರೆ ಮಾಡಿದ ಅಪಹರಣಕಾರರು 32 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಕುಟುಂಬದವರು 18 ಲಕ್ಷ ಹಣ ನೀಡುತ್ತಾರೆ. ಈ ಹಣ ಪಡೆದು ಜಮೀರ್‌ನನ್ನು ಹಾವೇರಿ ಬಳಿ ಬಿಟ್ಟು ಎಸ್ಕೇಪ್ ಆಗುತ್ತಾರೆ. ಈ ಸಂದರ್ಭದಲ್ಲಿ ಮುಂಡಗೋಡು ಪೊಲೀಸರು ಕಳ್ಳರನ್ನು ಬಂಧಿಸಿದ್ದಾರೆ.
ಆದರೆ, ಪ್ರಮುಖ ಆರೋಪಿ ಸಾದಿಕ್ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ. ಕೊನೆಗೆ ಆತನೂ ಸಿಕ್ಕಿಬಿದ್ದಿದ್ದಾನೆ. ಒಟ್ಟು ಹದಿಮೂರು ಜನ ಸಿಕ್ಕಾಗ ಮೀಟರ್ ಬಡ್ಡಿದಂದೆಯ ಕರಾಳ ಮುಖ ಅನಾವರಣಗೊಳ್ಳುತ್ತದೆ. ಜಮೀರ್ ಮೀಟರ್ ಬಡ್ಡಿ ವ್ಯವಹಾರ ಮಾಡುತ್ತಿದ್ದಾರೆ. ಅಪಹರಣ ಮಾಡಿದ ಪ್ರಮುಖ ಆರೋಪಿ ಖ್ವಾಜಾ, ಜಮೀರ್ ಬಳಿ ಒಂದು ಲಕ್ಷ ಹಣ ಸಾಲವಾಗಿ ಪಡೆದಿದ್ದ. ಒಂದು ಲಕ್ಷಕ್ಕೆ 30 ಸಾವಿರ ಪ್ರತಿ ತಿಂಗಳು ಬಡ್ಡಿ ಕಟ್ಟಬೇಕಿತ್ತು.
ಈತ ಬಡ್ಡಿ ಕಟ್ಟಲು ಆಗದ ಕಾರಣ ಆತನಿಗೆ ಹಣ ಬಡ್ಡಿ ಸಮೇತ ನೀಡುವಂತೆ ಒತ್ತಡ ಹೇರಿದ್ದ. ಆದರೆ, ಆತನಿಗೆ ಇನ್ನೂ ಹೆಚ್ಚಿನ ಹಣ ಬೇಕಾಗಿದ್ದು, ಈಗ ಈತನ ಹಣ ಮೀಟರ್ ಬಡ್ಡಿ ಸಮೇತ ನೀಡಲು ಆಗದೇ ಇದ್ದಾಗ ಹುಬ್ಬಳ್ಳಿಯ ತನ್ನ ಸ್ನೇಹಿತರೊಂದಿಗೆ ಸೇರಿ ಆತನನ್ನೇ ಕಿಡ್ನ್ಯಾಪ್ ಮಾಡಿ ಹಣ ದಕ್ಕಿಸಿಕೊಳ್ಳಲು ಅಪಹರಣ ಮಾಡುತ್ತಾರೆ. ಕೊನೆಗೆ 18 ಲಕ್ಷ ಪಡೆದು ಪರಾರಿಯಾಗುವಾಗ ಒಟ್ಟು 13 ಜನ ಆರೋಪಿಗಳು ಮುಂಡಗೋಡು ಪೊಲೀಸರ ಅಥಿತಿಯಾಗುತ್ತಾರೆ.
ಕೊನೆಗೆ ತಾವು ಮೀಟರ್ ಬಡ್ಡಿ ಹಣ ಕಟ್ಟಲಾಗದೇ ಹೀಗೆ ಕಿಡ್ನಾಪ್ ಮಾಡಿದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಮೀಟರ್ ಬಡ್ಡಿ ವ್ಯವಹಾರ ಮಾಡುವವರ ವಿರುದ್ಧ ತನಿಖೆ ಪ್ರಾರಂಭಿಸಿದ್ದು ಜಮೀರ್ ಜೊತೆ ಮೀಟರ್ ಬಡ್ಡಿ ವ್ಯವಹಾರ ಮಾಡುತಿದ್ದ ನವಲೆ ಎಂಬಾತನ ಮನೆಗೆ ಪೊಲೀಸರು ದಾಳಿ ಮಾಡಿ 250 ವಿವಿಧ ಖಾತೆಯ ಜನರ ಕಾಲಿ ಚಕ್ ನನ್ನು ವಶಕ್ಕೆ ಪಡೆಯಲಾಗಿದೆ.