ಬೆಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಇಷ್ಟದ ಕಾರು ಸಿಕ್ಕ ಬಳಿಕ ಅವರು ಕೋರಿದ್ದ ನಿವಾಸವನ್ನೇ ನೀಡಲು ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ.
ಕಳೆದ ಕೆಲ ಹಿಂದೆಯಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾರಿಗೆ ಬೇಡಿಕೆ ಇಟ್ಟು ಪಡೆದಿದ್ದ ಜಮೀರ್, ತಮಗೇ ಸ್ಯಾಂಕಿ ಟ್ಯಾಂಕ್ ಬಳಿಯ ನಂಬರ್ 30 ನಿವಾಸ ಬೇಕೆಂದು ಪಟ್ಟು ಹಿಡಿದ್ದರು. ಆದರೆ ಈ ನಿವಾಸವನ್ನು ಈಗಾಗಲೇ ಸಿಎಂ ಎಚ್‍ಡಿಕೆ, ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಅವರಿಗೆ ನೀಡಿದ್ದರು.
ಇದರಂತೆ ಜಮೀರ್‍ಗೆ ಜಹಮಹಲ್ 3/ಬಿ ಸರ್ಕಾರಿ ನಿವಾಸ ನೀಡಲಾಗಿತ್ತು. ಆದರೆ ಸದ್ಯ ಜಮೀರ್ ಅವರ ಕೋರಿಕೆ ಮೇಲೆ ಹೆಚ್‍ಡಿಕೆ ಸ್ಯಾಕಿ ರಸ್ತೆಯ ನಂಬರ್ 30 ನಿವಾಸವನ್ನು ನೀಡಲು ಮುಂದಾಗಿದ್ದಾರೆ. ಈ ಕುರಿತು ಸಚಿವ ಜಿಡಿ ದೇವೇಗೌಡ ಅವರ ಬಳಿ ಮಾತನಾಡಿದ್ದು, ಸಿಎಂ ಮನವರಿಗೆ ಜಿಟಿ ದೇಚೇಗೌಡ ಅವರು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸ್ಯಾಂಕಿ ರಸ್ತೆಯ ನಂಬರ್ 30 ನಿವಾಸವನ್ನು ಮಾಜಿ ಸಚಿವ ತನ್ವೀರ್ ಸೇಠ್ ಪಡೆದಿದ್ದರು.
ಇದಕ್ಕೂ ಮೊದಲು ಇಷ್ಟದ ಕಾರು ಕುರಿತು ಪ್ರತಿಕ್ರಿಯೆ ನೀಡಿದ್ದ ಜಮೀರ್, ದೊಡ್ಡ ಕಾರ್ ವಿಚಾರವಾಗಿ ಮಾಧ್ಯಮಗಳು ಪ್ರಕರಣವನ್ನು ದೊಡ್ಡದಾಗಿ ಬಿಂಬಿಸಿದ್ದವು. ಆದರೆ ನಾನು ಹಿಂದಿನ ಸರ್ಕಾರದಲ್ಲಿ ಸುಸಂಬದ್ಧ ಸಿದ್ದರಾಮಯ್ಯ ಬಳಸಿ ಬಿಟ್ಟ ಕಾರ್ ಕೇಳಿದ್ದೇನೆ. ನಾನೇನು ಹೊಸ ಕಾರ್ ಕೇಳಿಲ್ಲ. ಅದೃಷ್ಟದ ಕಾರು ಎಂದು ಸಿದ್ದರಾಮಯ್ಯರ ಕೇಳಿದ್ದೀನಾ ಎಂದು ಪ್ರಶ್ನಿಸಿದ್ದರು.
https://www.youtube.com/watch?v=IAnDqBlAxkQ