ISIS ಉಗ್ರನೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಯುವಕನಿಗೆ ಆರ್ಥಿಕ ಸಂಕಷ್ಟ

Public TV
2 Min Read
YGR ISI

ಯಾದಗಿರಿ: ಉಗ್ರನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಯಾದಗಿರಿ (Yadgir) ಜಿಲ್ಲೆಯ ಶಹಾಪುರದ ವ್ಯಕ್ತಿಯೊಬ್ಬನನ್ನ ಜಾರ್ಖಂಡ್‌ನ ಎನ್‌ಐಎ (Jharkhand NIA Team) ತಂಡ ವಿಚಾರಣೆ ನಡೆಸಿತ್ತು. ರಾಂಚಿಯ ಇನ್ಸ್ಪೆಕ್ಟರ್ ಸಚ್ಚಿದಾನಂದ ಶರ್ಮಾ ನೇತೃತ್ವದ ನಾಲ್ವರು ಅಧಿಕಾರಿಗಳ ತಂಡ ಶಹಾಪುರಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿತ್ತು. ಅಧಿಕಾರಿಗಳು ವಿಚಾರಣೆ ನಡೆಸಿ ತೆರಳಿದ ಬಳಿಕ ಆತ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದು ತಿಳಿದುಬಂದಿದೆ.

ಉಗ್ರನೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 20 ರಂದು ರಾಂಚಿಯ NIA ಕಚೇರಿಗೆ ವಿಚಾರಣೆಗೆ ಬರುವಂತೆ ಅಧಿಕಾರಿಗಳು ಯುವಕನಿಗೆ ನೋಟಿಸ್ ಕಳುಹಿಸಿದ್ದರು. ಆದ್ರೆ ಹಣಕಾಸಿನ ಸಮಸ್ಯೆಯಿಂದ ಯುವಕ ವಿಚಾರಣೆಗೆ ಹಾಜರಾಗಿರಲಿಲ್ಲ. ಇದನ್ನೂ ಓದಿ: 2 ತಿಂಗಳ ಹಿಂದೆಯೇ ಚೈತ್ರಾ ಕುಂದಾಪುರ ವಿಚಾರ ನನ್ನ ಗಮನಕ್ಕೆ ಬಂದಿತ್ತು: ಶರಣ್ ಪಂಪ್‍ವೆಲ್

NIA 2

ನಮ್ಮ ಕುಟುಂಬ ಆರ್ಥಿಕವಾಗಿ ತುಂಬಾ ಕಷ್ಟದಲ್ಲಿದೆ, ರಾಂಚಿಗೆ ಪ್ರಯಾಣ ಮಾಡಲು ನಮ್ಮ ಬಳಿ ಹಣ ಇಲ್ಲ. ಕುಟುಂಬದ ಸದಸ್ಯರು ಹಾಗೂ ಆತ್ಮೀಯರಿಗೆ ಹಣ ನೀಡುವಂತೆ ಮನವಿ ಮಾಡಿದರೂ ಯಾರೂ ಸಹಾಯ ಮಾಡುತ್ತಿಲ್ಲ ಎಂದು ಯುವಕನ ತಂದೆ ತಿಳಿಸಿದ್ದಾರೆ.

ನಮ್ಮ ಸಮಸ್ಯೆ ಕುರಿತು ಅಧಿಕಾರಿಗಳಿಗೆ ಇ-ಮೇಲ್ ಮಾಡಲಾಗಿತ್ತು. ಬುಧವಾರ ಬೆಳಿಗ್ಗೆ ಸಹ ಅಧಿಕಾರಿಗಳಿಗೆ ಕರೆ ಮಾಡಿದ್ದೆವು. ಆದರೆ ಅವರು ಕರೆ ಸ್ವೀಕರಿಸಿಲ್ಲ. ನಮ್ಮ ಗ್ಯಾರೇಜ್ ಬಳಿಗೆ ಸ್ಥಳೀಯ ಪೊಲೀಸರು ಬೆಳಿಗ್ಗೆ ಬಂದು ಮಗ ಇರುವ ಬಗ್ಗೆ ಖಚಿತಪಡಿಸಿಕೊಂಡು ಹೋಗಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಕಾವೇರಿ ಹೋರಾಟಕ್ಕೆ ಯಾವಾಗಲೂ ನಾನು ಸಿದ್ಧ : ನಟ ನಿಖಿಲ್ ಕುಮಾರ್

ರಾಂಚಿಯಲ್ಲಿ ಬಂಧಿತ ಐಸಿಸ್ ಉಗ್ರ ಫೈಯಾಜ್ ಜೊತೆಗೆ ಸಂಪರ್ಕ ಹೊಂದಿದ ಶಂಕೆಯ ಹಿನ್ನೆಲೆಯಲ್ಲಿ ನಗರದ ಹಳೆಪೇಟೆಯಲ್ಲಿರುವ ಯುವಕನ ಮನೆ ಮೇಲೆ ಇತ್ತೀಚೆಗೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಸೆ.20ರಂದು ರಾಂಚಿಯ ಎನ್‌ಐಎ ಕಚೇರಿಗೆ ಬರುವಂತೆ ಎನ್‌ಐಎ ಶಾಖೆಯ ಇನ್‌ಸ್ಪೆಕ್ಟರ್ ಸಚ್ಚಿದಾನಂದ ನೋಟಿಸ್ ನೀಡಿ ವಾಪಸ್ ತೆರಳಿದ್ದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article