ನವದೆಹಲಿ: ಕೇಂದ್ರ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಇಂದು ಬೆಳಗ್ಗೆಯೇ ಹಣಕಾಸು ಇಲಾಖೆ ಕಚೇರಿಗೆ ಭೇಟಿ ನೀಡಿದರು. ನಿರ್ಮಲಾ ಸೀತಾರಾಮನ್ ಸತತ 7ನೇ ಬಾರಿಗೆ ಕೇಂದ್ರ ಬಜೆಟ್ (Union Budget 2024) ಮಂಡಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅವಧಿಯ ಮೊದಲ ಬಜೆಟ್ ಇದಾಗಿದೆ.
ಹಣಕಾಸು ಸಚಿವಾಲಯಕ್ಕೆ ಆಗಮಿಸಿದ ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು ಇಲಾಖೆ ಅಧಿಕಾರಿಗಳು ಬಜೆಟ್ ಪ್ರತಿಯನ್ನು ನೀಡಿದರು. ಬಳಿಕ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಇಲಾಖೆ ರಾಜ್ಯ ಸಚಿವ ಪಂಕಜ್ ಚೌಧರಿ ಹಾಗೂ ಇಲಾಖೆ ಅಧಿಕಾರಿಗಳ ಜೊತೆ ಬಜೆಟ್ ಪ್ರತಿ ಜೊತೆ ಫೋಟೋ ಪೋಸ್ ನೀಡಿದರು. ಇದನ್ನೂ ಓದಿ: ಮೋದಿ 3.0 ಸರ್ಕಾರದ ಬಜೆಟ್ ಮಂಡನೆ ಇಂದು; ತೆರಿಗೆ ಪದ್ಧತಿಯಲ್ಲಿ ಆಗುತ್ತಾ ಬದಲಾವಣೆ?
2021ರಿಂದ ನಿರ್ಮಲಾ ಸೀತಾರಾಮನ್ ಅವರು ಕಾಗದ ರಹಿತ ಬಜೆಟ್‌ಗೆ ಒತ್ತು ನೀಡುತ್ತಿದ್ದು, ಮೇಡ್ ಇನ್ ಇಂಡಿಯಾ ಟ್ಯಾಬ್ ಮೂಲಕ ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ಹಣಕಾಸು ಇಲಾಖೆಯಿಂದ ಸಂಸತ್ ಭವನಕ್ಕೆ ತೆರಳಲಿರುವ ನಿರ್ಮಲಾ ಸೀತಾರಾಮನ್ 11 ಗಂಟೆಗೆ ಬಜೆಟ್ ಭಾಷಣ ಓದಲಿದ್ದಾರೆ. ಇದನ್ನೂ ಓದಿ: ಶೇ.6.5 -7 ರಷ್ಟು ಆರ್ಥಿಕ ಬೆಳವಣಿಗೆ – ಬಡವರಿಗೆ 9 ವರ್ಷದಲ್ಲಿ 2.63 ಕೋಟಿ ಮನೆ ನಿರ್ಮಾಣ