Connect with us

Bollywood

ಕರೀನಾ ಕಪೂರ್ ಬಿಚ್ಚಿಟ್ಟರು ತೈಮೂರ್ ಅಲಿಖಾನ್ ಪಟೌಡಿ ಹೆಸರಿನ ರಹಸ್ಯ!

Published

on

ಮುಂಬೈ: ಬಾಲಿವುಡ್‍ನ ಬೇಬೊ ಕರೀನಾ ಕಪೂರ್ ತಮ್ಮ ಮುದ್ದಾದ ಮಗನಿಗೆ ತೈಮೂರ್ ಎಂದು ಹೆಸರನ್ನು ಇರಿಸಿದ್ದು ಯಾಕೆ ಎನ್ನುವ ವಿಚಾರವನ್ನು ಮಾಧ್ಯಮಗಳ ಮುಂದೆ ಬಹಿರಂಗ ಮಾಡಿದ್ದಾರೆ.

`ತೈಮೂರ್’ ಹೆಸರಿನ ರಹಸ್ಯ ಬಿಚ್ಚಿಟ್ಟ ಬೇಬೊ ಕರೀನಾ, “ಈ ಹೆಸರಿನ ಅರ್ಥ ಕಬ್ಬಿಣ, ನನಗೆ ಇದರ ಅರ್ಥ ಬಹಳ ಹಿಡಿಸಿತು ಹಾಗೆಯೆ ಇದು ತುಂಬಾ ಮುದ್ದಾಗಿದೆ. ದೇಶದಲ್ಲಿ ಈ ಹೆಸರಿನ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದರೂ ನಾನು ನನ್ನ ಮಗನ ಹೆಸರನ್ನು ಬದಲಾಯಿಸುವುದಿಲ್ಲ” ಎಂದು ಹೇಳಿದ್ದಾರೆ.

ತೈಮೂರ್ ಎಂಬುದು ಟರ್ಕೋ-ಮಂಗೋಲ್ ಸಾಮ್ರಾಜ್ಯದ ರಾಜನ ಹೆಸರಾಗಿದೆ. ಈತ ಭಾರತದ ಮೇಲೆ ದಾಳಿ ಮಾಡಿ ಕೊಳ್ಳೆ ಹೊಡೆದಿದ್ದಾನೆ ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ. ನಮ್ಮ ದೇಶದ ಮೇಲೆ ದಾಳಿ ಮಾಡಿ ಕೊಳ್ಳೆ ಹೊಡೆದವನ ಹೆಸರನ್ನು ಮಗನಿಗೆ ಇಟ್ಟಿದ್ದಕ್ಕೆ ಸೈಫ್-ಕರೀನಾ ದಂಪತಿ ಟೀಕೆಗೆ ಗುರಿಯಾಗಿದ್ದರು.

ತೈಮೂರ್ ಎಂಬುದು ಪ್ರಾಚೀನ ಪರ್ಷಿಯನ್ ಹೆಸರಾಗಿದ್ದು, ಇದರ ಅರ್ಥ ಕಬ್ಬಿಣ. ಭಾರತಕ್ಕೆ ದಾಳಿ ಮಾಡಿದ ರಾಜನ ಹೆಸರು ಟೈಮೂರ್, ನನ್ನ ಮಗನ ಹೆಸರು ತೈಮೂರ್. ಇವೆರಡಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕರೀನಾ ಕಪೂರ್ ಖಾನ್ ಹೇಳಿದ್ದಾರೆ.

ಈ ವಿವಾದಕ್ಕೆ ಪ್ರತಿಕ್ರಿಯಿಸಿದ ನಟ ಸೈಫ್ ಅಲಿಖಾನ್, “ನಾನು ಮತ್ತು ನನ್ನ ಪತ್ನಿ ಈ ಹೆಸರಿನ ಶಬ್ಧ ಮತ್ತು ಅರ್ಥವನ್ನ ಬಹಳ ಇಷ್ಟಪಟ್ಟು ಆಯ್ಕೆಮಾಡಿದ್ದೇವೆ. ನಾವು ಸೂಚಿಸಿದ್ದ ಹಲವು ಹೆಸರುಗಳಲ್ಲಿ ಕರೀನಾ ಈ ಹೆಸರನ್ನ ತುಂಬಾ ಇಷ್ಟಪಟ್ಟರು ಯಾಕೆಂದರೆ ಇದು ಸುಂದರ ಮತ್ತು ಈ ಹೆಸರಿನಲ್ಲಿ ಶಕ್ತಿ ಇದೆ. ತೈಮೂರ್ ಎಂಬ ಹೆಸರು ನನ್ನ ಜೊತೆ ಬೆಳೆದ ಸಂಬಂಧಿಯ ಹೆಸರಾಗಿದೆ. ನನ್ನ ಮಗಳಾದ ಸಾರಾಗೂ ಕೂಡ ಸಂಬಂಧಿಯ ಹೆಸರನ್ನ ಬಹಳ ಇಷ್ಟಪಟ್ಟು ಆಯ್ಕೆಮಾಡಿದ್ದೇನೆ” ಎಂದು ಹೇಳಿದರು.

ದೇಶದಲ್ಲಿ ಮಾಡಿದ ವಿರೋಧದ ನಡುವೆಯೂ ನಮ್ಮ ನಿರ್ಧಾರವನ್ನ ಬದಲಿಸಲಿಲ್ಲ. ಜನರು ಹಲವಾರು ಬಗೆ ಮಾತನಾಡುತ್ತಾರೆ. ಆದರೆ ವಾಸ್ತವವಾಗಿ ನಮಗೆ ಸರಿ ಕಾಣುವುದನ್ನ ಮಾತ್ರ ತೆಗೆದುಕೊಳ್ಳಬೇಕು. ಜನರು ಏನೂ ಬೇಕಾದರೂ ಮಾತನಾಡಲಿ ನನ್ನ ಮಗನ ಹೆಸರಿಡುವುದು ನನ್ನ ಸ್ವಾತಂತ್ರ್ಯ ಎಂದರು.

ಕರೀನಾ ಪ್ರಕಾರ ಮಗ ತೈಮೂರ್ ಅಲಿಖಾನ್ ಸ್ವಭಾವವೂ ಪತಿ ಸೈಫ್ ಅಲಿಖಾನ್‍ರಂತೆ ಇದ್ದು, ಅವನು ತನ್ನ ತಂದೆಯ ಹಾಗೆ ವಿಚಿತ್ರ ಸ್ವಭಾವದವನು ಎಂದು ಹೇಳಿದರು.

ಅಕ್ಟೋಬರ್ 16, 2012 ರಲ್ಲಿ ಸೈಫ್ ಅಲಿಖಾನ್ ರನ್ನು ಮದುವೆಯಾದ ಕರೀನಾ 2016ರ ಡಿಸೆಂಬರ್ 20 ರಂದು ತೈಮೂರ್ ಗೆ ಜನ್ಮ ನೀಡಿದ್ದರು. ಕರೀನಾ ಕಪೂರ್ ಅವರನ್ನು ಮದುವೆಯಾಗುವುದಕ್ಕೂ ಮೊದಲು ಸೈಫ್ ಅಮೃತಾ ಸಿಂಗ್ ಅವರನ್ನು ವರಿಸಿದ್ದರು. ಈ ದಂಪತಿಗೆ ಸಾರಾ ಅಲಿಖಾನ್ ಮತ್ತು ಇಬ್ರಾಹಿಂ ಅಲಿಖಾನ್ ಹೆಸರಿನ ಮಕ್ಕಳಿದ್ದಾರೆ.

Click to comment

Leave a Reply

Your email address will not be published. Required fields are marked *