ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ(Eidgah Maidan) ಕೊನೆಗೂ ಬಾಡಿಗೆ ಕಾರು ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ.
ಗಣೇಶೋತ್ಸವದ(Ganeshotsav) ಹಿನ್ನೆಲೆಯಲ್ಲಿ ಪಾರ್ಕಿಂಗ್(Parking) ಮಾಡುತ್ತಿದ್ದ ಬಾಡಿಗೆ ವಾಹನಗಳನ್ನು ಖಾಲಿ ಮಾಡಿಸಿದ್ದ ಹುಬ್ಬಳ್ಳಿ-ಧಾರವಾಡ(Hubballi-Dharwad) ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆ ಹಬ್ಬ ಮುಗಿದು 15 ದಿನಗಳು ಕಳೆದಿದ್ದರೂ ಮತ್ತೆ ಪಾರ್ಕಿಂಗ್ ಗೆ ಅವಕಾಶ ನೀಡಿರಲಿಲ್ಲ.
Advertisement
Advertisement
ಈ ಬಗ್ಗೆ ಸಾಕಷ್ಟು ಬಾರಿ ಪೊಲೀಸ್ ಆಯುಕ್ತರು ಮತ್ತು ಪಾಲಿಕೆ ಮೇಯರ್ ಗೆ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿರಲಿಲ್ಲ. ಮೈದಾನದಲ್ಲಿ ಕಾರು ಪಾರ್ಕಿಂಗ್ ಇಲ್ಲದ ಕಾರಣ ಸಕಾಲದಲ್ಲಿ ಬಾಡಿಗೆ ಬಾರದೇ ನೂರಾರು ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಡಿಜೆ ಆಫ್ ಮಾಡಿ ಎಂದ ಪೊಲೀಸರು – ಯುವಕರಿಂದ ಕಲ್ಲು ತೂರಾಟ
Advertisement
ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾಗಿತ್ತು. ಸುದ್ದಿ ಪ್ರಸಾರವಾದ ಬಳಿಕ ಎಚ್ಚೆತ್ತ ಅಧಿಕಾರಿಗಳು ಕೊನೆಗೂ, ಮೈದಾನ ಮುಖ್ಯ ಗೇಟ್ ಬೀಗ ತೆರೆದು ಕಾರ್ ಪಾರ್ಕಿಂಗ್ ಅವಕಾಶ ನೀಡಿದ್ದಾರೆ.
Advertisement
Live Tv
[brid partner=56869869 player=32851 video=960834 autoplay=true]