ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಮದುವೆ (Marriage) ವಿಚಾರ ಹಲವು ಬಾರಿ ಚರ್ಚೆಗೆ ಬಂದಿದೆ. ಅದರಲ್ಲೂ ಕನ್ನಡತಿ ರಶ್ಮಿಕಾ ಮಂದಣ್ಣ ಜೊತೆ ಲವ್ವಿಡವ್ವಿ ವಿಚಾರ ಬಂದಾಗೆಲ್ಲ ಮದುವೆ ಬಗ್ಗೆ ಪ್ರಶ್ನೆಗಳನ್ನು ಮಾಡಲಾಗಿದೆ. ಇದೇ ಮೊದಲ ಬಾರಿಗೆ ವಿಜಯ್ ದೇವರಕೊಂಡ ತಮ್ಮ ಮದುವೆಯ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಮದುವೆಗೆ ಹೇಗಿರಬೇಕು ಎಂದು ಅವರು ಹೇಳಿಕೊಂಡಿದ್ದಾರೆ.
ಸಮಂತಾ ಮತ್ತು ವಿಜಯ್ ನಟನೆಯ ಖುಷಿ ಸಿನಿಮಾದ ಹಾಡೊಂದು ಬಿಡುಗಡೆಯಾಗಿದೆ. ‘ಆರಾಧ್ಯ..’ (Aradhya) ಎಂದು ಶುರುವಾಗುವ ಹಾಡಿನಲ್ಲಿ ಸಮಂತಾ ಜೊತೆ ವಿಜಯ್ ಖುಷಿ ಖುಷಿಯಾದ ಕ್ಷಣಗಳನ್ನು ಕಳೆದಿದ್ದಾರೆ. ತುಂಟಾಟ, ರೊಮ್ಯಾನ್ಸ್, ಪ್ರೀತಿ, ಪ್ರೇಮ ಹೀಗೆ ಎಲ್ಲವೂ ಹದವಾಗಿ ಬೆರೆತಿದೆ. ಈ ಹಾಡನ್ನು ತೋರಿಸುವ ಮೂಲಕ ವಿಜಯ್, ನನ್ನ ಮದುವೆ ಮತ್ತು ಜೀವನ ಹೀಗೆಯೇ ಇರಬೇಕು ಎಂದು ಹೇಳಿಕೊಂಡಿದ್ದಾರೆ.
ಮದುವೆ ಬಗ್ಗೆ ನನಗೂ ನನ್ನದೇ ಆದ ಕನಸುಗಳು ಇವೆ. ಈ ಕನಸುಗಳು ಥೇಟ್ ಖುಷಿ ಸಿನಿಮಾದ ಹಾಡಿನಂತಿದೆ. ಒಂದು ವೇಳೆ ಮದುವೆ ಅಂತಾದರೆ, ಈ ಹಾಡಿನಂತಿಯೇ ನನ್ನ ಬದುಕು ಕೂಡ ಇರಲಿದೆ ಎಂದು ಮದುವೆ ವಿಚಾರ ಮಾತನಾಡಿದ್ದಾರೆ. ತಮ್ಮದೇ ಸಿನಿಮಾದ ಪಾತ್ರವೊಂದನ್ನು ಕನಸಾಗಿ ಅವರು ಸ್ವೀಕರಿಸಿದ್ದಾರೆ.
ಈ ಹಿಂದೆ ವಿಜಯ್ ದೇವರಕೊಂಡ ಹುಟ್ಟುಹಬ್ಬದ (Birthday) ದಿನದಂದು ಸ್ಪೆಷಲ್ ಆಗಿ ಖುಷಿ ಸಿನಿಮಾದ ಮೊದಲ ಹಾಡು (Song) ರಿಲೀಸ್ ಮಾಡಲಾಗಿತ್ತು. ‘ನನ್ನ ರೋಜಾ ನೀನೇ’ (Nanna Roja Neene) ಎಂಬ ಮೆಲೋಡಿ ಟ್ರ್ಯಾಕ್ ಬಿಡುಗಡೆಯಾಗಿದ್ದು, ಕೇಳುಗರನ್ನು ಇಂಪ್ರೆಸ್ ಮಾಡಿತ್ತು. ಈ ಹಾಡು ಕೂಡ ಅಷ್ಟೇ ಬ್ಯೂಟಿಫುಲ್ ಆಗಿ ಮೂಡಿ ಬಂದಿತ್ತು.
ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ಈ ಹಾಡಿಗೆ ಹೇಶಾಮ್ ಅಬ್ದುಲ್ ವಹಾಬ್ ಧ್ವನಿಯಾಗುವುದರ ಜೊತೆಗೆ ಟ್ಯೂನ್ ಹಾಕಿದ್ದಾರೆ. ಲವರ್ ಬಾಯ್ ಆಗಿ ವಿಜಯ್ ದೇವರಕೊಂಡ (Vijay Devarakonda) ಕಾಣಿಸಿಕೊಂಡಿದ್ದು, ಸಮಂತಾ (Samantha) ನಾಯಕಿಯಾಗಿ ಅಭಿನಯಿಸಿದ್ದಾರೆ. ಕಾಶ್ಮೀರ ಭಾಗದಲ್ಲಿ ಇಡೀ ಸಾಂಗ್ ಅನ್ನು ಚಿತ್ರೀಕರಿಸಲಾಗಿದೆ. ಇದನ್ನೂ ಓದಿ:ಕಣ್ಣು ಕುಕ್ಕುವಂತೆ ಪಡ್ಡೆಹುಡುಗರ ನಿದ್ದೆಗೆಡಿಸಿದ ಸೇಸಮ್ಮ ನಯಾ ಲುಕ್
ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗಿರುವ ಖುಷಿ ಸಿನಿಮಾ ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿಯೂ ತೆರೆಗೆ ಬರಲಿದೆ. ಮೈತ್ರಿ ಮೂವಿ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಮಜಿಲಿ ಹಿಟ್ ನಿರ್ದೇಶಕ ಶಿವ ನಿರ್ವಣ (Shiva Nirvana) ನಿರ್ದೇಶಿಸುತ್ತಿದ್ದಾರೆ. ನವೀನ್ ಯೆರ್ನೇನಿ ಮತ್ತು ಯಲಮಂಚಿಲಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.
ರೊಮ್ಯಾಂಟಿಕ್ ಲವ್ ಎಂಟರ್‌ಟೈನರ್ ಕಥಾಹಂದರ ಹೊಂದಿರುವ ಖುಷಿ ಸಿನಿಮಾ ಸೆಪ್ಟೆಂಬರ್ 1 ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಜಯರಾಮ್, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ವಿನ್ನಿಲ್ಲಾ ಕಿಶೋರ್, ರೋಹಿನಿ ಸೇರಿದಂತೆ ಹಲವರು ಚಿತ್ರದ ಭಾಗವಾಗಿದ್ದಾರೆ. ಹೇಷಂ ವಾಹೆಬ್ ಸಂಗೀತ, ಜಿ ಮುರಳಿ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನ ಚಿತ್ರಕ್ಕಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]