ಕೊಪ್ಪಳ: ಸಾಲ (Loan) ವಸೂಲಿಗೆ ತೆರಳಿದ್ದ ಫೈನಾನ್ಸ್ (Finance) ಸಿಬ್ಬಂದಿ ಮೇಲೆ ಮಹಿಳೆಯೊಬ್ಬಳು ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಹಲ್ಲೆ ನಡೆಸಿದ ಘಟನೆ ಹಳೆಬಂಡಿಹರ್ಲಾಪುರದಲ್ಲಿ ನಡೆದಿದೆ.
ಮೈಕ್ರೋಫೈನಾನ್ಸ್ ಕಂಪನಿ ಒಂದರ ಮಹಿಳಾ ಗುಂಪಿನ ಸದಸ್ಯರಾಗಿರುವ ನಾಗಮ್ಮ ಎಂಬುವವರು ಸಾಲದ ಬೇಡಿಕೆ ಇಟ್ಟಿದ್ದರು. ಈ ವೇಳೆ ಸಾಲ ಪಡೆಯಲು ಸಿಬ್ಬಂದಿ ಯಮನೂರಪ್ಪ ಎಂಬಾತ ಡೇಟಿಂಗ್‍ಗೆ ಸಹಕರಿಸುವಂತೆ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ. ಬಳಿಕ ಸಾಲ ಮಂಜೂರಾಗಿದ್ದು, ಕರೆ ಮಾಡಿ ಅಶ್ಲೀಲ ಪದ ಬಳಸಿ ಮಾತಾಡಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. ಇದೇ ಕಾರಣಕ್ಕೆ ಮಹಿಳೆ ಆತನಿಗೆ ಚಪ್ಪಲಿಯಿಂದ ಹೊಡೆದಿದ್ದಾಳೆ. ಇದನ್ನೂ ಓದಿ: ಮಾಜಿ ಸಿಬಿಐ ಅಧಿಕಾರಿ ಹೆಸರಲ್ಲಿ ಹಣದ ಬೇಡಿಕೆ – ಖಾಸಗಿ ವೀಡಿಯೋ ವೈರಲ್ ಬೆದರಿಕೆ
ಆದರೆ ಈ ಬಗ್ಗೆ ಕಾಲ್ ರೆಕಾರ್ಡ್ ಒದಗಿಸುರುವ ಮೈಕ್ರೋಫೈನಾನ್ಸ್ ಸಿಬ್ಬಂದಿ ಮಹಿಳೆಯ ಆರೋಪವನ್ನು ನಿರಾಕರಿಸಿದ್ದಾನೆ. ಬಳಿಕ ಮಹಿಳೆ ಹಾಗೂ ಸಿಬ್ಬಂದಿ ನಡುವೆ ಮುನಿರಾಬಾದ್ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಈ ವೇಳೆ ಅಶ್ಲೀಲ ಪದ ಬಳಕೆ ಮಾಡಿದ್ದಕ್ಕೆ ಹೊಡೆದಿರುವುದಾಗಿ ಮಹಿಳೆ ಆರೋಪಿಸಿದ್ದಾಳೆ. ಇದನ್ನೂ ಓದಿ: 13 ವರ್ಷ ಭಾರತಾಂಬೆಯ ಸೇವೆ ಮಾಡಿದ ಕೊಡಗಿನ ಯೋಧ ಅನಾರೋಗ್ಯದಿಂದ ನಿಧನ
Web Stories