Connect with us

Cinema

ಕೊನೆಗೂ ರಕ್ಷಿತ್ ಶೆಟ್ಟಿ ಬಗ್ಗೆ ಮೌನ ಮುರಿದ ರಶ್ಮಿಕಾ ಮಂದಣ್ಣ

Published

on

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಇತ್ತೀಚೆಗೆ ಕ್ಯೂಟ್ ಕಪಲ್ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ಮುರಿದು ಬಿದಿದ್ದ ಸುದ್ದಿಗೆ ರಕ್ಷಿತ್ ಫೇಸ್‍ಬುಕ್‍ನಲ್ಲಿ ಸ್ಪಷ್ಟನೆ ನೀಡಿದ್ದರು. ಆದ್ರೆ ರಶ್ಮಿಕಾ ಮಾತ್ರ ಬ್ರೇಕಪ್ ವಿಚಾರದಲ್ಲಿ ಮೌನವಹಿಸಿದ್ದರು. ಇದೀಗ ರಶ್ಮಿಕಾ ಎಲ್ಲ ಟ್ರೋಲ್, ಕಮೆಂಟ್ ಮಾಡುವರಿಗೆ ಉತ್ತರ ನೀಡುವಾಗ ರಕ್ಷಿತ್ ಜೊತೆಗಿನ ಸಂಬಂಧದ ಬಗ್ಗೆಯೂ ಹೇಳಿಕೊಂಡಿದ್ದಾರೆ.

ರಶ್ಮಿಕಾ ಹೇಳಿದ್ದೇನು?
“ನಾನು ಇಷ್ಟು ದಿನ ಸೈಲೆಂಟ್ ಆಗಿ ಇರುವುದಕ್ಕೆ ನನ್ನನ್ನು ಕ್ಷಮಿಸಿ. ನಾನು ಸುಮಾರು ದಿನದಿಂದ ಗಮನಿಸುತ್ತಿದ್ದೀನಿ. ನನ್ನ ಬಗ್ಗೆ ಸಾಕಷ್ಟು ಕತೆಗಳು, ಲೇಖನಗಳು, ಕಮೆಂಟ್ಸ್ ಹಾಗೂ ಟ್ರೋಲ್ ಮಾಡುತ್ತಿರುವುದನ್ನು ಗಮನಿಸುತ್ತಿದ್ದೀನಿ. ನೀವು ನನ್ನನ್ನು ಈ ರೀತಿ ತೋರಿಸುವುದನ್ನು ನೋಡಿ ನಾನು ಸಾಕಷ್ಟು ಬೇಸತ್ತಿದ್ದೇನೆ. ಇದಕ್ಕೆ ನಾನು ನಿಮ್ಮನ್ನು ದೂರುವುದಿಲ್ಲ. ಏಕೆಂದರೆ ನೀವು ಇದನ್ನೇ ನಂಬುತ್ತೀರಾ” ಎಂದು ಪೋಸ್ಟ್ ಮಾಡಿದ್ದಾರೆ.

ಯಾರನ್ನು ಅಥವಾ ಯಾವುದೋ ವಿಷಯಕ್ಕೆ ಸಮರ್ಥಿಸಿಕೊಳ್ಳಲು ನಾನು ಇಲ್ಲಿ ಇಲ್ಲ. ಸದ್ಯ ಈ ರೀತಿಯ ವಿಷಯಗಳಿಗೆ ನಾನು, ರಕ್ಷಿತ್ ಅಥವಾ ಚಿತ್ರರಂಗದಲ್ಲಿರುವ ಬೇರೆ ಯಾವುದೇ ವ್ಯಕ್ತಿಗೆ ಈ ರೀತಿ ಸಮಸ್ಯೆಯಾಗಬಾರದು. ಮತ್ತೊಂದು ವಿಷಯ ಹೇಳಲು ಇಷ್ಟಪಡುತ್ತೇನೆ. ಪ್ರತಿಯೊಂದು ನಾಣ್ಯಕ್ಕೆ ಎರಡು ಮುಖ ಇದ್ದಂತೆ, ಪ್ರತಿಯೊಂದು ಕತೆಗೂ ಎರಡು ಕತೆಗಳಿರುತ್ತದೆ ಎಂದು ಹೇಳಿದ್ದಾರೆ.

ಸದ್ಯ ಚಿತ್ರರಂಗದಲ್ಲಿ ಕೆಲಸ ಮಾಡುವವರನ್ನು ನೆಮ್ಮದಿಯಿಂದ ಕೆಲಸ ಮಾಡಲು ಬಿಡಿ ಎಂದು ಹೇಳುತ್ತಾ ನನ್ನ ಮಾತನ್ನು ಮುಗಿಸುತ್ತೀನಿ. ಅಲ್ಲದೇ ನಾನು ಕನ್ನಡ ಚಿತ್ರಗಳಲ್ಲಿ ನಟಿಸಲು ಮುಂದುವರೆಸುತ್ತೇನೆ. ಯಾವುದೇ ಭಾಷೆಯಾಗಲಿ, ಯಾವುದೇ ಚಿತ್ರರಂಗ ಆಗಲಿ ನಾನು ನನ್ನ ಬೆಸ್ಟ್ ಶಾಟ್ ನೀಡುತ್ತೇನೆ. ನಾನು ಇಲ್ಲೇ ಇರಲು ಬಂದಿದ್ದೇನೆ. ಧನ್ಯವಾದಗಳು ಎಂದು ರಶ್ಮಿಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಹಾಗಾದ್ರೆ ರಕ್ಷಿತ್ ಹೇಳಿದ್ದೇನು?
ನೀವು ರಶ್ಮಿಕಾ ಬಗ್ಗೆ ಪೂರ್ವಾಗ್ರಹ ಅಭಿಪ್ರಾಯವನ್ನು ಹೊಂದಿದ್ದೀರಿ. ನಾನು ಯಾವುದೇ ಕಾರಣಕ್ಕೂ ನಿಮ್ಮನ್ನು ದೂಷಿಸುವುದಿಲ್ಲ ಯಾಕೆಂದರೆ ಕೆಲ ವಿಚಾರಗಳಿಂದಾಗಿ ನೀವು ಈ ನಿರ್ಧಾರಕ್ಕೆ ಬಂದಿದ್ದೀರಿ. ನಾನು ರಶ್ಮಿಕಾಳನ್ನು ಎರಡು ವರ್ಷದಿಂದ ನೋಡುತ್ತಿದ್ದು, ಆಕೆ ಏನು ಎನ್ನುವುದು ನಿಮಗೆಲ್ಲರಿಗಿಂತಲೂ ಚೆನ್ನಾಗಿ ನನಗೆ ತಿಳಿದಿದೆ. ದಯವಿಟ್ಟು ಆಕೆಯ ಮೇಲೆ ದೂಷಣೆ ಮಾಡುವುದನ್ನು ನಿಲ್ಲಿಸಿ. ಆಕೆಯನ್ನು ಶಾಂತಿಯಿಂದ ಇರಲು ಬಿಡಿ. ದಯವಿಟ್ಟು ಯಾವುದೇ ಮಾಧ್ಯಮಗಳ ಸುದ್ದಿಯನ್ನು ನಂಬಲು ಹೋಗಬೇಡಿ. ಯಾರೊಬ್ಬರು ನನ್ನಿಂದ ಅಥವಾ ರಶ್ಮಿಕಾಳಿಂದ ಈ ವಿಚಾರದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿಲ್ಲ. ಹಲವು ಮಂದಿ ಅವರ ಊಹೆಗೆ ತಕ್ಕಂತೆ ಅವರಿಗೆ ಬೇಕಾದಂತೆ ಸುದ್ದಿಗಳನ್ನು ಸೃಷ್ಟಿಸುತ್ತಿದ್ದಾರೆ. ಆದರೆ ಊಹೆಗಳು ಯಾವತ್ತೂ ವಾಸ್ತವವಲ್ಲ ಅಂತಾ ದೀರ್ಘವಾಗಿ ಫೇಸ್ ಬುಕ್ ನಲ್ಲಿ ರಕ್ಷಿತ್ ಬರೆದುಕೊಂಡಿದ್ದರು.

ರಶ್ಮಿಕಾ ಸಹ ದೀರ್ಘ ಸಾಲುಗಳುಳ್ಳ ಫೋಟೋವನು ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದರೂ, ಬ್ರೇಕಪ್ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟನೆ ನೀಡದೇ ಜಾಣ ಉತ್ತರ ನೀಡಿದ್ದಾರೆ. ಎಲ್ಲಿಯೂ ತಮ್ಮಿಬ್ಬರ ಮಧ್ಯೆ ಬ್ರೇಕಪ್ ಆಗಿದೆಯಾ? ಅಥವಾ ಇಲ್ಲವಾ ಅಥವಾ ಮದುವೆ ಆಗ್ತಾರಾ? ಎಂಬುದರ ಬಗ್ಗೆ ಓದುಗರು ಇನ್ನು ಗೊಂದಲದಲ್ಲಿದ್ದಾರೆ. ಈ ಮೊದಲು ರಕ್ಷಿತ್ ಶೆಟ್ಟಿಯ ಸ್ಪಷ್ಟನೆಯಲ್ಲಿಯೂ ಇದೇ ಗೊಂದಲ ಮೂಡಿತ್ತು. ಹೀಗಾಗಿ ಜನ ಪತ್ರವನ್ನು ಓದಿ ಇನ್ನೂ ಸರಿಯಾದ ಸರಿಯಾದ ಸ್ಪಷ್ಟನೆ ಸಿಕ್ಕಿಲ್ಲ ಎಂದು ಫೇಸ್‍ಬುಕ್‍ನಲ್ಲಿ ಕಮೆಂಟ್ ಹಾಕೋಕೆ ಶುರು ಮಾಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

 

View this post on Instagram

 

With all due respect… ????????????????

A post shared by Rashmika Mandanna ???? (@rashmika_mandanna) on

Click to comment

Leave a Reply

Your email address will not be published. Required fields are marked *