ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾದರೆ ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ ಎಂದಿರುವ ರೋಷನ್ ಬೇಗ್ ಹೇಳಿಕೆ ಸತ್ಯ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಹೇಳಿದ್ದಾರೆ.
ಸಿದ್ದರಾಮಯ್ಯ ಫ್ಲಾಪ್ ಸ್ಟಾರ್ ಅನ್ನೋದನ್ನು ನಾನು ಬಾಯಿ ಬಿಟ್ಟು ಹೇಳುವುದಿಲ್ಲ. ಕೊನೆಗಾಲದಲ್ಲಿ ಅವರಿಗೆ ಸತ್ಯ ಅರ್ಥವಾಗಿದೆ. ರೋಷನ್ ಬೇಗ್‍ಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
Advertisement
ಕೊನೆಗಾದರೂ ವಸ್ತು ಸ್ಥಿತಿ ಅರ್ಥವಾಯ್ತಲ್ಲ. ಹೇಳಿಕೆಯಲ್ಲಿ ಏನು ತಪ್ಪಿಲ್ಲ ಅವರು ಹೇಳಿದ್ದು ಎಲ್ಲವೂ ಸತ್ಯ ಎಂದು ಹೇಳಿ ರೋಷನ್ ಬೇಗ್ ಪರ ವಿಶ್ವನಾಥ್ ಬ್ಯಾಟಿಂಗ್ ಮಾಡಿದ್ದಾರೆ.
Advertisement
Advertisement
ರೋಷನ್ ಬೇಗ್ ಹೇಳಿಕೆ ಈಗ ಕಾಂಗ್ರೆಸ್ಸಿನಲ್ಲಿ ಬಿರುಗಾಳಿ ಎಬ್ಬಿಸಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭೆಯಲ್ಲಿ ನಮಗೆ ಹಿನ್ನಡೆಯಾದರೆ ರಾಜ್ಯದ ಕಾಂಗ್ರೆಸ್ ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯ ಹಾಗೂ ನಮ್ಮ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾರಣ. ಎಕ್ಸಿಟ್ ಪೋಲ್ ನೋಡಿದರೆ ನನಗೆ ಬೇಸರವಾಗುತ್ತದೆ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ.
Advertisement
ಸಿಎಲ್‍ಪಿ ನಾಯಕರು ನಡೆದುಕೊಂಡ ರೀತಿ, ಅಹಂಕಾರ, ದುರಾಹಂಕಾರ ಸರಿಯಲ್ಲ. ಕುಮಾರಸ್ವಾಮಿ, ದೇವೇಗೌಡರ ಮನೆ ಬಾಗಿಲಿಗೆ ಹೋಗಿ ನಾವು ನಿಮ್ಮ ಜೊತೆಗೆ ಸರ್ಕಾರ ಮಾಡೋಣ ಎಂದು ಹೇಳಿ, ನಾನೇ ಸಿಎಂ ಆಗುತ್ತೇನೆ ಎಂದು ಹೇಳಿದ್ದು ಎಲ್ಲರಿಗೂ ಇಷ್ಟ ಆಗಿಲ್ಲ. ನಿಮ್ಮ ನಡತೆ ನೋಡಿ ಜನರಿಗೆ ಗೊಂದಲ ಹಾಗೂ ಬೇಜಾರಾಗಿದೆ ಎಂದು ದೂರಿದ್ದರು.
ಕಾಂಗ್ರೆಸ್ ಅಲ್ಪಸಂಖ್ಯಾತರ ಪರ ಕೆಲಸ ಮಾಡುತ್ತಿಲ್ಲ. ಕ್ರಿಶ್ಚಿಯನ್ನರಿಗೆ ಟಿಕೆಟ್ ಕೊಟ್ಟಿಲ್ಲ ಅದಕ್ಕೆ ಬೇರೆ ಕಾರಣ ಇದೆ. ನಮ್ಮ ಅಧ್ಯಕ್ಷರ ವಿರುದ್ಧ ನನಗೆ ಬೇಜಾರಿದೆ. ಇವತ್ತಿನ ರಾಜ್ಯ ಕಾಂಗ್ರೆಸ್ಸಿಗೆ ಈ ದುಸ್ಥಿತಿ ಬರಲು ದಿನೇಶ್ ಗುಂಡೂರಾವ್ ಮತ್ತು ಸಿದ್ದರಾಮಯ್ಯ ಅವರೇ ಕಾರಣ ಎಂದು ನೇರವಾಗಿ ವಾಗ್ದಾಳಿ ನಡೆಸಿದರು.
ಬಿಜೆಪಿ ಸೇರುವ ಬಗ್ಗೆ ಬಗ್ಗೆ ಯೋಚನೆ ಮಾಡಿಲ್ಲ. ಅದರ ಬಗ್ಗೆ ಮುಂದೆ ಯೋಚನೆ ಮಾಡುತ್ತೇನೆ. ಇದು ಕಾಂಗ್ರೆಸ್ ಪಾರ್ಟಿ ಇದು ಸಿದ್ದರಾಮಯ್ಯ ಪಾರ್ಟಿ. ಸಿದ್ದರಾಮಯ್ಯ ಒಡೆದು ಆಳೋ ನೀತಿ ಮಾಡುತ್ತಿದ್ದಾರೆ. ಬಹಳ ದೊಡ್ಡ ಸಮುದಾಯ ಒಡೆದಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ಗೆ ಈ ಸ್ಥಿತಿ ಬಂದಿದೆ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ತುಳಿಯುತ್ತಿದೆ. ಇದು ಸಿದ್ದರಾಮಯ್ಯ ಕುತಂತ್ರವಾಗಿದೆ. ಕಾಂಗ್ರೆಸ್ ಮುಸ್ಲಿಮರನ್ನು ಮತಬ್ಯಾಂಕಾಗಿ ಮಾತ್ರ ಬಳಕೆ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಎಲೆಕ್ಷನ್ ನಲ್ಲಿ ಮುಸ್ಲಿಮರನ್ನು ಕ್ಯಾರೆ ಅನ್ನಲಿಲ್ಲ. ದಿನೇಶ್ ಗುಂಡೂರಾವ್‍ಗೆ ಮರ್ಯಾದೆ ಇದ್ದರೆ ರಾಜೀನಾಮೆ ಕೊಡಲಿ ಎಂದು ಸವಾಲೆಸೆದಿದ್ದಾರೆ.