ನವದೆಹಲಿ: ಇಂದು ದೇಶದ ಜನತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುವ ಬಜೆಟ್ಗಾಗಿ ಕಾಯುತ್ತಿದ್ದಾರೆ. ಹೀಗಿರುವಾಗ ಬಜೆಟ್ ಪ್ರಿಂಟ್ ಮಾಡುವ ಅಧಿಕಾರಿ ನಿಧನರಾದ ತನ್ನ ತಂದೆಯ ಅಂತಿಮ ವಿಧಿಗಳಿಂದ ತಪ್ಪಿಸಿಕೊಂಡಿದ್ದಾರೆ.
ಹಣಕಾಸು ಸಚಿವಾಲಯದ ಅಧಿಕಾರಿಗಳು ಬಜೆಟ್ಗೆ ಸಂಬಂಧಿಸಿದ ದಾಖಲೆಗಳನ್ನು ಜ. 20ರಿಂದ ಪ್ರಿಂಟ್ ಮಾಡಲು ಶುರು ಮಾಡಿದ್ದರು. ಬಜೆಟ್ ದಾಖಲೆಗಳನ್ನು ಮುದ್ರಿಸುವುದು ಕುಲ್ದೀಪ್ ಕುಮಾರ್ ಅವರ ಜವಾಬ್ದಾರಿ. ಆದರೆ ಜ. 26ರಂದು ಅಧಿಕಾರಿ ಕುಲ್ದೀಪ್ ಕುಮಾರ್ ಶರ್ಮಾ ಅವರು ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ತಮ್ಮ ತಂದೆ ನಿಧನರಾಗಿದ್ದರೂ ಸಹ ಕುಲ್ದೀಪ್ ರಜೆ ತೆಗೆದುಕೊಳ್ಳದೇ ದಾಖಲೆಗಳನ್ನು ಮುದ್ರಿಸಿದ್ದಾರೆ. ಇದನ್ನೂ ಓದಿ: ನಿರ್ಮಲಾ ಬಜೆಟ್ ನಿರೀಕ್ಷೆ ಏನು? ಚಿನ್ನಕ್ಕೂ ಕೇಳ್ತಾರಾ ಲೆಕ್ಕ? ಸವಾಲುಗಳೇನು?
Advertisement
Informing with regret that Shri Kuldeep Kumar Sharma, Dy Manager (Press), lost his father on 26 Jan,2020. Being on budget duty, he was on job in the lock-in. In spite of his immense loss, Sharma decided not to leave press area even for a minute. @nsitharamanoffc @Anurag_Office
— Ministry of Finance (@FinMinIndia) January 30, 2020
Advertisement
ಕುಲ್ದೀಪ್ ಅವರ ಕೆಲಸ ನಿಷ್ಠೆ ನೋಡಿದ ಹಣಕಾಸು ಸಚಿವಾಲಯ ಟ್ವೀಟ್ ಮಾಡುವ ಮೂಲಕ ಹೊಗಳಿದೆ. ಟ್ವಿಟ್ಟರಿನಲ್ಲಿ, “ಜ. 26ರಂದು ಡೆಪ್ಯೂಟಿ ಮ್ಯಾನೇಜರ್ ಆದ ಕುಲ್ದೀಪ್ ಕುಮಾರ್ ಶರ್ಮಾ ಅವರು ತಮ್ಮ ತಂದೆಯನ್ನು ಕಳೆದುಕೊಂಡರು. ಬಜೆಟ್ ಇದ್ದ ಕಾರಣ ಅವರು ಕೆಲಸದಲ್ಲಿ ನಿರತರಾಗಿದ್ದರು. ಕುಲ್ದೀಪ್ ಅವರು ತಮ್ಮ ತಂದೆಯನ್ನು ಕಳೆದುಕೊಂಡಿದ್ದರೂ ಸಹ ಅವರು ಪ್ರೆಸ್ ಏರಿಯಾದಿಂದ ಒಂದು ನಿಮಿಷ ಕೂಡ ಹೊರ ಹೋಗಲಿಲ್ಲ” ಎಂದು ಟ್ವೀಟ್ ಮಾಡಿದೆ.
Advertisement
Sh. Sharma is the key hand to complete budget document printing task within a very tight schedule, owing to his 31 yrs of experience in Budget Process. Displaying exemplary commitment, Sh. Sharma symbolised extraordinary sincerity towards his call of duty, ignoring personal loss.
— Ministry of Finance (@FinMinIndia) January 30, 2020
Advertisement
ಅಷ್ಟೇ ಅಲ್ಲದೆ ಕುಲ್ದೀಪ್ ಅವರಿಗೆ 31 ವರ್ಷ ಅನುಭವವಿದ್ದು, ಬಜೆಟ್ ಮುದ್ರಣ ಕಾರ್ಯವನ್ನು ಅತ್ಯಂತ ಟೈಟ್ ಶೆಡ್ಯೂಲ್ನಲ್ಲಿ ಪೂರ್ಣಗೊಳಿಸಲು ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಕುಲ್ದೀಪ್ ಅವರ ಶೃದ್ಧೆ ಹಾಗೂ ಕೆಲಸದಲ್ಲಿರುವ ನಿಷ್ಠೆಯನ್ನು ನೋಡಿ ಹಣಕಾಸು ಸಚಿವಾಲಯ ಮೆಚ್ಚುಗೆ ವ್ಯಕ್ತಪಡಿಸಿದೆ. ಇದೇ ವೇಳೆ ನೆಟ್ಟಿಗರು ಹಣಕಾಸು ಸಚಿವಾಲಯ ಟ್ವೀಟ್ಗೆ ರೀ-ಟ್ವೀಟ್ ಮಾಡುವ ಮೂಲಕ ಕುಲ್ದೀಪ್ ಅವರ ತಂದೆಯ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ.