ಬೆಂಗಳೂರು: ಆಂಬಿಡೆಂಟ್ ಕೇಸ್ ಮಾದರಿಯಲ್ಲಿ ಮತ್ತೊಂದು ವಂಚನೆ ಬಯಲಾಗಿದ್ದು, ಅಜ್ಮೀರಾ ಗ್ರೂಪ್ ಕಂಪನಿಯ ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಈ ಕೇಸ್ ಗೆ ಸಂಬಂಧಿಸಿದಂತೆ ಅಜ್ಮೀರಾ ಎಂಡಿ ತಬ್ರೇಜ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ತಬ್ರೇಜ್ ಸುಮಾರು 400 ಕೋಟಿ ರೂ. ವಂಚನೆ ಮಾಡಿದ್ದು, ಆ ದುಡ್ಡಲ್ಲಿ ಬಂಗಾರ ಮಾಡಿಸಿ ಪತ್ನಿಯ ಮೈಮೇಲೆ ಹಾಕಿದ್ದಾನೆ ಎಂದು ತಿಳಿದು ಬಂದಿದೆ.
Advertisement
ಸದ್ಯಕ್ಕೆ ಆರೋಪಿ ತಬ್ರೇಜ್ ನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ತಾನೇ ವಂಚನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಎಲ್ಲವನ್ನು ವಾಪಸ್ ಕೊಡುವುದಾಗಿ ಸಿಸಿಬಿ ಮುಂದೆ ಆರೋಪಿ ತಬ್ರೇಜ್ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.
Advertisement
Advertisement
ಈ ಹಿಂದೆ ಆಂಬಿಡೆಂಬ್ ಡೀಲ್ ಪ್ರಕರಣ ನಡೆದಾಗ ಇದೇ ರೀತಿಯಲ್ಲಿ ಅನೇಕ ಕಂಪನಿಗಳು ವಂಚನೆ ಮಾಡುತ್ತಿರುವ ಬಗ್ಗೆ ಸಿಸಿಬಿಗೆ ಮಾಹಿತಿ ಲಭ್ಯವಾಗಿತ್ತು. ಅದರಲ್ಲಿ ಪ್ರಮುಖವಾಗಿ ಅಜ್ಮೀರಾ ಗ್ರೂಪ್ ಕಂಪನಿ ನೂರಾರು ಕೋಟಿ ಹಗರಣ ಮಾಡಿರುವುದಾಗಿ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆಂಬಿಡೆಂಡ್ ಕೇಸ್ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಬಳಿಕ ಸಿಸಿಬಿ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
Advertisement
ಸಿಸಿಬಿ ಪೊಲೀಸರು ಅಜ್ಮೀರಾ ಕಂಪನಿಯ ಬಗ್ಗೆ ತನಿಖೆ ಮಾಡಿದಾಗ ಬಹುಕೋಟಿ ಹಗರಣದಲ್ಲಿ ಕಂಪನಿ ಎಂಡಿ ತಬ್ರೇಜ್ ಸಿಕ್ಕಿ ಬಿದ್ದಿದ್ದಾನೆ. ಈಗ ಸಿಸಿಬಿ ಪೊಲೀಸರು ತಬ್ರೇಜ್ ಬಂಧಿಸಿ ಹಣ ವಶಪಡಿಸಿಕೊಳ್ಳಲು ತಯಾರಿ ನಡೆಸುತ್ತಿದ್ದು, ಆತನ ಆಸ್ತಿ ಪಾಸ್ತಿಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv