ಕೆಜಿಎಫ್ 2 (KGF2 ) ಸಿನಿಮಾದ ನಂತರ ಯಶ್ (Yash) ಅವರ ಮುಂದಿನ ಸಿನಿಮಾ ಬಗ್ಗೆ ಹಲವಾರು ಬಾರಿ ಚರ್ಚೆ ಮಾಡಲಾಗಿದೆ. ಈವರೆಗೂ ಅವರು ತಮ್ಮ ಮುಂದಿನ ಚಿತ್ರದ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಮುಂದಿನ ಚಿತ್ರದ ಕೆಲಸ ನಡೆದಿದೆ, ಸಮಯ ಬಂದಾಗ ತಿಳಿಸುವೆ ಎನ್ನುತ್ತಲೇ ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತಲೇ ಬಂದಿದ್ದಾರೆ. ಈ ನಡುವೆ ಅಭಿಮಾನಿಗಳಿಗೆ ಮಸ್ತ್ ಮಸೇಜ್ ನೀಡಿದ್ದಾರೆ.
Advertisement
ಸದ್ಯ ಯಶ್, ತಂಪು ಪಾನೀಯವೊಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಅದರಲ್ಲಿ ಅವರು ಖಡಕ್ ಡೈಲಾಗ್ ಹೊಡೆದಿದ್ದಾರೆ. ‘ಜನ ಪ್ರತಿ ಹಂತದಲ್ಲೂ ಗೇಲಿ ಮಾಡ್ತಾರೆ. ಒಬ್ಬೊಬ್ಬರು ಒಂದೊಂದು ಹೇಳಿ ಮಾತಿನ ದಾಳಿ ಮಾಡ್ತಾರೆ. ಇದು ಮಾಡು, ಅದು ಬೇಡ ಅಂತಾರೆ. ಹೇಳಿದ್ದು ಕೇಳ್ತೀವಿ ಅಂತ ಗೊತ್ತಾದ್ರೆ ಮಾತ್ ಮಾತಲ್ಲೇ ಜಡ್ಜ್ ಮಾಡ್ತಾರೆ, ಕಂಟ್ರೋಲ್ ಮಾಡ್ತಾರೆ, ಮಾತಲ್ಲೇ ಮುಳುಗಿಸಿ ಬಿಡ್ತಾರೆ. ಎಲ್ಲಾ ಗೇಲಿಗೂ ಹೊಡಿ ಗೋಲಿ. ನೀನು ನೀನಾಗಿರು’ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ದೊಡ್ಡ ಸಂದೇಶವನ್ನೇ ನೀಡಿದ್ದಾರೆ. ಇದನ್ನೂ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಹಾಲಕ್ಷ್ಮಿಯಂತೆ ಕಂಗೊಳಿಸಿದ ನಟಿ ಅಮೂಲ್ಯ
Advertisement
Advertisement
ಈ ಜಾಹೀರಾತಿನಲ್ಲಿ ಅವರ ಲುಕ್, ಕಾನ್ಸೆಪ್ಟ್, ಗೆಟಪ್ ಹಾಗೂ ಕೊನೆಯಲ್ಲಿ ಹುಡುಗಿಗೊಂದು ಕಳುಹಿಸುವ ಸಂದೇಶ ಎಲ್ಲವೂ ಸೂಪರ್. ಅವರು ಹೊಡೆದ ಡೈಲಾಗ್ ಅನ್ನು ಕೇಳುವುದೇ ಹಿತ. ಥೇಟ್ ಸಿನಿಮಾದ ಟೀಸರ್ ನಂತೆಯೇ ಈ ಜಾಹೀರಾತು ಮೂಡಿ ಬಂದಿದೆ. ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ದಾಖಲೆ ರೀತಿಯಲ್ಲಿ ಆ ಜಾಹೀರಾತನ್ನು ನೋಡಿದ್ದಾರೆ ಅಭಿಮಾನಿಗಳು.
Advertisement
ಕೆಜಿಎಫ್ 2 ಸಿನಿಮಾದ ನಂತರ ತೆರೆಯ ಮೇಲೆ ಅಥವಾ ಬೇರೆ ವೇದಿಕೆಗಳ ಮೇಲೆ ಯಶ್ ಅವರನ್ನು ನೋಡಲು ಅಭಿಮಾನಿಗಳು ಕಾಯುತ್ತಲೇ ಇದ್ದರು. ಜಾಹೀರಾತು ಚಿತ್ರದ ಮೂಲಕ ಕೊನೆಗೂ ಯಶ್ ದರ್ಶನ ನೀಡಿದ್ದಾರೆ. ಮತ್ತೆ ಅಭಿಮಾನಿಗಳನ್ನು ರಂಜಿಸಿದ್ದಾರೆ. ಡೈಲಾಗ್ ಹೊಡೆದು ಚೆಪ್ಪಾಳೆ ಸಂಪಾದಿಸಿದ್ದಾರೆ.